Neer Dose Karnataka
Take a fresh look at your lifestyle.

ಕೊನೆಗೂ ಅಧಿಕೃತವಾಗಿ ಮದುವೆಯ ಬಗ್ಗೆ ಬಾಯ್ಬಿಟ್ಟ ಚಂದನ್ ! ಹುಡುಗಿ ಯಾರಂತೆ ಗೊತ್ತಾ??

15

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ವಿವಿಧ ರಿಯಾಲಿಟಿ ಶೋಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟನೆ ಮಾಡುವ ಮೂಲಕ ಪ್ರಸಿದ್ಧಿಯನ್ನು ಪಡೆದು ಕೊಂಡಿದ್ದ ನಟ ಚಂದನ್ ರವರು ಇತ್ತೀಚಿನ ದಿನಗಳಲ್ಲಿ ತೆಲುಗಿನ ಧಾರವಾಹಿಗಳಲ್ಲಿ ಕೂಡಾ ನಟನೆ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿರುವ ಚಂದನ್ ರವರು ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಕೂಡ ನಟನೆ ಮಾಡುವ ಮೂಲಕ ಪ್ರಸಿದ್ಧಿ ಪಡೆದು ಕೊಂಡಿದ್ದಾರೆ.

ಇನ್ನು ಕೇವಲ ಹೀಗೆ ಧಾರಾವಾಹಿಗಳ ಮೂಲಕ ಅಷ್ಟೇ ಅಲ್ಲದೆ ತಮ್ಮ ಮದುವೆಯ ವಿಚಾರವಾಗಿ ಚಂದನ ರವರು ಸದಾ ಸದ್ದು ಮಾಡುತ್ತಿರುತ್ತಾರೆ, ಕಿರುತೆರೆಯ ಮತ್ತೊಬ್ಬರು ಕ್ಯಾತ ನಟಿಯಾಗಿರುವ ಕವಿತಾ ಗೌಡರವರ ಜೊತೆ ಬಹಳ ಆತ್ಮೀಯವಾಗಿ ಕಾಣಿಸಿ ಕೊಳ್ಳುವ ಚಂದನ್ ರವರು ಮದುವೆಯ ವಿಚಾರ ಬಂದಾಗ ಯಾವುದೇ ಪ್ರಶ್ನೆಗಳಿಗೂ ಕೂಡ ಉತ್ತರ ನೀಡುವುದಿಲ್ಲ, ಕನಿಷ್ಠ ಕವಿತ ಗೌಡ ರವರು ನನ್ನ ಗರ್ಲ್ ಫ್ರೆಂಡ್ ಅಲ್ಲವೇ ಅಲ್ಲ ಎಂದು ಕೂಡ ಇಲ್ಲಿಯವರೆಗೂ ಎಲ್ಲೂ ಹೇಳಿಲ್ಲ.

ಅದೇ ಕಾರಣಕ್ಕಾಗಿ ಚಂದನ್ ಹಾಗೂ ಕವಿತಾ ರವರ ಮದುವೆಯ ಕುರಿತು ಹಲವಾರು ವಿಚಾರಗಳು ಹರಿದಾಡುತ್ತವೆ. ಇನ್ನು ಇದೀಗ ಮತ್ತೊಮ್ಮೆ ಮದುವೆ ವಿಷಯ ಸದ್ದು ಮಾಡಲು ‌ ಚಂದನ್ ಅವರೇ ಕಾರಣ, ಯಾಕೆಂದರೆ ಧಾರವಾಹಿಯಿಂದ ಬ್ರೇಕ್ ಪಡೆದು ಕೊಂಡಿರುವ ಚಂದನ್ ರವರು ಮದುವೆಯಾಗುವುದಾಗಿ ಖಚಿತ ಪಡಿಸಿದ್ದಾರೆ, ಈ ಕುರಿತು ಪ್ರಶ್ನೆ ಮಾಡಿದಾಗ ಹೌದು ಮದುವೆಯಾಗುತ್ತಿದ್ದೇನೆ ಎಂದು ಉತ್ತರ ನೀಡಿರುವ ಚಂದನ್ ರವರು ಹುಡುಗಿ ಯಾರು ಎಂದಾಗ ಮಾತ್ರ ಈಗಲೇ ಹೇಳಿದರೇ ದೊಡ್ಡ ಸುದ್ದಿಯಾಗುತ್ತದೆ ಎಂದಿದ್ದಾರೆ, ಕವಿತಾ ಗೌಡ ರವರನ್ನು ಮದುವೆಯಾಗುತ್ತೀರಾ ಎಂದು ಪ್ರಶ್ನೆ ಕೇಳಿದಾಗ ಇಲ್ಲ ಎನ್ನದೇ ಮೌನಕ್ಕೆ ಜಾರಿದ್ದಾರೆ. ಆದ ಕಾರಣ ಕವಿತಾ ಗೌಡ ರವರನ್ನು ಮದುವೆಯಾಗುವುದು ಖಚಿತ ಎಂಬ ಮಾತು ಕೇಳಿ ಬಂದಿದೆ.

Leave A Reply

Your email address will not be published.