Neer Dose Karnataka
Take a fresh look at your lifestyle.

ಗಡಿಯಲ್ಲಿ ಪ್ರಾಣ ಅರ್ಪಿಸಿ, ಅಶೋಕ ಚಕ್ರ ಪಡೆದ ಮೊದಲ ಕನ್ನಡಿಗನ ಮಗಳು ಖ್ಯಾತ ನಟಿ ! ಯಾರು ಗೊತ್ತೆ??

2

ನಮಸ್ಕಾರ ಸ್ನೇಹಿತರೇ ನಾವು ಇಂದು ಒಬ್ಬ ಹೆಮ್ಮೆಯ ಯೋಧನ ಕಥೆಯ ಸಮೇತ ಆತನ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಿದ್ದೇವೆ, ಈ ಯೋಧ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಮಹಾನ್ ಯೋಧರಲ್ಲಿ ಒಬ್ಬರು, ಅವರು ಅಶೋಕ ಚಕ್ರ ಪಡೆದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದಾರೆ, ಹೀಗೆ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧನ ಮಗಳು ಇಂದು ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೆಸರು ಗಳಿಸುತ್ತಿರುವ ಖ್ಯಾತ ನಟಿಯರಲ್ಲಿ ಒಬ್ಬರು. ಬನ್ನಿ ಈ ಕುರಿತು ಇಂದು ಸಂಪೂರ್ಣ ಮಾಹಿತಿ ನಿಮಗೆ ನೀಡುತ್ತೇವೆ.

ಸ್ನೇಹಿತರೇ ನಿಮಗೆ ಉರಿ ಎಂಬ ಊರಿನ ಹೆಸರು ಕೇಳಿದ ತಕ್ಷಣ, ಭಾರತ ಸೇನೆಯು ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಘಟನೆ ನೆನಪಾಗುತ್ತದೆ. ಇದೇ ಸರ್ಜಿಕಲ್ ಸ್ಟ್ರೈಕ್ ನ ಮೂಲಕ ಭಾರತ ದೇಶವು, ಒಮ್ಮೆ ಗಡಿ ದಾಟುವ ನಿರ್ಧಾರ ಮಾಡಿದರೇ ಉಳಿದ ರಾಷ್ಟ್ರಗಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ವಿಶ್ವಕ್ಕೆ ಸಾಡಿದ ರೀತಿಯನ್ನು ನೆನಪಿಸುತ್ತದೆ. ಇದೇ ಉರಿ ಎಂಬ ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಅಂದರೆ 2007ರಲ್ಲಿ ಎದುರುಗಡೆಯಿಂದ ಬರಲಾಗದ ಪಾಕಿಸ್ತಾನಿಯರು ಎಂದಿನಂತೆ ಗಡಿಯಲ್ಲಿ ನುಸುಳಲು ಹೊರಟಾಗ ಈ ಸುದ್ದಿ ಭಾರತೀಯ ಸೇನೆಗೆ ತಿಳಿಯುತ್ತದೆ.

ಈ ಸುದ್ದಿ ಭಾರತೀಯ ಸೇನೆಯನ್ನು ತಲುಪಿದ ಕೂಡಲೇ ಮರಾಠ ಲೈಟ್ ಇನ್ಫೆಂಟ್ರಿಯ ಒಂಬತ್ತನೇ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕನ್ನಡಿಗ ವಸಂತ್ ರವರು ತಮ್ಮ ಸೈನಿಕರ ತಂಡವನ್ನು ಕರೆದುಕೊಂಡು ಗಡಿ ರಕ್ಷಿಸಲು ತೆರಳುತ್ತಾರೆ. ಹಲವಾರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಯಾರೊಬ್ಬರೂ ಕೂಡ ಗಡಿ ದಾಟುವಲ್ಲಿ ವಿಫಲವಾಗುತ್ತಾರೆ, 8 ಪಾಕಿಸ್ತಾನಿ ನುಸುಳುಕೋರರನ್ನು ನರಕಕ್ಕೆ ಕಳುಹಿಸುವುದರಲ್ಲಿ ಭಾರತೀಯ ಸೇನೆ ಯಶಸ್ವಿಯಾಗುತ್ತದೆ,

