Neer Dose Karnataka
Take a fresh look at your lifestyle.

ನಿಮ್ಮ ತ್ವಚೆಗೆ ತಕ್ಕಂತೆ ಪಪ್ಪಾಯಿಯಲ್ಲಿ ಹೀಗೆ ಮಾಡಿ ನೋಡಿ, ಎಷ್ಟೆಲ್ಲ ಲಾಭವಿದೆ ಗೊತ್ತೆ?

ಪಪ್ಪಾಯಿ ಹಣ್ಣನ್ನು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ತಕ್ಷಣ ಗುಣವಾಗುತ್ತದೆ. ಆರೋಗ್ಯದ ಹೊರತಾಗಿ, ಪಪ್ಪಾಯಿಯು ಚರ್ಮಕ್ಕೆ ಸಂಬಂಧಿಸಿದ ಅಸಂಖ್ಯಾತ ಸಮಸ್ಯೆಗಳನ್ನು ನಿವಾರಿಸುತ್ತದೆ . ಪಪ್ಪಾಯಿಯನ್ನು ವಿವಿಧ ಸೌಂದರ್ಯ ಉತ್ಪನ್ನಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಏಕೆಂದರೆ ಈ ಹಣ್ಣಿನಲ್ಲಿರುವ ಅಂಶಗಳು ಚರ್ಮದ ಮೇಲೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಪಪ್ಪಾಯಿ ಫೇಸ್ ಪ್ಯಾಕ್ ಅನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಈ ಪ್ಯಾಕ್ ಸಹಾಯದಿಂದ ಮುಖಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು. ಆದ್ದರಿಂದ ಪಪ್ಪಾಯಿ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಪಪ್ಪಾಯಿ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸಬೇಕು ಎಂದು ತಿಳಿಯೋಣ.

ಮೊದಲನೆಯ ಫೇಸ್ ಪ್ಯಾಕ್: ಪಪ್ಪಾಯಿ ಮತ್ತು ಟೊಮೇಟೊ ಹಣ್ಣಿನ ಪ್ಯಾಕ್: ಪಪ್ಪಾಯಿ ಹಣ್ಣಿನ ಸಿಪ್ಪೆಯನ್ನು ತೆಗೆದು, ಹಣ್ಣನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಮತ್ತೊಂದು ಮಿಕ್ಸಿ ಜಾರಿಗೆ ಟೊಮೇಟೊವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ.ಈ ಎರಡು ಪೇಸ್ಟ್ ಗಳನ್ನು ಸಮ ಪ್ರಮಾಣದಲ್ಲಿ ಒಂದು ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿದರೆ ಪಪ್ಪಾಯಿ ಫೇಸ್ ಪ್ಯಾಕ್ ರೆಡಿಯಾಗುತ್ತದೆ. ಈ ಪ್ಯಾಕ್ ಅನ್ನು ವಾರದಲ್ಲಿ ಮೂರು ದಿನ ಹಚ್ಚಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಕಲೆಗಳು ಮಾಯವಾಗುತ್ತವೆ.

ಎರಡನೆಯ ಫೇಸ್ ಪ್ಯಾಕ್ : ಪಪ್ಪಾಯ – ಹಸಿ ಹಾಲಿನ ಪ್ಯಾಕ್: ಪಪ್ಪಾಯಿ ಹಣ್ಣನ್ನು ಮೇಲೆ ತಿಳಿಸಿದ ರೀತಿಯಾಗಿ ಪೇಸ್ಟ್ ತಯಾರಿಸಿಕೊಳ್ಳಿ. ಒಂದು ಕಪ್ ಗೆ ಪಪ್ಪಾಯಿ ಹಣ್ಣಿನ ಪೇಸ್ಟ್ ಮತ್ತು ಹಸಿ ಹಾಲನ್ನು ಹಾಕಿ ಫೇಸ್ ಪ್ಯಾಕ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಒಣಗಿದ ನಂತರ ಅದನ್ನು ನೀರಿನ ಸಹಾಯದಿಂದ ತೊಳೆದುಕೊಳ್ಳಿ. ಈ ಪೇಸ್ಟ್ ಅನ್ನು ಹಚ್ಚುವುದರಿಂದ ಚರ್ಮವು ಮೃದುವಾಗುತ್ತದೆ. ಪಪ್ಪಾಯಿ ಹಣ್ಣಿನಲ್ಲಿ ಪೊಟ್ಯಾಸಿಯಮ್ ಇದ್ದು, ಅದು ಚರ್ಮದ ಶುಷ್ಕತೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ..

