Neer Dose Karnataka
Take a fresh look at your lifestyle.

ಶಿವ ಪುರಾಣದ ಪ್ರಕಾರ, ಇಹಲೋಕ ತ್ಯಜಿಸುವ ಮುನ್ನ ಮನುಷ್ಯನಿಗೆ ಈ ಸೂಚನೆಗಳು ಕಾಣಿಸುತ್ತವೆ ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಭೂಮಿ ಮೇಲೆ ಜನಿಸಿದ ಪ್ರತಿಯೊಂದು ಜೀವವು ಒಂದು ದಿನ ಜಗತ್ತನ್ನು ಬಿಟ್ಟು ಹೋಗಲೇಬೇಕು. ಅಂತ್ಯ ಎಂಬುದು ಪ್ರತಿ ಜೀವಿಯ ಜೀವನದಲ್ಲಿ ಅತ್ಯಂತ ದೊಡ್ಡ ಸತ್ಯ ವಾಗಿದ್ದರು ಕೂಡ ಯಾರು ಅದನ್ನು ನೆನೆಪು ಕೂಡ ಇಟ್ಟುಕೊಳ್ಳುವುದಿಲ್ಲ. ಮನುಷ್ಯರು ಯಾರು ಕೂಡ ಶಾಶ್ವತವಲ್ಲ, ಆದರೆ ಎಲ್ಲರಿಗೂ ಅಮರವಾಗಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದೇ ಕಾರಣಕ್ಕಾಗಿ ತಮ್ಮ ಅಂತ್ಯದ ಕುರಿತು ಕೇಳಿದ ಕ್ಷಣ ಮನುಷ್ಯನು ಸಾಮಾನ್ಯವಾಗಿ ಭಯ ಪಡುತ್ತಾರೆ. ಅದೇ ಕಾರಣಕ್ಕಾಗಿ ತಮ್ಮ ಜೀವನದ ಅಂತ್ಯದ ಕುರಿತು ಎಲ್ಲರಿಗೂ ಹಲವಾರು ಪ್ರಶ್ನೆಗಳಿರುತ್ತವೆ. ಇದರಲ್ಲಿ ನಮ್ಮ ಜೀವನ ಯಾವಾಗ ಅಂತ್ಯವಾಗುತ್ತದೆ ಎಂಬ ಪ್ರಶ್ನೆಯು ಕೂಡ ಇರುತ್ತದೆ. ಈ ಪ್ರಶ್ನೆಗೆ ಯಾರ ಬಳಿಯೂ ಉತ್ತರ ಸಿಗುವುದಿಲ್ಲ, ಆದರೆ ಕೆಲವೊಂದು ಚಿಹ್ನೆಗಳನ್ನು ಮನುಷ್ಯನು ತನ್ನ ಅಂತ್ಯದ ಮುನ್ನದ ಅನುಭವಿಸುತ್ತಾನೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ, ಬನ್ನಿ ಈ ಕುರಿತು ಇಂದು ನಿಮಗೆ ಮಾಹಿತಿ ನೀಡುತ್ತೇವೆ.

ಮೊದಲನೆಯದಾಗಿ ಸ್ನೇಹಿತರೇ ಶಿವ ಪುರಾಣದ ಪ್ರಕಾರ, ಯಾವುದೇ ಒಬ್ಬ ಮನುಷ್ಯನ ದೇಹವು ಇದ್ದಕ್ಕಿಂದ ಹಾಗೆ ಯಾವುದೇ ಕಾರಣಗಳಿಲ್ಲದೆ ಹಳದಿ ಅಥವಾ ಬಿಳಿ ಬಣ್ಣಕ್ಕೆ ತಿರುಗಲು ಆರಂಭಿಸಿದರೆ, ಅಂತಹ ವ್ಯಕ್ತಿ 6 ತಿಂಗಳಲ್ಲಿ ಇಹಲೋಕ ತ್ಯಜಿಸುವುದು ನಿಶ್ಚಿತ ಎಂದು ಹೇಳಲಾಗುತ್ತದೆ. ಇನ್ನು ಅಷ್ಟೇ ಅಲ್ಲಾ ಸರಿಯಾಗಿ ಇದ್ದ ಒಬ್ಬ ವ್ಯಕ್ತಿಯು ಸಾಮಾನ್ಯ ಬಣ್ಣಗಳನ್ನೂ ಗುರುತಿಸುವಲ್ಲಿ ಸಮಸ್ಯೆ ಎದುರಿಸಲು ಆರಂಭಿಸಿದರೇ ಅಥವಾ ಸಾಮಾನ್ಯ ವಾಗಿ ಇದ್ದ ವ್ಯಕ್ತಿಯು ನೋಡುವ ವಸ್ತುಗಳ ಬಣ್ಣಗಳೆಲ್ಲವೂ ಕಪ್ಪು ಬಣ್ಣವಾಗಿ ಕಾಣಿಸಿದರೆ, ಆ ವ್ಯಕ್ತಿಯು ಬಹು ಬೇಗನೆ ಇಹಲೋಕ ತ್ಯಜಿಸುವುದು ಖಚಿತ ಎಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಒಬ್ಬ ವ್ಯಕ್ತಿಯು ತನ್ನೆಡೆ ಆದ ನೆರಳನ್ನು ಸಾಮಾನ್ಯವಾಗಿದ್ದಕ್ಕಿಂತಲೂ ವಿಭಿನ್ನವಾಗಿ ಕಂಡರೆ ಒಂದು ತಿಂಗಳ ಒಳಗೆ ಆತ ಭೂಮಿ ಬಿಟ್ಟು ಹೋಗುತ್ತಾನೆ ಎಂದು ಎಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ವಿವಿಧ ಪ್ರಮುಖ ಅಂಶಗಳನ್ನು ನಾವು ನೋಡುವುದಾದರೇ ಯಾರಾದರೂ ತನ್ನ ನೆರಳನ್ನು ತಾನೇ ನೀರು, ಎಣ್ಣೆ ಅಥವಾ ಕನ್ನಡಿಯಲ್ಲಿ ನೋಡಿಕೊಂಡಾಗ ಅದು ಸಾಮಾನ್ಯವಾಗಿರದೆ ವಿರೂಪವಾಗಿ ಕಾಣಲು ಆರಂಭಿಸಿದರೇ ಆತ ಕೇವಲ ಇನ್ನು ಮುಂದಿನ 6 ತಿಂಗಳುಗಳಲ್ಲಿ ