Neer Dose Karnataka
Take a fresh look at your lifestyle.

ಸಾಯಿ ಪಲ್ಲವಿ ರವರ ಮೊದಲ ಕ್ರಷ್ ಯಾರು ಗೊತ್ತಾ?? ಅವರೇ ಹೇಳಿದ್ದಾರೆ ಕೇಳಿ.

ನಮಸ್ಕಾರ ಸ್ನೇಹಿತರೇ, ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ನಟನೆ, ನೃತ್ಯ ಹಾಗೂ ಸೌಂದರ್ಯದ ಮೂಲಕ ಹಲವಾರು ಹುಡುಗರ ಹೃದಯ ಕದ್ದಿರುವ ಚೆಲುವೆ ಸಾಯಿಪಲ್ಲವಿ ರವರ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಹೆಚ್ಚಿನ ಚಿತ್ರಗಳನ್ನು ಮಾಡದೆ ಹೋದರೂ ಕೂಡ ತಮ್ಮ ನಟನಾ ಶೈಲಿ ಹಾಗೂ ಸಾಮಾನ್ಯ ರೀತಿಯಲ್ಲಿ ನಡೆಸುವ ಆಲೋಚನೆಗಳ ಮೂಲಕ ಎಲ್ಲರ ಮನಗೆದ್ದಿದ್ದಾರೆ. ಇವರು ಹಣಕ್ಕಾಗಿ ಸಿನಿಮಾ ರಂಗದಲ್ಲಿ ಇಲ್ಲ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ. ಅದೇ ಕಾರಣಕ್ಕಾಗಿ ಸೌಂದರ್ಯ ವರ್ಧಕಗಳ ಹತ್ತಾರು ಕೋಟಿ ಡೀಲ್ ಗಳನ್ನು ಮೇಕಪ್ ಮಾಡಿದರೇ ಮಾತ್ರ ಚೆನ್ನಾಗಿ ಕಾಣುವುದಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ.

ಹೆಚ್ಚು ಮೇಕಪ್ ಹಾಕಿಕೊಳ್ಳದೆ ಬಹಳ ಮುದ್ದಾಗಿ ನಟನೆ ಮಾಡಿ, ವಿವಿಧ ಪ್ರೀತಿಯ ಪಾತ್ರಗಳಿಗೆ ಜೀವ ತುಂಬಿರುವ ಸಾಯಿ ಪಲ್ಲವಿ ರವರು ಇದೀಗ ಹುಡುಗರ ನೆಚ್ಚಿನ ನಟಿ ಎಂದರೆ ತಪ್ಪಾಗಲಾರದು. ಅವರು ಯಾರ ಅಭಿಮಾನಿ ಬೇಕಾದರೂ ಆಗಿರಬಹುದು ಆದರೆ ಸಾಯಿ ಪಲ್ಲವಿ ಎಂದ ತಕ್ಷಣ ಆಕೆ ಉತ್ತಮ ನಟಿ ಎಂಬ ಪ್ರತಿಕ್ರಿಯೆಯನ್ನು ಪ್ರತಿಯೊಬ್ಬರೂ ನೀಡುತ್ತಾರೆ. ಇಷ್ಟೆಲ್ಲಾ ಜನರ ಮನೆ ಗೆದ್ದಿರುವ ಸಾಯಿ ಪಲ್ಲವಿ ರವರ ಮನಗೆದ್ದ ಮೊದಲ ಕ್ರಷ್ ಯಾರು ಗೊತ್ತಾ?? ಬನ್ನಿ ಈ ಕುರಿತು ಇಂದು ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಾಯಿ ಪಲ್ಲವಿ ರವರು ನಿಮ್ಮ ಮೊದಲ ಕ್ರಷ್ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ, ನನ್ನ ಮೊದಲ ಕ್ರಕ್ರಷ್ ಯಾರು ಎಂದರೆ ಅವರು ಮತ್ತ್ಯಾರು ಅಲ್ಲ ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ. ಅವರ ಚಿತ್ರಗಳನ್ನು ನೋಡುತ್ತಾ ನಾನು ಚಿಕ್ಕವಯಸ್ಸಿನಿಂದಲೂ ಬೆಳೆದಿದ್ದೇನೆ, ಚಿಕ್ಕಂದಿನಿಂದಲೂ ಅವರ ಮೇಲೆ ನನಗೆ ಕ್ರಷ್ ಇತ್ತು. ನಾನು ಅವರ ಜೊತೆ ಇದೀಗ ಚಿತ್ರ ಮಾಡಿದ್ದೇನೆ ಎಂದರೆ ನಿಜಕ್ಕೂ ಬಹಳ ಖುಷಿಯಾಗುತ್ತದೆ, ಅದು ನನ್ನ ಪುಣ್ಯ ಎಂದುಕೊಳ್ಳುತ್ತೇನೆ. ಅವರ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿಯ ಸಂಗತಿ ಎಂದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.