ಆದರೆ ಇದೇ ಸಂದರ್ಭದಲ್ಲಿ ಕನ್ನಡಿಗ ವಸಂತ ರವರು ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಿ ಭಾರತವನ್ನು ರಕ್ಷಿಸುವುದರಲ್ಲಿ ಯಶಸ್ವಿಯಾಗುತ್ತಾರೆ. ಭಾರತ ಮಾತೆಯ ಇವರ ಕಾರ್ಯವನ್ನು ಎಂದಿಗೂ ಮರೆಯದಂತಹ ಸಾಧನೆ ಮಾಡಿ ತಮ್ಮ ಪ್ರಾಣವನ್ನು ಭಾರತ ಮಾತೆಗೆ ಅರ್ಪಿಸುತ್ತಾರೆ ಹೀಗೆ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ರಕ್ಷಿಸಿದ ವಸಂತ್ ರವರ ಚಿಕ್ಕ ವಯಸ್ಸಿನ ಪತ್ನಿ ಹಾಗೂ ಚಿಕ್ಕ ವಯಸ್ಸಿನ ಮಗಳು ಇಬ್ಬರು ಅನಾಥರಾಗಿ ಬಿಡುತ್ತಾರೆ,

ತದ ನಂತರ ಭಾರತ ದೇಶ ಇವರ ಸಾಧನೆಯನ್ನು ಗುರುತಿಸಿ ವಸಂತ್ ರವರಿಗೆ ಅತ್ಯುನ್ನತ ಸೇನಾ ಗೌರವವಾದ ಅಶೋಕ ಚಕ್ರ ಪ್ರಶಸ್ತಿಯನ್ನು ಘೋಷಣೆ ಮಾಡುತ್ತದೆ. ಇಂತಹ ಮಹಾನ್ ಯೋಧನ ಮಗಳು ಮತ್ಯಾರು ಅಲ್ಲ ಅವರೇ ರುಕ್ಮಿಣಿ ವಸಂತ್, ಇವರಿಗೆ ಇದೀಗ 26 ವರ್ಷ. ತಾಯಿಯ ಜೊತೆ ಭರತ ನಾಟ್ಯ ಕಲಿತು ಮಾಡೆಲಿಂಗ್ ಕಡೆ ಮುಖ ಮಾಡಿ ಸ್ಯಾಂಡಲ್ವುಡ್ನಲ್ಲಿ ಬೀರ್ ಬಲ್ ಚಿತ್ರದ ಮೂಲಕ ಪಾದರ್ಪಣೆ ಮಾಡಿದ ಯಶಸ್ಸು ಗಳಿಸಿರುವ ರುಕ್ಮಿನಿ ವಸಂತ್.

ಇವರು ಇದೀಗ ರಕ್ಷಿತ್ ಶೆಟ್ಟಿ ರವರ ಜೊತೆ ಸಪ್ತ ಸಾಗರದಾಚೆ ಎಲ್ಲೋ ಎಂಬ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ, ಉಪೇಂದ್ರ ರವರ ಸಿನಿಮಾದಲ್ಲಿ ಕೂಡ ನಟಿಸುವ ಅವಕಾಶ ಒದಗಿ ಬಂದಿತ್ತು, ಆದರೆ ಸಮಯವಕಾಶವಿಲ್ಲದ ಕಾರಣ ಇವರು ಉಪೇಂದ್ರ ರವರ ಸಿನಿಮಾವನ್ನು ಕಳೆದ ಎರಡು ದಿನಗಳ ಹಿಂದೆ ತಿರಸ್ಕರಿಸಿದ್ದಾರೆ. ಇವರು ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ, ಹೆಚ್ಚು ಹೆಚ್ಚು ಚಿತ್ರಗಳನ್ನು ಮಾಡಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ. ಧನ್ಯವಾದಗಳು.

Leave A Reply

Your email address will not be published.