Neer Dose Karnataka
Take a fresh look at your lifestyle.

ವಿಪಕ್ಷಗಳಿಗೆ ಮರ್ಮಾಘಾತ, ಯೋಗಿ ನಾಡಿನಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಖಚಿತ ಪಡಿಸಿದ ಸಿಹಿ ಸುದ್ದಿ ನೀಡಿದ ಒವೈಸಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಬಾರಿಯ ಉತ್ತರ ಪ್ರದೇಶದ ಚುನಾವಣೆಯಲ್ಲಿ ‌ ಬಿಜೆಪಿ ಪಕ್ಷವು ಭರ್ಜರಿ ಗೆಲುವನ್ನು ಸಾಧಿಸಿತು. ನರೇಂದ್ರ ಮೋದಿ ರವರ ಅಲೆ ಉತ್ತರಪ್ರದೇಶದಲ್ಲಿ ಅಕ್ಷರಸಹ ಸುನಾಮಿಯಾಗಿ ಬದಲಾಗಿತ್ತು. ಪ್ರಾದೇಶಿಕ ಪಕ್ಷಗಳು ಸೇರಿದಂತೆ ಕಾಂಗ್ರೆಸ್ ಪಕ್ಷ ಸುನಾಮಿಯಲ್ಲಿ ಕೊಚ್ಚಿಕೊಂಡು ಹೋಗಿದ್ದವು. ಮೋದಿ ಅಲೆಗೆ ಇಷ್ಟೆಲ್ಲಾ ನಡೆಯುತ್ತಿರುವ ಸಂದರ್ಭದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬಿಜೆಪಿ ಪಕ್ಷದ ಹೈಕಮಾಂಡ್ ‌ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ರವರನ್ನು ಆಯ್ಕೆ ಮಾಡಿತ್ತು.

ರಾಷ್ಟ್ರರಾಜಕಾರಣದಲ್ಲಿ ಸಂಸದರಾಗಿ ಕಾರ್ಯ ನಿರ್ವಹಿಸುತ್ತಿದ್ದ ಯೋಗಿ ಆದಿತ್ಯನಾಥ್ ರವರು ಯಾರು ಊಹಿಸದ ರೀತಿಯಲ್ಲಿ ರಾಜ್ಯ ರಾಜಕಾರಣಕ್ಕೆ ಎಂಟ್ರಿಕೊಟ್ಟು ಮುಖ್ಯಮಂತ್ರಿಯಾಗಿದ್ದರು. ಇನ್ನು ಯೋಗಿ ಆದಿತ್ಯನಾಥ್ ರವರು ಮುಖ್ಯಮಂತ್ರಿಯಾದ ಬಳಿಕ ಉತ್ತರ ಪ್ರದೇಶ ರಾಜ್ಯವನ್ನು ಅಕ್ಷರಸಹ ಬದಲಾಯಿಸಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ. ಹಲವಾರು ವಾದ-ವಿವಾದಗಳು ಇವರನ್ನು ಸುತ್ತುವರೆದಿದ್ದರೂ ಕೂಡ ದೇಶದ ಅತಿ ಜನಪ್ರಿಯ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ಕಾರ್ಯ ನಿರ್ವಹಣೆ ಮಾಡುತ್ತಿರುವ ಮುಖ್ಯಮಂತ್ರಿ ಯಾರು ಎಂದು ದೇಶದ ಪ್ರತಿಷ್ಠಿತ ಮಾಧ್ಯಮಗಳು ನಡೆಸಿದ ಸರ್ವೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವಷ್ಟು ಸಾಧನೆಯನ್ನು ಯೋಗಿ ಆದಿತ್ಯನಾಥ್ ಅವರು ಮಾಡಿದ್ದಾರೆ.

ಹಲವಾರು ವರ್ಷಗಳಿಂದ ಉತ್ತರಪ್ರದೇಶ ರಾಜ್ಯದಲ್ಲಿ ಯಾರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಜನಾಭಿಪ್ರಾಯ ಕೇಳಿಬಂದಿದೆ. ಇದರ ನಡುವೆ ಇದೀಗ ಬಿಜೆಪಿ ಪಕ್ಷಕ್ಕೆ ರಾಮಮಂದಿರ ಕೂಡ ಒಂದು ವರದಾನವಾಗಲಿದೆ. ಕಳೆದ ಬಾರಿ ಮೋದಿ ರವರ ಅಲೆ ಉತ್ತರ ಪ್ರದೇಶ ರಾಜ್ಯದಲ್ಲಿ 400 ಸೀಟುಗಳನ್ನು ಗೆಲ್ಲುವಂತೆ ಮಾಡಿತ್ತು, ಇನ್ನು ಈ ಬಾರಿ ಮೋದಿ ರವರ ಅಲೆಯ ಜೊತೆ ಯೋಗಿ ಆದಿತ್ಯನಾಥ್ ರವರ ಕಾರ್ಯವೈಕರಿ ಹಾಗೂ ರಾಮಮಂದಿರ ನಿರ್ಮಾಣ ಕಾರ್ಯ ಖಂಡಿತವಾಗಲೂ ಬಿಜೆಪಿ ಪಕ್ಷಕ್ಕೆ ಒಂದು ಬೋನಸ್ ಇದ್ದಂತೆ.

