Neer Dose Karnataka
Take a fresh look at your lifestyle.

ಕಾವ್ಯ ಗೌಡ ಅಲ್ಲ, ರಾಜನಂದಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಖ್ಯಾತ ಕಿರುತೆರೆ ನಟಿ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಪಾಪ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ರಾಜನಂದಿನಿ ಪಾತ್ರ ಯಾವಾಗ ಪ್ರಸಾರವಾಗಲಿದೆ ಹಾಗೂ ರಾಜನಂದಿನಿ ಪಾತ್ರ ಹೇಗೆ ಮುಂದುವರೆಯಲಿದೆ ಎಂಬುದರ ಕುರಿತು ದಿನೇ ದಿನೇ ಚರ್ಚೆಗಳು ಹೆಚ್ಚಾಗುತ್ತವೆ, ಧಾರವಾಹಿಯ ಕಥೆ ಎಳೆಯಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಕೂಡ ರಾಜನಂದಿನಿ ಪಾತ್ರಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುವುದು ಸುಳ್ಳಲ್ಲ.

ಇನ್ನು ಈ ರಾಜನಂದಿನಿ ಪಾತ್ರದಲ್ಲಿ ಆರ್ಯವರ್ಧನ್ ರವರ ಜೊತೆ ಯಾರು ನಟಿಸುತ್ತಾರೆ ಎಂಬುದರ ಕುರಿತು ಕೂಡ ಹೆಚ್ಚಿನ ಚರ್ಚೆ ನಡೆಯುತ್ತಿದೆ ಅದರಲ್ಲಿಯೂ ಅಭಿಮಾನಿಗಳು ರಾಜನಂದಿನಿ ಪಾತ್ರದಲ್ಲಿ ಅನು ಸಿರಿಮನೆ ರವರೆ ನಟಿಸಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ ಆದರೆ ಅದು ಸಾಧ್ಯವಿಲ್ಲ ಯಾಕೆಂದರೆ ಇಬ್ಬರೂ ನೋಡಲು ಒಂದೇ ರೀತಿ ಇದ್ದರೆ ಕಥೆ ಸಾಗಿಸುವುದು ಬಹಳ ಕಷ್ಟವೆನಿಸುತ್ತದೆ, ಹಾಗೂ ಅರ್ಥವಿಲ್ಲದಂತೆ ಆಗುತ್ತದೆ. ಅದೇ ಕಾರಣಕ್ಕಾಗಿ ಮತ್ಯಾವ ನಟಿ ರಾಜನಂದಿನಿ ಪಾತ್ರದಲ್ಲಿ ನಟನೆ ಮಾಡುತ್ತಾರೆ ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ.

ಈ ಚರ್ಚೆಯಲ್ಲಿ ಹಿಂದಿ ಕಿರುತೆರೆಯ ಎರಿಕಾ ಫರ್ನಾಂಡಿಸ್ ಹಾಗೂ ಕಾವ್ಯ ಗೌಡರವರ ಹೆಸರು ಮೊದಲಿಂದಲೂ ಕೇಳಿ ಬರುತ್ತಿತ್ತು, ಆದರೆ ಇದೀಗ ರಾಜ ನಂದಿನಿ ಪಾತ್ರದಲ್ಲಿ ಕನ್ನಡ ಕಿರುತೆರೆಯಲ್ಲಿ ಭಾರೀ ಜನಪ್ರಿಯತೆಯನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಚಿನ್ನು ಪಾತ್ರದ ಮೂಲಕ ಗಳಿಸಿಕೊಂಡಿರುವ ಕವಿತಾ ಗೌಡ ರವರು ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಒಂದು ವೇಳೆ ಅದೇ ನಡೆದಲ್ಲಿ ಖಂಡಿತ ರಾಜನಂದಿನಿ ಪಾತ್ರ ಪ್ರೇಕ್ಷಕರಿಗೆ ಮತ್ತು ಇಷ್ಟವಾಗಲಿದೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುಡುವುದನ್ನು ಮರೆಯಬೇಡಿ.

Comments are closed.