Neer Dose Karnataka
Take a fresh look at your lifestyle.

380 ರೂಪಾಯಿಯೊಂದಿಗೆ ಏನಾದರೂ ಸಾಧಿಸಬೇಕು ಎಂದು ಹೆಜ್ಜೆಯಿಟ್ಟ ರವಿ ಬೆಳಗೆರೆಯವರ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತಾ??

8

ನಮಸ್ಕಾರ ಸ್ನೇಹಿತರೇ ರವಿ ಬೆಳಗೆರೆ ರವರ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ, ಇವರು ಕಳೆದ ಕೆಲವು ತಿಂಗಳುಗಳ ಹಿಂದೆ ಇಹಲೋಕ ತ್ಯಜಿಸಿದರೂ ಕೂಡ ರವಿ ಬೆಳಗೆರೆಯವರನ್ನು ಮರೆಯಲು ಸಾಧ್ಯವೇ ಇಲ್ಲ, ಬಡತನದ ಕುಟುಂಬದಲ್ಲಿ ಹುಟ್ಟಿ, ಜೀವನದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದ ರವಿ ಬೆಳಗೆರೆಯವರು ರೌಡಿ ಆಗಲಿ ಸೆಲೆಬ್ರೆಟಿಗಳ ಆಗಲಿ ಅಥವಾ ಇನ್ಯಾವುದೇ ವ್ಯಕ್ತಿಗಳಾಗಲಿ ಎಲ್ಲರನ್ನೂ ಒಂದೇ ರೀತಿ ಪರಿಗಣಿಸಿ ಪತ್ರಿಕೆಯಲ್ಲಿ ಬರೆಯುವ ಮೂಲಕ ಸದ್ದು ಮಾಡಿದ ವ್ಯಕ್ತಿ ಎಂದರೆ ಅವರು ರವಿ ಬೆಳಗೆರೆ ಮಾತ್ರ.

ಇವರು ಇಂದು ನಮ್ಮ ಜೊತೆ ಇಲ್ಲ ಆದರೆ ಇವರ ಪತ್ರಿಕೆಯ ಕುರಿತು ಹಾಗೂ ಇವರ ಜೀವನದ ಕುರಿತು ಇಂದು ಹೆಚ್ಚಿನ ಮಾಹಿತಿ ನೀಡುತ್ತೇವೆ ಕೇಳಿ, ಸ್ನೇಹಿತರೇ ಇವರು 1995 ರಲ್ಲಿ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು, ಪತ್ರಿಕೆ ಆರಂಭಿಸಿದ ಕೆಲವೇ ಕೆಲವು ದಿನಗಳಲ್ಲಿ ಕನ್ನಡದ ಟಾಪ್ ಪತ್ರಿಕೆಗಳನ್ನು ಹಿಂದಿಕ್ಕೆ ಜನಪ್ರಿಯತೆಯನ್ನು ಪಡೆದುಕೊಳ್ಳುವಲ್ಲಿ ಹಾಯ್ ಬೆಂಗಳೂರು ಪತ್ರಿಕೆ ಯಶಸ್ವಿಯಾಗಿತ್ತು, ಇದಕ್ಕೆಲ್ಲ ಕಾರಣ ರವಿ ಬೆಳಗೆರೆ ಅವರು ಬರೆಯುತ್ತಿದ್ದ ರೀತಿ. ಇನ್ನು ಹೀಗೆ ಪತ್ರಿಕೆ ಆರಂಭಿಸುವ ಮುನ್ನ ರವಿ ಬೆಳಗೆರೆ ಅವರು ಶ್ರೀಮಂತ ಕುಟುಂಬದಿಂದ ಬಂದಿರಲಿಲ್ಲ, ಬಡತನದಲ್ಲಿ ಹುಟ್ಟಿ ಬೆಳೆದಿದ್ದ ಪ್ರತಿಭೆ ಇವರು.

ಇವಳ ಕೈಯಲ್ಲಿ 380 ರೂಪಾಯಿ ಇಟ್ಟುಕೊಂಡು, ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಲೋಚನೆಯೊಂದಿಗೆ ಪತ್ರಿಕೆ ಆರಂಭಿಸಿ ಅದರ ಜೊತೆಗೆ ಪುಸ್ತಕಗಳನ್ನು ಕೂಡ ಬರೆದು ಬಿಡುಗಡೆ ಮಾಡುತ್ತಿದ್ದರು, ಕೆಲವೊಂದಷ್ಟು ದಿನಗಳ ಕಾಲ ನಿರೂಪಕರಾಗಿಯೂ ಕೂಡ ಇವರು ಕೆಲಸ ಮಾಡಿದ್ದರು, ಇನ್ನು ಪತ್ರಿಕೆಯಿಂದ ಬಂದ ಆದಾಯದಿಂದ ಶಾಲೆ ಕೂಡ ಆರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ಹೊಂದಿರುವ ಸಂಸ್ಥೆಯಾಗಿ ಇದೀಗ ಪ್ರಾರ್ಥನಾ ಶಾಲೆ ಸಂಸ್ಥೆ ಬೆಳೆದಿದೆ. ಹೀಗೆ ಪತ್ರಿಕೆ, ಪುಸ್ತಕ, ಶಾಲೆ ವಿವಿಧ ಉದ್ಯಮಗಳಿಂದ ರವಿ ಬೆಳಗೆರೆಯವರು 275 ಕೋಟಿ ಗೂ ಮೀರಿದ ಆಸ್ತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

Leave A Reply

Your email address will not be published.