ಈ ಮೂಲಕ ಬಿಜೆಪಿ ಪಕ್ಷವು ಮತ್ತೊಮ್ಮೆ 400ರ ಗಡಿ ದಾಟುವಸ್ಟೇಲ್ಲದೆ ಇನ್ನೂ ಹೆಚ್ಚಿನ ಸಂಖ್ಯೆಗಳಲ್ಲಿ ಸೀಟುಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಜಯ ದಾಖಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಈಗಾಗಲೇ ಅಲ್ಲಿನ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಗೆಲ್ಲಲು ನಿಜಕ್ಕೂ ಒಂದು ಮ್ಯಾಜಿಕ್ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಇಂತಹ ಸಂದರ್ಭದಲ್ಲಿ ವಿಪಕ್ಷಗಳಿಗೆ ಮತ್ತೊಂದು ಶಾಕ್ ಎದುರಾಗಿದೆ, ಆದರೆ ಈ ಶಾಕ್ ನೀಡಿರುವುದು ಬಿಜೆಪಿ ಪಕ್ಷ ಅಲ್ಲ ಅಥವಾ ಬಿಜೆಪಿ ಪಕ್ಷದ ನಾಯಕರಲ್ಲ, ಬದಲಾಗಿ ಬಿಜೆಪಿ ಪಕ್ಷವನ್ನು ಸೋಲಿಸಬೇಕು ಎಂದು ಹರಸಾಹಸ ಮಾಡುತ್ತಿರುವ ಅಲ್ಲಾವುದ್ದೀನ್ ಓವೈಸಿ. ಇದು ಹೇಗೆ ಸಾಧ್ಯ ಎಂದುಕೊಂಡಿರಾ ಸಂಪೂರ್ಣವಾಗಿ ಓದಿ ನಿಮಗೆ ತಿಳಿಯುತ್ತದೆ

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅಖಿಲೇಶ್ ಯಾದವ್ ರವರ ಸಮಾಜವಾದಿ ಪಕ್ಷ ವಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲೀ ಎರಡು ಪಕ್ಷಗಳು ಮುಸ್ಲಿಂ ಸಮುದಾಯವನ್ನು ತಮ್ಮ ಮತ ಬ್ಯಾಂಕುಗಳಾಗಿ ಭದ್ರ ಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ಹಲವಾರು ಮುಸ್ಲಿಮರು ಬಿಜೆಪಿ ಪಕ್ಷಕ್ಕೆ ಮತ ನೀಡುತ್ತಿದ್ದರೂ ಕೂಡ ಬಹುತೇಕರು ಕಾಂಗ್ರೆಸ್ ಅಥವಾ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ರವರ ಕಡೆ ಒಲವು ತೋರುತ್ತಾರೆ. ಈಗಾಗಲೇ ಕಳೆದ 5 ವರ್ಷಗಳಲ್ಲಿ ಹಲವಾರು ಚುನಾವಣೆಗಳಲ್ಲಿ ಸೋತಿರುವ ಕಾರಣ ಗೆಲ್ಲುತ್ತೇವೆ ಎಂದು ಭರವಸೆ ಯಿಂದ ಹೇಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ನಿಜಕ್ಕೂ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಮತಗಳು ಅತ್ಯಗತ್ಯವಾಗಿವೆ.

ಮುಸ್ಲಿಂ ಸಮುದಾಯದ ಮತಗಳು ಇಲ್ಲದೆ ಈ ಎರಡು ಪಕ್ಷಗಳು ಬಿಜೆಪಿ ಪಕ್ಷವನ್ನು ಸೋಲಿಸುವುದು ನಿಜಕ್ಕೂ ಕನಸಿನ ಮಾತಾಗಿದೆ. ಇಂತಹ ಸಂದರ್ಭದಲ್ಲಿ ಅಲ್ಲಾವುದ್ದಿನ್ ಒವೈಸಿ ಉತ್ತರ ಪ್ರದೇಶದಲ್ಲಿ ಸ್ವತಂತ್ರ ಸ್ಪರ್ಧೆಯನ್ನು ಇದೀಗ ಘೋಷಣೆ ಮಾಡಿದ್ದು, ಈ ಮೂರು ಪಕ್ಷಗಳ ನಡುವೆ ಮುಸ್ಲಿಂ ಸಮುದಾಯದ ಮಠಗಳು ವಿಂಗಡನೆಯಾಗುವುದು ಖಚಿತವಾಗಿದೆ. ಮುಸ್ಲಿಂ ಪ್ರಾಬಲ್ಯದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಓವೈಸಿ ಖಚಿತಪಡಿಸಿದ್ದಾರೆ. ಹೀಗೆ ಮೂರು ಪಕ್ಷಗಳ ನಡುವೆ ಮತ ವಿಂಗಡನೆಯಾದರೆ ಖಂಡಿತ ಬಿಜೆಪಿ ಪಕ್ಷಕ್ಕೆ ಚುನಾವಣೆ ಸುಲಭ ತುತ್ತಾಗಲಿದೆ. ಒಂದು ವೇಳೆ ಅದೇ ನಡೆದಲ್ಲಿ ಉತ್ತರ ಪ್ರದೇಶದಲ್ಲಿ ಮತ್ತೆ ಐದು ವರ್ಷಗಳ ಕಾಲ ಐತಿಹಾಸಿಕತೆ ಜಯಯೊಂದಿಗೆ ಬಿಜೆಪಿ ಪಕ್ಷ ಅಧಿಕಾರ ನಡೆಸಲಿದೆ

Comments are closed.