Neer Dose Karnataka
Take a fresh look at your lifestyle.

ಅಗ್ನಿಸಾಕ್ಷಿ ಧಾರಾವಾಹಿಯಿಂದ ಬಿಗ್ ಮನೆಗೆ ಒಬ್ಬರು ಫಿಕ್ಸ್ ! ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಕಂಡ ಅತಿ ಹೆಚ್ಚು ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಅಗ್ನಿಸಾಕ್ಷಿ ಧಾರವಾಹಿ ಹಲವಾರು ಜನ ಇಂದಿಗೂ ಕೂಡ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ದಾರವಾಹಿ ಹಲವಾರು ವರ್ಷಗಳ ಕಾಲ ಕನ್ನಡ ಕಿರುತೆರೆಯಲ್ಲಿ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿತ್ತು. ಇತರ ಚಾನಲ್ ಗಳ ಧಾರವಾಹಿಗಳು ಅಗ್ನಿಸಾಕ್ಷಿ ಪ್ರಸಾರವಾಗುತ್ತಿದ್ದ ವೇಳೆಯಲ್ಲಿ ತಮ್ಮ ಧಾರವಾಹಿ ಪ್ರಸಾರ ಮಾಡಲು ಹಿಂಜರಿಯುತ್ತಿದ್ದವು ಎಂದರೆ ನೀವು ನಂಬಲೇಬೇಕು

ಅಷ್ಟರ ಮಟ್ಟಿಗೆ ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದ ಅಗ್ನಿಸಾಕ್ಷಿ ಧಾರಾವಾಹಿ ಯನ್ನು ಇಂದಿಗೂ ಕೂಡ ಹಲವಾರು ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಇನ್ನು ಧಾರವಾಹಿಯಲ್ಲಿ ನಟಿಸಿದ ಕಲಾವಿದರಿಗೆ ಈ ಧಾರವಾಹಿ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ಈ ದಾರವಾಹಿ ಮೂಲಕ ಸಿನಿಮಾ ರಂಗಕ್ಕೆ ನಾಯಕ ನಟ ವಿಜಯ್ ಸೂರ್ಯ ರವರು ಕೂಡ ಕಾಲಿಟ್ಟರು. ಇಷ್ಟೆಲ್ಲ ಜನಪ್ರಿಯತೆ ಗಳಿಸಿದ್ದ ಅಗ್ನಿಸಾಕ್ಷಿ ಧಾರವಾಹಿ ಯಲ್ಲಿ ನಟಿಸಿದ ಇಬ್ಬರು ಕಲಾವಿದರ ಹೆಸರು ಇದೀಗ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ಕೇಳಿ ಬಂದಿದೆ. ಇವರಿಬ್ಬರನ್ನು ಬಿಗ್ ಬಾಸ್ ತಂಡ ಮನೆಗೆ ಬರುವಂತೆ ಆಹ್ವಾನ ನೀಡಿದ್ದು ಇದರಲ್ಲಿ ಕನಿಷ್ಠ ಒಬ್ಬರು ಬರುವುದು ಖಚಿತ ಎನ್ನಲಾಗುತ್ತಿದೆ.

ಹೌದು ಸ್ನೇಹಿತರೇ ಮೂಲಗಳ ಪ್ರಕಾರ ಅಗ್ನಿಸಾಕ್ಷಿ ಧಾರವಾಹಿ ಪಾತ್ರದಾರಿ ಸನ್ನಿಧಿ ಪಾತ್ರದಾರಿ ವೈಷ್ಣವಿ ರವರು ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ವಿಜಯ ಸೂರ್ಯ ರವರ ತಂಗಿಯಾಗಿ ನಟನೆ ಮಾಡಿದ ಸುಕೃತಾ ನಾಗರಾಜ್ ರವರ ಹೆಸರು ಕೂಡ ಕೇಳಿ ಬರುತ್ತಿದ್ದು ಇವರಿಬ್ಬರಿಗೆ ಬಿಗ್ ಬಾಸ್ ಮನೆಗೆ ತೆರಳಲು ಆಹ್ವಾನ ನೀಡಲಾಗಿದೆ ಎಂದು ಖ್ಯಾತ ಮಾಧ್ಯಮ ಸಂಸ್ಥೆಯಾಗಿರುವ ಐಬಿ ಟೈಂಸ್ ಪತ್ರಿಕೆ ವರದಿ ಮಾಡಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.