Neer Dose Karnataka
Take a fresh look at your lifestyle.

ಕಿಚ್ಚ ಸುದೀಪ್ ಶರಣಾಗಿರುವುದು ಇಬ್ಬರು ನಟರಿಗೆ ಮಾತ್ರ ! ಯಾರಂತೆ ಗೊತ್ತಾ??

8

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ಬರಾಗಿರುವ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದು ಕೊಂಡಿರುವ ಸುದೀಪ್ ರವರ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಯಶಸ್ಸಿನ ಚಿತ್ರಗಳನ್ನು ನೀಡಿರುವ ಸುದೀಪ್ ರವರು, ಇತರ ಭಾಷೆಗಳ ಚಿತ್ರರಂಗದಲ್ಲಿಯು ಕೂಡ ಹಲವಾರು ಸಿನಿಮಾಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ನಿರ್ವಹಣೆ ಮಾಡಿದ್ದಾರೆ. ಅದರಲ್ಲಿಯೂ ತೆಲುಗು ಚಿತ್ರರಂಗದಲ್ಲಿ ಚಿತ್ರಗಳಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ಸುದೀಪ್ ರವರು ತೆಲುಗಿನಲ್ಲಿಯೂ ಕೂಡ ಉತ್ತಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ

ಇನ್ನು ಕರ್ನಾಟಕದಲ್ಲಿ ಅತಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ನಟ ರಲ್ಲಿ ಮೊದಲನೇ ಸ್ಥಾನದಲ್ಲಿ ಕಂಡು ಬರುವ ಸುದೀಪ್ ರವರು ಇಡೀ ತಮ್ಮ ಚಿತ್ರರಂಗದ ಜೀವನದಲ್ಲಿ ತಾನು ಶರಣಾಗಿರುವುದು ಇಬ್ಬರು ನಟರಿಗೆ ಮಾತ್ರ ಎಂದು ಹೇಳಿಕೆ ನೀಡಿದ್ದಾರೆ. ಅವರು ಯಾರು ಯಾರು ಎಂಬುದರ ಕುರಿತು ಮಾಹಿತಿ ನೀಡುತ್ತೇವೆ ಕೇಳಿ.

ಸ್ನೇಹಿತರೆ ಇದೀಗ ಮಾತನಾಡಿರುವ ಸುದೀಪ್ ರವರು ನಾನು ನನ್ನ ನಟನಾ ಜೀವನದಲ್ಲಿ ಶರಣಾಗಿರುವ ಮೊದಲನೆ ನಟ ಯಾರು ಎಂದರೆ ಅವರು ಮತ್ತ್ಯಾರು ಅಲ್ಲ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ವಿಷ್ಣುವರ್ಧನ್, ಅದರಲ್ಲಿಯೂ ಮಾತಾಡು ಮಾತಾಡು ಮಲ್ಲಿಗೆ ಸಿನಿಮಾ ಚಿತ್ರೀಕರಣ ಮಾಡುವಾಗ ನಿಜಕ್ಕೂ ಫಿದಾ ಹಾಗಿದ್ದೆ, ಇನ್ನು ಎರಡನೆಯದಾಗಿ ಪ್ರಕಾಶ್ ರೈ, ಅವರಿಗೂ ನನಗೂ ಉತ್ತಮ ಬಾಂಧವ್ಯವಿದೆ, ಸದಾ ಇಬ್ಬರು ಮನಬಿಚ್ಚಿ ಮಾತನಾಡಿಕೊಳ್ಳುತ್ತೇವೆ, ನನ್ನ ಇಡೀ ನಟನಾ ಜೀವನದಲ್ಲಿ ಶರಣಾಗಿರುವುದು ಇಬ್ಬರಿಗೆ ಮಾತ್ರ ಎಂದಿದ್ದಾರೆ.

Leave A Reply

Your email address will not be published.