Neer Dose Karnataka
Take a fresh look at your lifestyle.

ಶ್ರೀ ಮಂಜುನಾಥ ಸ್ವಾಮಿಯ ಲಿಂಗವು ಧರ್ಮಸ್ತಳದಲ್ಲಿಯೇ ನೆಲೆಸಲು ಕಾರಣವೇನು ನಿಮಗೆ ಗೊತ್ತೇ??

ನಿಮ್ಮ ಜೀವನದಲ್ಲಿ ನೀವು ಒಮ್ಮೆಯಾದರೂ ಪುಣ್ಯನದಿ ನೇತ್ರಾವತಿಯಲ್ಲಿ ಸ್ಥಾನ ಮಾಡಿಕೊಂಡು ಪುಣ್ಯಕ್ಷೇತ್ರವಾದ ಧರ್ಮಸ್ಥಳದಲ್ಲಿ ನೆಲೆಸಿರುವ ಮಂಜುನಾಥ ಸ್ವಾಮಿಯ ದರ್ಶನವನ್ನು ಮಾಡಿರುತ್ತೀರಿ. ಕೇವಲ ನೀವಷ್ಟೇ ಅಲ್ಲ ವಿಶ್ವದ ಮೂಲೆ ಮೂಲೆಯಿಂದ ಭಕ್ತಾದಿಗಳು ಈ ಪುಣ್ಯ ಕ್ಷೇತ್ರಕ್ಕೆ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ. ಆದರೆ ನೀವು ಹಲವಾರು ಬಾರಿ ತೆರಳಿರುವ ಪುಣ್ಯಕ್ಷೇತ್ರದ ಬಗ್ಗೆ ನಿಮಗೆಷ್ಟು ತಿಳಿದಿದೆ?? ಈ ಪುಣ್ಯಕ್ಷೇತ್ರದ ಇತಿಹಾಸವಾದರೂ ಏನು ಎಂಬುದು ನಿಮಗೆ ಗೊತ್ತೆ ಬನ್ನಿ ಈ ಕುರಿತು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಇಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಜುನಾಥ ಸ್ವಾಮಿಯ ಲಿಂಗವು ನೆಲೆಸಿದೆ. ಸುಮಾರು 700 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ವರ್ಷಪೂರ್ತಿ ಕೋಟ್ಯಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹೀಗೆ ಆಗಮಿಸಿದ ಪ್ರತಿಯೊಬ್ಬರೂ ಕೂಡ ಹ’ಸಿದುಕೊಂಡು ಹೋಗಬಾರದು ಎಂದು ಊಟದ ವ್ಯವಸ್ಥೆಯೂ ಕೂಡ ಇದೆ. ಇನ್ನು ಈ ದೇವಸ್ಥಾನದ ಸ್ವಾಮಿಯನ್ನು ಹೇಗೆ ಪ್ರತಿಷ್ಠಾಪನೆ ಮಾಡಲಾಯಿತ್ತು ಎಂಬುದನ್ನು ಗಮನಿಸುವುದಾದರೇ ಮಂಗಳೂರು ಜಿಲ್ಲೆಯ ಕದ್ರಿ ಎಂಬ ಪ್ರದೇಶದಿಂದ ಮಂಜುನಾಥಸ್ವಾಮಿಯ ಲಿಂಗವನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ. ಇಲ್ಲಿ ಮಂಜುನಾಥಸ್ವಾಮಿಯ ಲಿಂಗರೂಪದಲ್ಲಿ ನೆಲೆಸಿರುವ ಕಾರಣ ಏನು ಎಂಬುದರ ಕುರಿತು ನಾವು ಗಮನಹರಿಸುವುದಾದರೆ ಅದರ ಹಿಂದೆ ಒಂದು ದೊಡ್ಡ ಕಥೆಯೇ ಇದೆ ಬನ್ನಿ ಎರಡು ನಿಮಿಷ ಸಮಯವಿದ್ದರೆ ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ.

