Neer Dose Karnataka
Take a fresh look at your lifestyle.

ಬಿಜೆಪಿ ಅಭಿಮಾನಿಗಳು ಫುಲ್ ಖುಷ್. ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿದ್ದು ಮೋದಿಗೆ ವರದಾನವಾಗಲಿದೆಯೇ??

ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಇಂದು ರೈತರು ದಾಖಲು ಮಾಡಿದ ಕೃಷಿ ಕಾಯ್ದೆಗಳ ರದ್ಧತಿಯ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಅನುವು ನೀಡದೆ ತಾತ್ಕಾಲಿಕವಾಗಿ ತಡೆ ನೀಡಿ ಮುಂದಿನ ಆದೇಶದವರೆಗೂ ಕೃಷಿ ಕಾಯ್ದೆಗಳ ಜಾರಿಯನ್ನು ಅಮಾನತುಗೊಳಿಸುವುದಾಗಿ ಹೇಳಿಕೆ ನೀಡಿದೆ. ಅಷ್ಟೇ ಅಲ್ಲದೆ ಸುಪ್ರೀಂಕೋರ್ಟ್ ತನ್ನ ಅಧಿಕಾರವನ್ನು ಬಳಸಿಕೊಂಡು ಸಮಸ್ಯೆಯನ್ನು ಬಗೆಹರಿಸಲು ನಿರ್ಧಾರ ಮಾಡಿ ಸಮಿತಿ ರಚಿಸಿ ಕೃಷಿ ಕಾಯಿದೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ವರದಿ ನೀಡುವಂತೆ ಆದೇಶ ನೀಡಿದೆ.

ಈ ತೀರ್ಪು ಹೊರಬಿದ್ದ ತಕ್ಷಣ ವಿಪಕ್ಷಗಳು ಹಾಗೂ ದೆಹಲಿಯ ಗಡಿಯಲ್ಲಿ ಕುಳಿತಿರುವ ರೈತರು ಬಹಳ ಸಂತಸಗೊಂಡಿದ್ದಾರೆ. ವಿಪಕ್ಷಗಳು ನರೇಂದ್ರ ಮೋದಿ ರವರ ನೇತೃತ್ವದ ಸರ್ಕಾರದ ಕೃಷಿ ಕಾಯ್ದೆಗಳಿಗೆ ಬಹುತೇಕ ಬ್ರೇಕ್ ಬಿದ್ದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಇದರಿಂದ ಬಿಜೆಪಿ ಪಕ್ಷ ನಿಜಕ್ಕೂ ಖುಷಿಯಾಗಿದೆ ಎಂದು ಹೇಳಿದರೇ ತಪ್ಪಾಗಲಾರದು. ಯಾಕೆಂದರೆ ಸುಪ್ರೀಂಕೋರ್ಟ್ ಸುಖಾಸುಮ್ಮನೆ ಕೃಷಿ ಕಾಯ್ದೆಗಳನ್ನು ರದ್ದತಿ ಗೊಳಿಸುತ್ತೇವೆ ಎಂದಿಲ್ಲ, ಬದಲಾಗಿ ಇರುವ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಗಣಿಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದೆ.

ಇದು ನಿಜಕ್ಕೂ ಬಿಜೆಪಿ ಪಕ್ಷಕ್ಕೆ ವರದಾನವಾಗಲಿದೆ ಯಾಕೆಂದರೆ ಈ ತೀರ್ಪಿನಿಂದ ದೆಹಲಿಯ ಗಡಿಯಲ್ಲಿರುವ ರೈತರು ಮರಳಿ ತಮ್ಮ ವಾಸಸ್ಥಾನ ಗಳಿಗೆ ತೆರಳಲಿದ್ದಾರೆ ಆ ಮೂಲಕ ಪ್ರತಿಭಟನೆ ನಿಲ್ಲಲಿದೆ ಹಾಗೂ ಎರಡನೆಯದಾಗಿ ಈ ಸಮಿತಿ ಕೃಷಿ ಕಾಯ್ದೆಗಳಲ್ಲಿ ಇರುವ ಸಮಸ್ಯೆಗಳನ್ನು ವರದಿ ಮಾಡುವ ಸಮಯದಲ್ಲಿ ಮೊದಲಿನಿಂದಲೂ ಬಿಜೆಪಿ ಪಕ್ಷ ಮಂಡಿಸುತ್ತಿರುವ ವಾದದಂತೆ ಕೃಷಿ ಕಾಯ್ದೆಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಚಿಕ್ಕ ಪುಟ್ಟ ಸಮಸ್ಯೆಗಳಿದ್ದರೂ ಕೂಡ ಅದಕ್ಕೆ ಸೂಕ್ತ ಪರಿಹಾರಗಳಿವೆ ಎಂಬುದನ್ನು ನಿರೂಪಿಸಿದರೆ ಸಮಿತಿಯ ವರದಿಯಲ್ಲಿ ತೀರ್ಪು ಕೇಂದ್ರ ಸರ್ಕಾರದ ಪರ ಬರಲಿದೆ. ಒಂದು ವೇಳೆ ಅದೇ ನಡೆದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಯಾರು ಕೂಡ ಪ್ರತಿಭಟನೆಗೆ ಮುಂದಾಗಲು ಸಾಧ್ಯವಿಲ್ಲ ಹಾಗೂ ವಿಪಕ್ಷಗಳ ಲೆಕ್ಕಾಚಾರ ಕೂಡ ಉಂಟಾಗಲಿದ್ದು ಕೃಷಿ ಕಾಯ್ದೆಗಳು ದೇಶದೆಲ್ಲೆಡೆ ಜಾರಿಯಾಗಲಿವೆ.

Comments are closed.