Neer Dose Karnataka
Take a fresh look at your lifestyle.

ಮಹಾಭಾರತ, ರಾಧಾಕೃಷ್ಣ ಧಾರವಾಹಿಯ ವಿಲ್ಲನ್ ಪಾತ್ರಗಳಿಗೆ ಕನ್ನಡದಲ್ಲಿ ವಾಯ್ಸ್ ನೀಡಿರುವ ಅಗ್ನಿಸಾಕ್ಷಿ ಕಲಾವಿದ.

1

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ವಾಹಿನಿಗಳಲ್ಲಿ ಪೌರಾಣಿಕ ಧಾರವಾಹಿಗಳು ಕಂಡುಕೇಳರಿಯದಂತೆ ಉತ್ತಮ ಪ್ರದರ್ಶನ ನೀಡುತ್ತವೆ. ಇದೀಗ ಹಿಂದಿ ಭಾಷೆಯಲ್ಲಿ ಪ್ರಸಾರವಾಗಿದ್ದ ಮಹಾಭಾರತ, ರಾಧಾಕೃಷ್ಣ ಸೇರಿದಂತೆ ಇನ್ನೂ ಹಲವಾರು ಪೌರಾಣಿಕ ಕಥೆಗಳು ಕನ್ನಡ ಭಾಷೆಗೆ ಅನುವಾದವಾಗಿ ಮಾತೃಭಾಷೆಯಲ್ಲಿಯೇ ಇತರ ಭಾಷೆಗಳ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಜನರು ಕೂಡ ಧಾರವಾಹಿಗಳನ್ನು ಒಪ್ಪಿಕೊಂಡಿದ್ದು ಪೌರಾಣಿಕ ಕಥೆಗಳನ್ನು ಜನರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಟಾಪ್ ಕಾರ್ಯಕ್ರಮಗಳಲ್ಲಿ ಲಿಸ್ಟ್ ನಲ್ಲಿ ಪೌರಾಣಿಕ ಕಾರ್ಯಕ್ರಮಗಳ ಸದ್ದು ಜೋರಾಗಿಯೇ ಇದೆ.

ಇದೀಗ ಕನ್ನಡಕ್ಕೆ ಇತರ ಭಾಷೆಗಳ ಧಾರವಾಹಿಗಳು ಅನುವಾದವಾಗಲು ಕನ್ನಡದ ಹಲವಾರು ಕಲಾವಿದರು ಪಾತ್ರಗಳಿಗೆ ತಮ್ಮ ಧ್ವನಿಯ ಮೂಲಕ ಜೀವ ತುಂಬುವ ಕೆಲಸ ಮಾಡಿದ್ದಾರೆ. ಇಂದು ನಾವು ತೆರೆಮರೆಯ ಕಾಯಿಯಂತಿರುವ ಒಬ್ಬ ಕಲಾವಿದನ ಕುರಿತು ನಾವು ತಿಳಿಸಿಕೊಡುತ್ತೇವೆ. ಈತ ತಮಿಳು ಚಿತ್ರರಂಗದ ಖ್ಯಾತ ನಟರಾಗಿರುವ ಅಜಿತ್ ರವರ ಸಿನಿಮಾ ಕನ್ನಡದಲ್ಲಿ ಡಬ್ ಆಗುವ ಸಂದರ್ಭದಲ್ಲಿ ಅಜಿತ್ ರವರಿಗೆ ಧ್ವನಿ ನೀಡಿದ್ದರು. ಇದೀಗ ಮಹಾಭಾರತ ಹಾಗೂ ರಾಧಾಕೃಷ್ಣ ಧಾರವಾಹಿ ವಿಲನ್ ಗಳಿಕೆ ಧ್ವನಿ ನೀಡಿದ್ದಾರೆ.

ಹೌದು ಸ್ನೇಹಿತರೇ ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಚಂದ್ರಿಕಾ ರವರ ಬಲಗೈ ಬಂಟ ಗರುಡ ಪಾತ್ರ ಖ್ಯಾತಿಯ ಪುನೀತ್ ಬಾಬುರವರು ಒಬ್ಬರು ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದು ಇವರು ಹಲವಾರು ಪಾತ್ರಗಳಿಗೆ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಇವರು ಇದೀಗ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರವಾಹಿಯಲ್ಲಿ ಕಂಸನ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಮಹಾಭಾರತ ಧಾರವಾಹಿಯ ದುರ್ಯೋಧನನ ಪಾತ್ರಕ್ಕೂ ಕೂಡ ಪುನೀತ್ ಬಾಬು ರವರು ಧ್ವನಿ ನೀಡಿದ್ದು ಎರಡು ಪಾತ್ರಗಳ ಧ್ವನಿ ಸಂಯೋಜನೆ ಬಹಳ ಅತ್ಯುತ್ತಮವಾಗಿ ಮೂಡಿ ಬಂದಿದೆ. ಇವರು ನಿಜಕ್ಕೂ ಬಹಳ ಅತ್ಯುತ್ತಮವಾಗಿ ಧ್ವನಿ ನೀಡಿದ್ದು, ಇವರು ಮೊದಲ ಬಾರಿಗೆ ಧಾರಾವಾಹಿಯಲ್ಲಿ ನೋಡಿದಾಗ ಇವರಲ್ಲಿ ಈ ರೀತಿಯ ಕಲೆ ಇದೆ ಎಂದು ಯಾರಿಗೂ ತಿಳಿದಿರಲಿಲ್ಲ.

Leave A Reply

Your email address will not be published.