ಒಮ್ಮೆ ಜಗತ್ತನ್ನು ಕಾಯುವ ಮಹಾಶಿವನಿಗೆ ಭೂಮಿಯ ಮೇಲೆ ಧ’ರ್ಮ ಕೊನೆಗೊಳ್ಳುತ್ತದೆ ಎಂಬ ಭಾವನೆ ಮೂಡುತ್ತದೆ, ನನ್ನಲ್ಲಿ ಮೂಡಿದ ಭಾವನೆ ಸತ್ಯವೋ ಅಥವಾ ಸುಳ್ಳು ಎಂಬುದನ್ನು ಪರೀಕ್ಷೆ ಮಾಡಲು ಸಿದ್ಧನಾಗಿ ಈಶ್ವರನು ನಾಲ್ವರು ಪ್ರಮಥ ಗಣಗಳನ್ನು ಭೂಲೋಕಕ್ಕೆ ಕಳುಹಿಸಿದನು. ಕಾಳರಾಹು, ಕುಮಾರಸ್ವಾಮಿ, ಕಾಳರ್ಕಾಯ್ ಮತ್ತು ಕನ್ಯಾಕುಮಾರಿ. ಹೀಗೆ ಈ ನಾಲ್ವರು ಪ್ರಮಥ ಗಣಗಳು ಭೂಮಿಯ ಮೇಲೆ ಧರ್ಮದ ಬಗ್ಗೆ ಮೂಡಿರುವ ಭಾವನೆಗಳನ್ನು ಇಡೀ ಭೂಮಂಡಲದಲ್ಲಿ ತಿರುಗಾಡುತ್ತಾ ಧ’ರ್ಮ-ಕ’ರ್ಮ ಹಾಗೂ ಮಾನವೀಯತೆ ಗಳನ್ನು ಮರೆತಿರುವ ಜನರನ್ನು ಶಿ’ಕ್ಷಿಸುತ್ತಾ ಅದೇ ದಾರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯ ದಡಕ್ಕೆ ಕೂಡ ಬರುತ್ತಾರೆ.

ಹೀಗೆ ನೇತ್ರಾವತಿಯ ನದಿಯ ದಡಕ್ಕೆ ಬಂದಾಗ ಅಲ್ಲಿ ವಿಚಾರಿಸಿದಾಗ ಪಕ್ಕದಲ್ಲೇ ಇದ್ದ ನೆಲ್ಯಾಡಿ ಬೀಡಿನ ಒಡೆಯರಾಗಿರುವ ಬಿರ್ಮಣ್ಣ ಹೆಗ್ಗಡೆ ಹಾಗೂ ಅಮ್ಮು ಬಲ್ಲಾಳ್ತಿ ದಂಪತಿಗಳನ್ನೂ ಕೂಡ ಪರೀಕ್ಷೆಗೆ ಒಳಪಡಿಸುತ್ತಾರೆ. ಈ ಪರೀಕ್ಷೆಯಲ್ಲಿ ದಂಪತಿಗಳ ದಾನ ಧರ್ಮಗಳ ಕುರಿತು ತಿಳಿದುಬರುತ್ತದೆ, ಇದನ್ನು ಕಂಡು ಬಹಳ ಸಂತೋಷದಿಂದ ನಾಲ್ವರು ಪ್ರಮಥ ಗಣಗಳು ಅಚ್ಚರಿ ವ್ಯಕ್ತಪಡಿಸಿ ಅಂದು ರಾತ್ರಿ ನೆಲ್ಯಾಡಿ ಬೀಡಿನಲ್ಲಿ ಮಲಗಿ ಮುಂಜಾನೆ ತಮ್ಮ ಕೆಲಸವನ್ನು ಮುಂದುವರೆಸಲು ನಿರ್ಧಾರ ಮಾಡುತ್ತಾರೆ.

ಅದೇ ದಿನ ರಾತ್ರಿ ಬಿರ್ಮಣ್ಣ ಹೆಗ್ಗಡೆಯವರಿಗೆ ಒಂದು ಕನಸು ಬೀ’ಳುತ್ತದೆ, ತಾವು ಮಹಾನ್ ಮಹದೇವನ ಪ್ರಮಥ ಗಣಗಳು ನಮಗೆ ನೆಲ್ಯಾಡಿ ಬೀಡಿನಲ್ಲಿ ನೆಲೆಸಲು ಇಷ್ಟವಾಗಿದೆ ನೀವು ನಿಮ್ಮ ಮನೆಯನ್ನು ಬಿಟ್ಟು ಕೊಟ್ಟು ಬೇರೆ ಮನೆಯನ್ನು ಕಟ್ಟಿಕೊಳ್ಳಿ ಎಂದು ಕನಸಿನಲ್ಲಿ ಆದೇಶ ನೀಡುತ್ತಾರೆ. ಮರುದಿನ ಬೆಳಗ್ಗೆ ಎದ್ದ ಕೂಡಲೇ ಹೆಗ್ಗಡೆಯವರು ನೋಡಿದಾಗ ಯಾವುದೇ ದೈವಗಳು ಅಲ್ಲಿ ಇರುವುದಿಲ್ಲ. ಆದರೆ ಕನಸನ್ನು ನಿರ್ಲಕ್ಷ ಮಾಡದೇ ಹೆಗ್ಗಡೆಯವರು ದೈವಗಳು ಕನಸಿನಲ್ಲಿ ಬಂದು ಆದೇಶ ನೀಡಿದಂತೆ 4 ದೈವಗಳಿಗೆ ಪ್ರತ್ಯೇಕವಾದ ಗುಡಿಯನ್ನು ಕಟ್ಟಿಸಿ ತಮ್ಮ ಮನೆಯನ್ನು ತೊರೆದು ನೆಲ್ಯಾಡಿ ಬೀಡನ್ನು ದೈವಗಳಿಗೆ ಬಿಟ್ಟುಕೊಡುತ್ತಾರೆ.

