Neer Dose Karnataka
Take a fresh look at your lifestyle.

ಹೀಗೆ ಮಾಡಿ ಎಷ್ಟೆ ಹಳೇ ಕುಕ್ಕರ್ ಮತ್ತೆ ಹೊಸತಾಗುತ್ತೆ ಸೀಕ್ರೆಟ್​ ಟಿಪ್ಸ್. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಮನೆಯಲ್ಲಿರುವ ಹಳೆಯ ಕುಕ್ಕರ್ ಅಂದರೆ ಜಿಡ್ಡು ಇಡಿದಿರುವ ಕುಕ್ಕರ್, ಕಪ್ಪಗಾಗಿರುವ ಕುಕ್ಕರ್ ಅಥವಾ ತಳ ಸೀದು ಹೋಗಿರುವ ಕುಕ್ಕರ್ ಗಳಲ್ಲಿ ಕಲೆಗಳು ಹಾಗೆಯೇ ಇದೆಯಾ. ಅದನ್ನು ಕೇವಲ 5 ನಿಮಿಷಗಳಲ್ಲಿ ಹೋಗಿಸಿ ಹೊಸ ಕುಕ್ಕರ್ ನಂತೆ ಮಾಡುವ ಟಿಪ್ಸ್ ಗಳನ್ನು ಇಂದು ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ ಮನೆಯಲ್ಲಿ ಸಹ ಇಂತಹ ಸಮಸ್ಯೆ ಇದ್ದರೆ ಈ ಟಿಪ್ಸ್ ಅನ್ನು ಟ್ರೈ ಮಾಡಿ.

ಮೊದಲಿಗೆ ಗ್ಯಾಸನ್ನು ಹಚ್ಚಿ ಮಧ್ಯಮ ಉರಿಯಲ್ಲಿ ಇಟ್ಟು, ತಳ ಸೀದು ಹೋದ ಕುಕ್ಕರ್ ನನ್ನು ಗ್ಯಾಸ್ ಮೇಲೆ ಇಟ್ಟುಕೊಳ್ಳಿ. ನಂತರ ಇದಕ್ಕೆ 2 – 3 ಲೋಟದಷ್ಟು ನೀರನ್ನು ಹಾಕಿಕೊಳ್ಳಿ. ಇದಕ್ಕೆ 1 ಚಮಚದಷ್ಟು ಸೋಪಿನ ಪುಡಿಯನ್ನು ಹಾಕಿಕೊಳ್ಳಿ. ಇದಕ್ಕೆ 1 ಚಮಚದಷ್ಟು ಕಲ್ಲು ಉಪ್ಪು, ಸ್ವಲ್ಪ ಬೇಕಿಂಗ್ ಸೋಡಾ ವನ್ನು ಹಾಕಿಕೊಳ್ಳಿ. ನಂತರ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ 3 ನಿಮಿಷಗಳ ಕಾಲ ನೀರನ್ನು ಕುದಿಯಲು ಬಿಡಿ. ಮೂರು ನಿಮಿಷಗಳ ನಂತರ ಕುಕ್ಕರ್ ನಲ್ಲಿರುವ ನೀರನ್ನು ಕುಕ್ಕರ್ ಗಿಂತ ದೊಡ್ಡ ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರು, ಸ್ವಲ್ಪ ಸೋಪಿನ ಪುಡಿ, ಸ್ವಲ್ಪ ಬೇಕಿಂಗ್ ಸೋಡಾ, ಸ್ವಲ್ಪ ಕಲ್ಲು ಉಪ್ಪು, ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ನನ್ನು ಅದರ ಒಳಗೆ ಇಟ್ಟುಕೊಳ್ಳಿ.

ನಂತರ ಪಾತ್ರೆಯನ್ನು ಗ್ಯಾಸ್ ಮೇಲೆ ಇಟ್ಟು 3 ನಿಮಿಷಗಳ ಕಾಲ ನೀರನ್ನು ಕುದಿಯಲು ಬಿಡಿ. ಮತ್ತೊಂದು ಕಡೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಪಾತ್ರೆಯನ್ನು ತೊಳೆಯುವ ಲಿಕ್ವಿದ್ ನನ್ನು 2 ಚಮಚದಷ್ಟು ಹಾಕಿಕೊಳ್ಳಿ. ಈ ಬಟ್ಟಲಿಗೆ ಅರ್ಧ ಚಮಚದಷ್ಟು ಬೇಕಿಂಗ್ ಸೋಡಾ, ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. 3 ನಿಮಿಷಗಳ ನಂತರ ಕುಕ್ಕರನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಪಾತ್ರೆಯಲ್ಲಿರುವ ನೀರನ್ನು ಕುಕ್ಕರ್ ಗೆ ಸವರಿಕೊಳ್ಳಿ. ನಂತರ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಬಟ್ಟಲಿನಲ್ಲಿ ರೆಡಿ ಮಾಡಿದ ಸೊಪ್ಪಿನ ಮಿಶ್ರಣಕ್ಕೆ ತೆಗೆದುಕೊಂಡು ಕುಕ್ಕರ್ ಮೂಲೆಮೂಲೆಗೆ ಉಜ್ಜಿಕೊಳ್ಳಬೇಕು. ನಂತರ ಸ್ಟೀಲ್ ನಾರಿನಲ್ಲಿ ಸೊಪ್ಪಿನ ಮಿಶ್ರಣದಲ್ಲಿ ಅದ್ದಿ ಕುಕ್ಕರ್ ನನ್ನು ಉಜ್ಜಿಕೊಂಡು ನೀರಿನಲ್ಲಿ ತೊಳೆದುಕೊಂಡರೆ ಕುಕ್ಕರ್ ಹೊಸ ಕುಕ್ಕರ್ ನಂತೆ ಕಾಣುತ್ತದೆ.

Comments are closed.