Neer Dose Karnataka
Take a fresh look at your lifestyle.

ಮೊಬೈಲ್ ಕ್ಯಾಮೆರಾ ಮೆಗಾ ಪಿಕ್ಸೆಲ್ ಗೊತ್ತು ! ನಿಮ್ಮ ಹಾಗೂ ಹದ್ದಿನ ಕಣ್ಣಿನ ಮೆಗಾ ಪಿಕ್ಸೆಲ್ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಫೋಟೋ ತೆಗೆದುಕೊಳ್ಳುವ ಕ್ರೇಜ್ ಹೆಚ್ಚಾಗುತ್ತಿದೆ. ಕಿರಿಯರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಕೂಡ ಫೋಟೋ ತೆಗೆದುಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. ಅದರಲ್ಲಿಯೂ ದಿನೇದಿನೇ ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿದೆ, ಯಾರೇ ನೋಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸೆಲ್ಫಿ ಗಳನ್ನು ಸದಾ ಪೋಸ್ಟ್ ಮಾಡುತ್ತಿರುತ್ತಾರೆ.

ಇದಕ್ಕಾಗಿ ಹಲವಾರು ಜನ ಸ್ಮಾರ್ಟ್ಫೋನ್ ಖರೀದಿ ಮಾಡಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಜನರ ಆಸಕ್ತಿಯನ್ನು ಬಂಡವಾಳವನ್ನಾಗಿ ಮಾಡಿಕೊಂಡಿರುವ ಮೊಬೈಲ್ ಕಂಪನಿಗಳು ಮೊಬೈಲ್ ಮುಂದಿನ ಕ್ಯಾಮರಾ ಗಳನ್ನು ಹೆಚ್ಚು ಮೆಗಾ ಪಿಕ್ಸೆಲ್ ಮಾಡಿ ಫೋನುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಹೆಚ್ಚು ಮೆಗಾ ಪಿಕ್ಸೆಲ್ ಇರುವ ಫೋನುಗಳನ್ನು ಖರೀದಿ ಮಾಡಲು ಎಲ್ಲರೂ ಇಷ್ಟಪಡುತ್ತಾರೆ. ದೂರದ ವಸ್ತುಗಳು ಹಾಗೂ ಪ್ರತಿಯೊಂದು ಚಿಕ್ಕ ವಸ್ತುಗಳು ಕೂಡ ಫೋಟೋದಲ್ಲಿ ಚೆನ್ನಾಗಿ ಕಾಣಿಸಲು ಹೆಚ್ಚು ಮೆಗಾ ಪಿಕ್ಸೆಲ್ ಇರುವ ಕ್ಯಾಮೆರಾಗಳನ್ನು ಜನರು ಕೊಂಡುಕೊಳ್ಳುತ್ತಾರೆ.

ಇದು ಕ್ಯಾಮೆರಾ ಕಥೆ ಆದರೆ ದೂರದ ವಸ್ತುಗಳನ್ನು ಕೂಡ ಬಹಳ ಸುಲಭವಾಗಿ ನೋಡಬಹುದಾದ ಹಾಗೂ ಚಿಕ್ಕ ಚಿಕ್ಕ ವಸ್ತುಗಳನ್ನು ಗುರುತಿಸುವಂತಹ ಸಾಮರ್ಥ್ಯ ಹೊಂದಿರುವ ಮಾನವನ ಕಣ್ಣು ಎಷ್ಟು ಮೆಗಾ ಪಿಕ್ಸೆಲ್ ಆಗಿರಬಹುದು ಎಂದು ಎಂದಾದರೂ ಆಲೋಚನೆ ಮಾಡಿದ್ದೀರಾ. ಹೌದು ಸ್ನೇಹಿತರೇ ನಾವು ಇಂದು ಮಾನವನ ಕಣ್ಣಿನ ಮೆಗಾಪಿಕ್ಸೆಲ್ ಬಗ್ಗೆ ಮಾತನಾಡುತ್ತೇವೆ, 1, 2, 10, 20, 40 ಪಿಕ್ಸೆಲ್ ಗಳನ್ನು ಹೊಂದಿರುವ ನಿಮ್ಮ ಮೊಬೈಲ್ ಕ್ಯಾಮೆರಾಗಳು ನಿಮ್ಮ ಸುತ್ತಮುತ್ತಲಿನ ಪರಿಸರದ ಫೋಟೋವನ್ನು ತೆಗೆಯುವುದಾದರೆ ಮಾನವನ ಕಣ್ಣು ಎಷ್ಟು ಮೆಗಾಪಿಕ್ಸೆಲ್ ಎಂಬ ಲೆಕ್ಕಾಚಾರವನ್ನು ನಾವು ಹಾಕುವುದಾದರೆ ಬಹಳ ಸುಲಭ ರೀತಿಯಲ್ಲಿ ಒಂದು ಪದದಲ್ಲಿ ಉತ್ತರ ನೀಡುವುದಾದರೇ ಮಾನವನ ಕಣ್ಣು 576 ಮೆಗಾ ಪಿಕ್ಸೆಲ್ ಆಗಿರುತ್ತದೆ. ಇನ್ನು ಹದ್ದಿನ ಕಣ್ಣಿನ ಮೆಗಾಪಿಕ್ಸೆಲ್ ಕುರಿತು ನಾವು ಲೆಕ್ಕ ಹಾಕುವುದಾದರೆ ಮನುಷ್ಯನಿಗಿಂತ ನಾಲ್ಕರಿಂದ ಎಂಟು ಪಟ್ಟು ಹೆಚ್ಚಾಗಿರುತ್ತದೆ ಅಂದರೆ ಸರಿಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ಮೆಗಾಪಿಕ್ಸೆಲ್ ಕಣ್ಣುಗಳನ್ನು ಹದ್ದು ಹೊಂದಿದೆ.

Comments are closed.