Neer Dose Karnataka
Take a fresh look at your lifestyle.

ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದ್ದ ಮಂಜುರವರು ಬಿಗ್ ಬಾಸ್ ನಲ್ಲಿ ಅಸಲಿ ಪಡೆಯುವ ಸಂಭಾವನೆ ಎಷ್ಟು ಗೊತ್ತೆ??

5

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಇದೀಗ ಎಲ್ಲಿ ನೋಡಿದರೂ ಮಂಜುರವರು ಬಹಳ ಅದ್ಭುತವಾಗಿ ಆಟವಾಡುತ್ತಿದ್ದಾರೆ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ. ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿರುವ ಮಜಾಭಾರತ ಖ್ಯಾತಿಯ ಮಂಜು ಪಾವಗಡ ರವರು ಇದೀಗ ಗೆಲ್ಲುವ ನೆಚ್ಚಿನ ಸ್ಪರ್ಧೆ ಎಂದರೆ ತಪ್ಪಾಗಲಾರದು. ಇವರಿಗೆ ಶಂಕರ್ ಅಶ್ವಥ್, ರಾಜೀವ್, ಅರವಿಂದ್ ರವರು ಕಠಿಣ ಪೈಪೋಟಿ ನೀಡಿದರೂ ಕೂಡ ಮಂಜು ಪಾವಗಡ ರವರ ನಕ್ಕು ನಲಿಸುವ ಹಾವಭಾವದ ಮುಂದೆ ಗೆಲ್ಲುವುದು ಕೊಂಚ ಕಷ್ಟವೇ ಸರಿ.

ಹೀಗೆ ಬಿಗ್ ಬಾಸ್ ಮನೆಗೆ ತೆರಳಿದ ಮೊದಲ ದಿನದಿಂದಲೂ ಮಂಜು ಪಾವಗಡ ರವರು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೀಗೆ ಬಿಗ್ ಬಾಸ್ ಮನೆಯಲ್ಲಿ ಆಟವಾಡಲು ಅವಕಾಶ ಪಡೆದಿರುವ ಮಂಜು ಪಾವಗಡ ರವರು ನಿಜ ಜೀವನದಲ್ಲಿ ಇಲ್ಲಿಯವರೆಗೂ ಹೋಗಲು ಸಾಕಷ್ಟು ಕಷ್ಟ ಪಟ್ಟು ಹಂತ ಹಂತವಾಗಿ ಮೇಲೆ ಹೋಗಿದ್ದಾರೆ.

ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಮಂಜು ಪಾವಗಡ ರವರು ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವಾರದ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ, ಬಡ ಕುಟುಂಬದಲ್ಲಿ ಜನಿಸಿ ಇಲ್ಲಿಯವರೆಗೂ ತೆರಳಿರುವ ಮಂಜು ಪಾವಗಡ ರವರು ಇದೀಗ ಕಿರುತೆರೆಯ ಮೂಲಗಳ ಪ್ರಕಾರ ಒಂದು ವಾರಕ್ಕೆ 25 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇವರ ಈ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave A Reply

Your email address will not be published.