ಮೂರನೆಯ ಫೇಸ್ ಪ್ಯಾಕ್: ಪಪ್ಪಾಯ -ಅಲೋವೆರಾ ಜೆಲ್ ಪ್ಯಾಕ್: ಮುಖದ ಮೇಲೆ ಸುಕ್ಕುಗಳು ಕಾಣಿಸಿಕೊಂಡಾಗ, ಅಲೋವರ್ ಜೆಲ್ ಅನ್ನು ಪಪ್ಪಾಯಿಯಲ್ಲಿ ಬೆರೆಸಿ ಪೇಸ್ಟ್ ಮಾಡಿ ಮತ್ತು ಈ ಪೇಸ್ಟ್ ಅನ್ನು ಪ್ರತಿದಿನ ಒಂದು ತಿಂಗಳು ಹಚ್ಚಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ಸುಕ್ಕುಗಳು ಕಡಿಮೆಯಾಗುತ್ತವೆ. ಪಪ್ಪಾಯಿಯಲ್ಲಿರುವ ಆಂಟಿಆಕ್ಸಿಡೆಂಟ್ ಮುಖದಲ್ಲಿರುವ‌ ಸುಕ್ಕುಗಳನ್ನು ನಿವಾರಿಸುತ್ತದೆ.

ನಾಲ್ಕನೆಯ ಫೇಸ್ ಪ್ಯಾಕ್: ಪಪ್ಪಾಯ- ಜೇನುತುಪ್ಪ ಪ್ಯಾಕ್: ಮುಖದ ಮೇಲೆ ಮೊಡವೆಗಳು ಇದ್ದರೆ, ಪಪ್ಪಾಯಿ, ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಅದನ್ನು ನೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ಪ್ರತಿದಿನ ಹಚ್ಚುವುದರಿಂದ ಮುಖದಲ್ಲಿರುವ ಮೊಡವೆಗಳು ಕಡಿಮೆಯಾಗುತ್ತದೆ.

ಐದನೆಯ ಫೇಸ್ಚ ಪ್ಯಾಕ್: ಪಪ್ಪಾಯ- ಮೊಟ್ಟೆ ಪ್ಯಾಕ್: ಪಪ್ಪಾಯಿಯನ್ನು ಮೇಲೆ ತಿಳಿಸಿದ ರೀತಿಯಾಗಿ ಪೇಸ್ಟ್ ಮಾಡಿಕೊಳ್ಳಿ. ಅದರೊಳಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಪ್ಯಾಕ್ ಅನ್ನು ಕನಿಷ್ಠ 15 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ, ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಈ ಪ್ಯಾಕ್‌ಗಳನ್ನು ಹಚ್ಚುವುದರಿಂದ ಚರ್ಮದಲ್ಲಿರುವ ರಂಧ್ರಗಳು ಕಡಿಮೆಯಾಗುತ್ತದೆ.

ಕೊನೆಯ ಫೇಸ್ ಪ್ಯಾಕ್:ಪಪ್ಪಾಯ -ಕಿತ್ತಳೆ ಹಣ್ಣಿನ ಪ್ಯಾಕ್: ಪಪ್ಪಾಯಿ ಪೇಸ್ಟ್ ಗೆ ಕಿತ್ತಳೆ ರಸ ಸೇರಿಸಿ ಫೇಸ್ ಪ್ಯಾಕ್ ಮಾಡಿ. ಈ ಫೇಸ್ ಪ್ಯಾಕ್ ಅನ್ನು ಮುಖದ ಮೇಲೆ 20 ನಿಮಿಷಗಳ ಕಾಲ ಬಿಡಿ ಮತ್ತು ಅದು ಒಣಗಿದಾಗ ನೀರಿನ ಸಹಾಯದಿಂದ ಸ್ವಚ್ಚಗೊಳಿಸಿ. ಈ ಪೇಸ್ಟ್ ಅನ್ನು ಬಳಸುವುದರಿಂದ ಎಣ್ಣೆಮುಕ್ತ ಚರ್ಮವನ್ನು ಪಡೆಯಬಹುದು..

Comments are closed.