Neer Dose Karnataka
Take a fresh look at your lifestyle.

ಅನುಶ್ರೀ ಹುಟ್ಟುಹಬ್ಬಕ್ಕೆ ಸರಿಗಮಪ ಹನುಮಂತ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿದ ಅನುಶ್ರೀ ಕಣ್ಣಲ್ಲಿ ನೀರು ! ಯಾಕೆ ಗೊತ್ತಾ??

4

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಕಳೆದ ಎರಡು ದಿನಗಳ ಹಿಂದೆ ಅನುಶ್ರೀ ರವರು ತಮ್ಮ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಕನ್ನಡದ ನಂಬರ್ 1 ನಿರೂಪಕಿ ಆಗಿರುವ ಅನುಶ್ರೀ ಅವರ ಹುಟ್ಟು ಹಬ್ಬ ಎಂದರೇ ಕೇಳಬೇಕೆ, ಸಾಕಷ್ಟು ನಟ-ನಟಿಯರು ಸೇರಿದಂತೆ ಚಿತ್ರರಂಗದ ಹಲವಾರು ದಿಗ್ಗಜರು ಅನುಶ್ರೀ ರವರಿಗೆ ಶುಭಾಶಯ ಕೋರಿದ್ದಾರೆ. ಜೀ ಕನ್ನಡ ವಾಹಿನಿ ಕಡೆಯಿಂದ ಕೂಡ ವಿಶೇಷವಾದ ಶುಭಾಶಯ ಕೋರಲಾಗಿದ್ದು, ಈ ಬಾರಿ ಅನುಶ್ರೀ ರವರ ಹುಟ್ಟುಹಬ್ಬ ಮತ್ತಷ್ಟು ವಿಶೇಷತೆಗಳಿಂದ ಕೂಡಿದೆ.

ಇನ್ನು ಸರಿಗಮಪ ವೇದಿಕೆಯಲ್ಲಿ ಹಲವಾರು ಸ್ಪರ್ಧಿಗಳನ್ನು ನೋಡಿ ಹುರಿದುಂಬಿಸಿ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವ ಅನುಶ್ರೀ ರವರು ಸರಿಗಮಪ ವೇದಿಕೆಯ ಮೂಲಕ ಮುನ್ನೆಲೆಗೆ ಬಂದಿರುವ ಹನುಮಂತು ರವರ ಜೊತೆ ವಿಶೇಷ ಬಾಂಧವ್ಯವನ್ನು ಬೆಳೆಸಿಕೊಂಡಿದ್ದಾರೆ. ಇತರ ಸ್ಪರ್ಧಿಗಳನ್ನು ಕೂಡ ಇಷ್ಟಪಡುವ ಅನುಶ್ರೀ ರವರು ಹನುಮಂತ ಎಂದರೆ ಮತ್ತಷ್ಟು ಹೆಚ್ಚಿನ ಪ್ರೀತಿ ತೋರಿಸುತ್ತಾರೆ.

ನಿಜವಾದ ಅಕ್ಕ ತಮ್ಮನಂತೆ ಇರುವ ಹನುಮಂತ ಹಾಗೂ ಅನುಶ್ರೀ ರವರು ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಅಕ್ಕನ ವಿಶೇಷ ಬರ್ತಡೆಗೆ ಹನುಮಂತು ರವರು ಮುಗ್ಧ ರೀತಿಯಲ್ಲಿ ಉಡುಗೊರೆಯೊಂದನ್ನು ನೀಡಿದ್ದು, ಅನುಶ್ರೀ ರವರು ಭಾವುಕರಾಗಿದ್ದಾರೆ. ಹೌದು ಸ್ನೇಹಿತರೇ ಹನುಮಂತ ರವರು ತಮ್ಮ ಉತ್ತರ ಕರ್ನಾಟಕದ ರೊಟ್ಟಿಯ ಸಮೇತ ಉತ್ತರ ಕರ್ನಾಟಕ ಶೈಲಿಯ ವಿಶೇಷ ಸಿಹಿ ತಿಂಡಿಗಳಲ್ಲಿ ಅನುಶ್ರೀ ರವರಿಗೆ ಹುಟ್ಟುಹಬ್ಬದ ಉಡುಗೊರೆಯನ್ನಾಗಿ ನೀಡಿದ್ದಾರೆ. ಹನುಮಂತನ ಈ ಮುಗ್ದತೆ ಕಂಡು ಅನುಶ್ರೀ ರವರು ಒಂದೆರಡು ಕ್ಷಣಗಳ ಕಾಲ ಭಾವುಕರಾಗಿದ್ದಾರೆ.

Leave A Reply

Your email address will not be published.