Neer Dose Karnataka
Take a fresh look at your lifestyle.

ಜಗನ್ ಗೆ ಬಿಗ್ ಶಾಕ್, ಅಖಾಡಕ್ಕೆ ಬಿಜೆಪಿ ಪಕ್ಷದ ಹೈ ಕಮಾಂಡ್, ಮೊದಲೇ ಹೆಜ್ಜೆ ಇಟ್ಟ ಬಿಜೆಪಿ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಜಗನ್ ಮೋಹನ್ ರೆಡ್ಡಿ ರವರ ನೇತೃತ್ವದ ಸರ್ಕಾರ ಅಲ್ಪ ಸಂಖ್ಯಾತರ ಮನವೊಲಿಸಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲಿದೆ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಹಿಂದೂ ದೇವಾಲಯಗಳು ಒಂದರ ಮೇಲೊಂದಂತೆ ಅಪವಿತ್ರಗೊಳಿಸುತ್ತಿದ್ದರೂ ಕೂಡ ಜಗನ್ಮೋಹನ್ ರೆಡ್ಡಿ ರವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಇದನ್ನು ಕಂಡ ಜನತೆ ಜಗಮೋಹನ್ ರೆಡ್ಡಿ ರವರ ವಿರುದ್ಧ ತಿರುಗಿಬಿದ್ದಾಗ ಹಲವಾರು ಆಕ್ರೋಶದ ಮಾತುಗಳು ಕೇಳಿ ಬಂದಿದ್ದವು. ಕೊನೆಗೂ ಆಂಧ್ರ ಪ್ರದೇಶದಲ್ಲಿ ಜಗಮೋಹನ್ ರೆಡ್ಡಿ ರವರ ವಿರುದ್ಧ ಹಿಂದುಗಳು ಒಗ್ಗಟ್ಟಾಗಿ ನಿಂತರು. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಜಗಮೋಹನ್ ರೆಡ್ಡಿ ರವರ ವಿರುದ್ಧ ಹಲವರು ಆಕ್ರೋಶದ ಮಾತುಗಳು ಕೇಳಿ ಬಂದಿದ್ದವು.

ಇದನ್ನೆಲ್ಲ ನೋಡಿದ ಕೂಡಲೇ ಎಚ್ಚೆತ್ತುಕೊಂಡ ಜಗನ್ಮೋಹನ್ ರೆಡ್ಡಿ ರವರು ‌ ಕೂಡಲೇ ಹಿಂದುಗಳ ಮನವೊಲಿಸಲು ದೇವಾಲಯಗಳನ್ನು ಸುತ್ತಲು ಆರಂಭಿಸಿದರು. ಇದರ ಅಂಗವಾಗಿಯೇ ಹಲವಾರು ದೇವಾಲಯಗಳ ಪುನರುಜ್ಜೀವನ ಕೆಲಸವನ್ನು ಮಾಡಲು ಭೂಮಿಪೂಜೆ ಕೈಗೊಂಡರು. ತಾನು ಹಿಂದೂ ದೇವಾಲಯಗಳನ್ನು ಉಳಿಸುತ್ತೇನೆ ಎಂಬ ಸಂದೇಶ ಸಾರಲು ಪ್ರಯತ್ನಪಟ್ಟರು. ಆದರೆ ಜಗಮೋಹನ್ ರೆಡ್ಡಿ ರವರ ಐಡಿಯಾ ಫಲಕೊಡುವ ಮುನ್ನವೇ ಬಿಜೆಪಿ ಪಕ್ಷದ ಹೈಕಮಾಂಡ್ ಅಖಾಡಕ್ಕಿಳಿದಿದ್ದಾರೆ.

ಹೌದು ಸ್ನೇಹಿತರೇ ಜಗಮೋಹನ್ ರೆಡ್ಡಿ ಅವರು ಅಲ್ಪಸಂಖ್ಯಾತರನ್ನು ಓಲೈಸಲು ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾ’ಳಿ ನಡೆಯುತ್ತಿದ್ದರೂ ಕೂಡ ಸುಮ್ಮನಿದ್ದಾರೆ, ಅವರು ಸದಾ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಾರೆ ಎಂಬ ವಿಷಯವನ್ನು ಆಂಧ್ರ ಪ್ರದೇಶದ ಮೂಲೆಮೂಲೆಗೆ ತಲುಪಿಸಲು ಬಿಜೆಪಿ ಪಕ್ಷದ ಹೈಕಮಾಂಡ್ ಇದೀಗ ಆಂಧ್ರಪ್ರದೇಶಕ್ಕೆ ಹೆಜ್ಜೆ ಇಡಲು ನಿರ್ಧಾರ ಮಾಡಿದೆ. ಅಲ್ಪಸಂಖ್ಯಾತರನ್ನು ಓಲೈಸಲು ಹಿಂದುಗಳ ಕೈಬಿಟ್ಟಿರುವ ರಾಜಕಾರಣಿಗಳಿಗೆ ಸ್ಪಷ್ಟ ಸಂದೇಶ ರವಾನೆ ಮಾಡಲು 1992 ರ ಎಸ್ಕ್ಯೂ ರಥಯಾತ್ರೆ ರೀತಿ ಆಂಧ್ರಪ್ರದೇಶದಲ್ಲಿ ಆರಂಭಿಸಿ, ಬರೋಬ್ಬರಿ 13 ಜಿಲ್ಲೆಗಳಲ್ಲಿ ರಾಮ ರಥಯಾತ್ರೆ ಮಾಡಿ ಜಗಮೋಹನ್ ರೆಡ್ಡಿ ರವರ ವಿರುದ್ಧ ತೊಡೆ ತಟ್ಟಲು ನಿರ್ಧಾರ ಮಾಡಿದೆ. ಒಂದು ವೇಳೆ ಈ ರಥಯಾತ್ರೆ ಯಶಸ್ವಿಗೊಂಡಲ್ಲಿ, ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ತನ್ನ ಬಲವಾದ ಸಿದ್ಧಾಂತವನ್ನು ಇಟ್ಟುಕೊಂಡು ಪಾರುಪತ್ಯ ಸಾಧಿಸಿರುವ ಬಿಜೆಪಿ ಪಕ್ಷವು ಆಂಧ್ರಪ್ರದೇಶದಲ್ಲಿ ತನ್ನ ಪಾರುಪತ್ಯ ಸ್ಥಾಪಿಸುವಲ್ಲಿ ಮೊದಲ ಹೆಜ್ಜೆ ಇಡಲಿದೆ.

Comments are closed.