Neer Dose Karnataka
Take a fresh look at your lifestyle.

ಕನ್ನಡತಿ ಕುಟುಂಬದಿಂದ ಬಿಗ್ ಬಾಸ್’ಗೆ ಒಬ್ಬರು ಫಿಕ್ಸ್ ! ಯಾರು ಗೊತ್ತಾ?? ಗೆಲ್ಲಿಸಿಕೊಂಡು ಬರುತ್ತೇವೆ ಎಂದ ಅಭಿಮಾನಿಗಳು

3

ನಮಸ್ಕಾರ ಸ್ನೇಹಿತರೆ ಇದೀಗ ಕಲರ್ಸ್ ಕನ್ನಡ ಧಾರವಾಹಿ ಎಲ್ಲಿ ಇನ್ನು ಕೇವಲ ಬೆರಳೆಣಿಕೆಯ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 8 ಆರಂಭಗೊಳ್ಳಲಿದೆ. ಅಭಿಮಾನಿಗಳು ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ನೋಡಲು ಹಾಗೂ ವಾರದ ಕೊನೆಯಲ್ಲಿ ಸುದೀಪ್ ರವರ ಕಥೆ ಕೇಳಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಕಳೆದ ವರ್ಷ ಬಿಗ್ ಬಾಸ್ ಪ್ರಸಾರವಾಗದೇ ಇರುವ ಕಾರಣ ಈ ಬಾರಿ ಮತ್ತಷ್ಟು ವಿಶೇಷತೆಗಳಿಂದ ಬಿಗ್ಬಾಸ್ ಕೂಡಿರಲಿದೆ.

ಖಂಡಿತ ಇತ್ತೀಚಿನ ಟ್ರೆಂಡ್ ಪ್ರಕಾರ ನೋಡಿದರೆ ಬಿಗ್ ಬಾಸ್ ಮತ್ತೊಮ್ಮೆ ಟಿಆರ್ಪಿ ಯಲ್ಲಿ ಮೊದಲನೇ ಸ್ಥಾನ ಪಡೆದುಕೊಂಡು ಯಶಸ್ವಿಯಾಗುವುದು ಖಚಿತ ವೆನಿಸುತ್ತಿದೆ. ಸ್ಪರ್ಧಿಗಳ ಆಯ್ಕೆ ಯು ಕೂಡ ಬಹಳ ಅಳೆದು ತೂಗಿ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನು ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಕಲರ್ಸ್ ಕನ್ನಡ ಧಾರವಾಹಿ ಗಳಲ್ಲಿ ನಟನೆ ಮಾಡುವ ಕಲಾವಿದರನ್ನು ಬಿಗ್ ಬಾಸ್ ಮನೆಗೆ ಕರೆದೊಯ್ಯಲು ವಾಹಿನಿ ಸಿದ್ದತೆ ನಡೆಸಿದೆ

ಈ ಬಾರಿ ಕಲರ್ಸ್ ಕನ್ನಡ ಧಾರವಾಹಿ ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡತಿ ಧಾರಾವಾಹಿ ಇಂದ ಕಲಾವಿದರೊಬ್ಬರನ್ನು ಬಿಗ್ ಬಾಸ್ ಮನೆಗೆ ಕರೆತರಲು ತಯಾರಿ ನಡೆಸುತ್ತಿದೆ, ಈ ಸುದ್ದಿ ಕೇಳಿದ ತಕ್ಷಣ ಅಭಿಮಾನಿಗಳು ನಿಮ್ಮ ವೈಯಕ್ತಿಕ ಜೀವನದ ಕುರಿತು ನಾವು ಹೆಚ್ಚಿನ ಮಾಹಿತಿ ತಿಳಿದು ಕೊಳ್ಳಬೇಕು ದಯವಿಟ್ಟು ಬಿಗ್ ಬಾಸ್ ಗೆ ಬನ್ನಿ ನಿಮ್ಮನ್ನು ಗೆಲ್ಲಿಸಿಕೊಡುವ ಜವಾಬ್ದಾರಿ ನಮ್ಮದು ಎಂದಿದ್ದಾರೆ. ಹೀಗೆ ಅಭಿಮಾನಿಗಳು ಭರವಸೆ ನೀಡಿರುವುದು ಮತ್ಯಾರಿಗೂ ಅಲ್ಲ, ಪುಟ ಗೌರಿಮದುವೆ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ ನಂತರ ಕನ್ನಡತಿ ಧಾರಾವಾಹಿ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿರುವ ಕನ್ನಡ ಟೀಚರ್ ರಂಜನಿ ರಾಘವನ್ ರವರು ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂಬ ಗಾಸಿಪ್ ಕೇಳಿಬಂದ ತಕ್ಷಣ ಅಭಿಮಾನಿಗಳು ಈ ರೀತಿಯ ಭರವಸೆ ನೀಡಿದ್ದಾರೆ.

Leave A Reply

Your email address will not be published.