ಈ ನಾಲ್ಕು ಗಣಗಳನ್ನು ಹೊರತುಪಡಿಸಿ ಶಿವನ ಪ್ರಮಥ ಗಣಗಳಲ್ಲಿ ಒಬ್ಬರಾಗಿರುವ ಗಣಮಣಿ ಎಂಬ ಪ್ರಮಥ ಗಣ ಯಾರಿಗೂ ತಿಳಿಯದಂತೆ ಮಹಾಶಿವನ ಆದೇಶದ ಮೇರೆಗೆ ಭೂಮಿಗೆ ಬಂದು ನೆಲ್ಯಾಡಿ ಗ್ರಾಮದಲ್ಲಿ ವೇಷಮರೆಸಿಕೊಂಡು ಅಣ್ಣಪ್ಪ ಎಂಬ ಹೆಸರಿನಲ್ಲಿ ನೆಲೆಸಿರುತ್ತಾರೆ. ಈ ನಾಲ್ಕು ದೇವಾಲಯಗಳು ನಿರ್ಮಾಣವಾದ ಬಳಿಕ ಕೆಲವು ಶಿವಯೋಗಿಗಳು ಹೆಗ್ಗಡೆಯವರ ನೆಲ್ಯಾಡಿ ಬೀಡಿಗೆ ಭೇಟಿ ನೀಡುತ್ತಾರೆ. ಇನ್ನೂ ಹೆಗ್ಗಡೆಡೆರವರ ಆತಿಥ್ಯ ಸ್ವೀಕರಿಸುವಾಗ ನಾವು ಶಿವನ ಪೂಜೆ ಮಾಡದೆ ಯಾವುದೇ ಭೋಜನ ಸ್ವೀಕರಿಸುವುದಿಲ್ಲ ಎಂದು ಹೇಳುತ್ತಾರೆ. ಇದನ್ನು ಕಂಡ ಹೆಗ್ಗಡೆಯವರು ಸುತ್ತಮುತ್ತ ಎಲ್ಲಿಯೂ ಶಿವನ ಸಾನಿಧ್ಯವೇ ಇಲ್ಲ ಏನು ಮಾಡುವುದು ಎಂಬ ಚಿಂತೆ ಇಲ್ಲಿ ರಾತ್ರಿ ಕಳೆಯಲು ನಿರ್ಧಾರಮಾಡಿ ಮಲಗುತ್ತಾರೆ.

ವಿಶೇಷವೇನೆಂದರೆ ಆಗ ಮತ್ತೊಮ್ಮೆ ಧರ್ಮ ದೇವತೆಗಳು ಹೆಗ್ಗಡೆರವರ ಕನಸಿನಲ್ಲಿ ಕಾಣಿಸಿಕೊಂಡು ನೆಲ್ಯಾಡಿ ಬೀಡಿನಲ್ಲಿ ನೆಲೆಸಿರುವವ ಅಣ್ಣಪ್ಪ ರವರನ್ನು ಈ ಕೂಡಲೇ ಮಂಗಳೂರು ಜಿಲ್ಲೆಯ ಕದ್ರಿ ಪ್ರದೇಶಕ್ಕೆ ಕಳುಹಿಸಿ ಅಲ್ಲಿ ನೆಲೆಸಿರುವ ಶಿವಲಿಂಗವನ್ನು ತರಿಸುವಂತೆ ಹೆಗ್ಗಡೆಯವರಿಗೆ ಪ್ರೇರಣೆ ನೀಡುತ್ತಾರೆ. ಈ ಕನಸಿನಿಂದ ಪ್ರೇರಣೆಗೊಂಡ ಹೆಗ್ಗಡೆಯವರು ಅಣ್ಣಪ್ಪ ರವರನ್ನು ಹುಡುಕಿ ಕರೆತಂದು ಮಂಗಳೂರು ಜಿಲ್ಲೆಯ ಕದ್ರಿಗೆ ತೆರಳಿ ಶಿವಲಿಂಗ ತೆಗೆದುಕೊಂಡು ಬರುವಂತೆ ಮನವಿ ಮುಂದಿಡುತ್ತಾರೆ. ಆದರೆ ಮಂಗಳೂರು ಜಿಲ್ಲೆಯ ಕದ್ರಿಯಲ್ಲಿ ನೆಲೆಸಿರುವ ಶಿವಲಿಂಗಕ್ಕೆ ನೂರಾರು ಪ್ರಮಥ ಗಣಗಳು ಕಾವಲಿರುತ್ತಾರೆ, ಎಲ್ಲರೂ ಅಣ್ಣಪ್ಪ ನನ್ನು ತಡೆಯಲು ಪ್ರಯತ್ನ ಮಾಡುತ್ತಾರೆ. ಆದರೆ ಎಲ್ಲಾ ಪ್ರಮಥ ಗಣಗಳನ್ನೂ ಮೀರಿಸಿ ಅಣ್ಣಪ್ಪನವರು ಒಂದು ರಾತ್ರಿ ಕಳೆಯುವ ಹೊತ್ತಿಗೆ ಶಿವಲಿಂಗವನ್ನು ತಂದು ನೆಲ್ಯಾಡಿ ಬೀಡಿನಲ್ಲಿ ಪ್ರತಿಷ್ಠಾಪಿಸುತ್ತಾರೆ.

