ಸೀತಾ ವಲ್ಲಭ ಗುಬ್ಬಿಗೆ ದಿನೇ ದಿನೇ ಖುಲಾಯಿಸುತ್ತಿದೆ ಅದೃಷ್ಟ ! ಏನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಗುಬ್ಬಿ ಎಂಬ ಪಾತ್ರದ ಮೂಲಕ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಸ್ಸಿನಲ್ಲಿ ಅ’ಚ್ಚಳಿಯದೆ ಉಳಿದಿರುವ ಸುಪ್ರೀತಾ ರವರು ನಿಮಗೆಲ್ಲರಿಗೂ ತಿಳಿದ ಇರುತ್ತಾರೆ. ಸೀತಾ ವಲ್ಲಭ ಧಾರಾವಾಹಿ ಈ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದ ಇವರು ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಸಲಿಗೆ ಇವರಿಗೆ ನಟನೆಗೆ ಬರಬೇಕು ಎಂಬುವ ಯಾವುದೇ ಆಲೋಚನೆ ಇರಲಿಲ್ಲವಾದರೂ ಅದೃಷ್ಟದ ಬಾಗಿಲು ತ’ಟ್ಟಿ ಬಂದ ಮೈಥಿಲಿ ಅಲಿಯಾಸ್ ಸುಪ್ರೀತಾ ರವರಿಗೆ ಸಾಲು ಸಾಲು ಅದೃಷ್ಟಗಳು ಹುಡುಕಿಕೊಂಡು ಬರುತ್ತಿವೆ.
ಹೌದು ಸ್ನೇಹಿತರೇ ಅಸಲಿಗೆ ನಟಿಯಾಗಬೇಕು ಎಂಬ ಯಾವುದೇ ಕನಸು ಇಲ್ಲದೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಪ್ರೀತಾ ರವರು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವಾಗ ಸ್ಕ್ರಿಪ್ಟ್ ಬರೆಯುತ್ತಿದ್ದರಂತೆ. ಹೀಗೆ ಸ್ಕ್ರಿಪ್ಟ್ ಬರೆಯುತ್ತಾ ಬರೆಯುತ್ತಾ ಖಾಸಗಿ ವಾಹಿನಿಯೊಂದರಲ್ಲಿ ಅವಕಾಶ ಪಡೆಯಲು ಪರೀಕ್ಷೆಗೆ ಹೋದಾಗ ಕಲರ್ಸ್ ಕನ್ನಡ ವಾಹಿನಿಯ ಮ್ಯಾನೇಜ್ಮೆಂಟ್ ಇವರನ್ನು ನೋಡಿ ಸ್ಕ್ರಿಪ್ಟ್ ಬರೆಯಲು ಅಲ್ಲ ನೀವು ನಟಿಯಾಗಿ ಎಂದು ಆಫರ್ ನೀಡಿದರು.
ನೀಡಿದ ಆಫರನ್ನು ತಿರಸ್ಕರಿಸಲು ಯಾವುದೇ ಕಾರಣ ಇರಲಿಲ್ಲ, ಆದ್ದರಿಂದ ಒಪ್ಪಿಕೊಂಡು ಸೀತಾ ವಲ್ಲಭ ಧಾರವಾಹಿಯಲ್ಲಿ ನಟಿಸಿದರು. ಹೀಗೆ ಸೀತಾ ವಲ್ಲಭ ಧಾರವಾಹಿಯಲ್ಲಿ ನಟಿಸಿದ ಬಳಿಕ ಇವರು ಕರ್ನಾಟಕದ ಮನೆ ಮಾತಾದರು. ತದ ನಂತರ ಹೀಗೆ ಸೀತಾ ವಲ್ಲಭ ಧಾರವಾಹಿಯಲ್ಲಿ ನಟನೆಯ ಮಾಡುವಾಗಲೇ ಸುವರ್ಣ ವಾಹಿನಿಯಿಂದ ಇವರಿಗೆ ಸರಸು ಎಂಬ ಧಾರವಾಹಿಯಲ್ಲಿ ನಟನೆ ಮಾಡಲು ಅವಕಾಶ ದೊರೆಯಿತು. ಇಷ್ಟೇ ಅಲ್ಲದೆ ಈಗಾಗಲೇ ಬೆಳ್ಳಿತೆರೆಗೆ ಕೂಡ ಕಾಲಿಟ್ಟಿರುವ ನಟಿ ಸುಪ್ರೀತ ಬಹುದು ಲಾಂಗ್ ಡ್ರೈವ್ ಎಂಬ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನೆಟ್ಫ್ಲಿಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾದ ಒಂದು ವೆಬ್ಸೇರಿಸ್ ನಲ್ಲಿ ಕೂಡ ನಟನೆ ಮಾಡುತ್ತಿದ್ದಾರೆ. ಹೀಗೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿ ಸುಪ್ರೀತಾ ರವರ ಚಿತ್ರರಂಗದ ಜರ್ನಿ ಮತ್ತು ಮತ್ತಷ್ಟು ಯಶಸ್ವಿಗೊಳ್ಳಲು ಎಂದು ಹಾರೈಸುತ್ತೇವೆ.