Neer Dose Karnataka
Take a fresh look at your lifestyle.

ಜಾನ್ವಿ ಕಪೂರ್ ಕಸಿನ್ ಅನ್ನು ಸಿನೆಮಾಗೆ ಕರೆತರುತ್ತಿರುವ ಕರಣ್, ಹೊಸ ನಟಿ ಹೇಗಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದಲ್ಲಿ ಕರಣ್ ಜೋಹರ್ ಅವರು ನಿಮಗೆಲ್ಲರಿಗೂ ತಿಳಿದಿರುವಂತೆ ಸಿನಿಮಾ ಕುಟುಂಬದ ಹಲವಾರು ನಟ ಹಾಗೂ ನಟಿಯರನ್ನು ಪರಿಚಯ ಮಾಡಿ ಮೊದಲ ಚಿತ್ರದಲ್ಲಿಯೇ ಯಶಸ್ವಿ ಗೊಳ್ಳುವಂತೆ ಮಾಡಿದ್ದಾರೆ, ಇಲ್ಲಿಯವರೆಗೂ ಆಲಿಯಾ ಭಟ್ ವರುನ್ ಧವನ್ ಜಾನ್ವಿ ಕಪೂರ್ ಹೀಗೆ ಇದೀಗ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಎಲ್ಲರನ್ನೂ ಪರಿಚಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ

ಇನ್ನೂ ಕರಣ್ ರವರು ಈ ರೀತಿಯ ಕಾರ್ಯಗಳನ್ನು ಮಾಡಿದ್ದಕ್ಕಾಗಿ ಹಲವಾರು ಬಾರಿ ವಿವಾದಗಳನ್ನು ಕೂಡ ಸೃಷ್ಟಿ ಮಾಡಿ ಕೊಂಡಿದ್ದಾರೆ, ಅದರಲ್ಲಿಯೂ ಸುಶಾಂತ್ ಸಿಂಗ್ ರವರ ಘಟನೆ ನಡೆದಾಗ ಸ್ವಜನ ಪಕ್ಷಪಾತದ ಮತ್ತೊಂದು ಮುಖ ಎಂದು ಕರಣ್ ಜೋಹರ್ ಅವರನ್ನು ಇಡೀ ದೇಶದ ಎಲ್ಲೆಡೆ ಬಾಯ್ ಕೋಟ್ ಮಾಡುವಂತೆ ಮಾತುಗಳು ಕೇಳಿ ಬಂದಿದ್ದವು.

ಇದೀಗ ಇಷ್ಟೆಲ್ಲಾ ಆದರೂ ಕೂಡ ಕಪೂರ್ ಕುಟುಂಬದ ಮತ್ತೊಂದು ನಟಿಯನ್ನು ಪರಿಚಯಿಸಲು ಸಿದ್ಧತೆ ನಡೆಸಿರುವ ಕರಣ್ ಜೋಹರ್ ರವರು, ನಟಿಯ ಫೋಟೋಗಳನ್ನು ಹಂಚಿಕೊಂಡು ಈಕೆ ಸಿನಿಮಾ ಜಗತ್ತಿಗೆ ಬರಲಿದ್ದಾರೆ ಎಂದು ಅಧಿಕೃತವಾದ ಪ್ರಕಟಣೆ ಹೊರಡಿಸಿದ್ದಾರೆ. ಹೊಸ ನಟಿಯ ಫೋಟೋಗಳು ಕೆಳಗಡೆ ಇದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ. ಇವರು ಜಾಹ್ನವಿ ಕಪೂರ್ ರವರ ಕಸಿನ್ ಎಂಬುದು ತಿಳಿದುಬಂದಿದೆ.

 

Comments are closed.