ಹೀಗೆ ಅಣ್ಣಪ್ಪ ನವರು ಅಂದು ತಂದ ಶಿವಲಿಂಗವೇ ಇಂದು ನಮ್ಮ ನಿಮ್ಮೆಲ್ಲರ ನೆಚ್ಚಿನ ಆರಾಧ್ಯದೈವ ನಮ್ಮನ್ನು ಕಾಪಾಡುತ್ತಿರುವ ಶ್ರೀ ಮಂಜುನಾಥ ಸ್ವಾಮಿ ಲಿಂಗ. ಸಾಕ್ಷಾತ್ ಮಹೇಶ್ವರ ಕರ್ನಾಟಕದ ಪುಣ್ಯಕ್ಷೇತ್ರ ಎನಿಸಿಕೊಂಡಿರುವ ಧರ್ಮಸ್ಥಳದಲ್ಲಿ ಬಂದು ನೆಲೆಸಲು ಅಣ್ಣಪ್ಪ ರವರನ್ನು ಸೇವಕರನ್ನಾಗಿ ಆಯ್ಕೆಮಾಡಿಕೊಂಡಿದ್ದರು ಎನ್ನಲಾಗಿದೆ. ಇದೆಲ್ಲಾ ಆದ ಬಳಿಕ ಹೆಗ್ಗಡೆಯವರು ಅಣ್ಣಪ್ಪ ಅವರು ಸಾಮಾನ್ಯರಲ್ಲ ಎಂದು ತಿಳಿದುಕೊಂಡು ಪ್ರಶ್ನೆ ಮಾಡಿದಾಗ ಅಣ್ಣಪ್ಪನವರು ತಮ್ಮ ನಿಜ ಸ್ವರೂಪವನ್ನು ತೋರಿಸಿ ನಾನು ಶಿವನ ಪ್ರಮಥ ಗಣ ಗಣಮಣಿ ಎಂದು ಹೇಳುತ್ತಾರೆ. ಇದೀಗ ನಾನು ನಿಮಗೆ ನನ್ನ ನೈಜಸ್ವರೂಪವನ್ನು ತೋರಿಸಿದ್ದೇನೆ, ನನಗೂ ಒಂದು ಗುಡಿಕಟ್ಟಿಸಿ ಕೊಡಿ ನಾನು ನಿರಂತರವಾಗಿ ನೆಲ್ಯಾಡಿ ಬೀಡು ಮತ್ತು ಹೆಗ್ಗಡೆರವರ ಕುಟುಂಬವನ್ನು ಕಾಪಾಡಿಕೊಂಡು ಬರುತ್ತೇನೆ ಎಂದು ಆದೇಶ ನೀಡುತ್ತಾರೆ. ಇವರ ಆದೇಶದಂತೆ ಬಿರ್ಮಣ್ಣ ಹೆಗ್ಗಡೆರವರ ಅಣ್ಣಪ್ಪ ರವರಿಗೂ ಪ್ರತ್ಯೇಕ ದೇವಸ್ಥಾನ ಮಾಡಿ ಪುಣ್ಯಕ್ಷೇತ್ರ ಶ್ರೀ ಧರ್ಮಸ್ಥಳದಲ್ಲಿ ನಡೆಸುವಂತೆ ಮಾಡುತ್ತಾರೆ

Comments are closed.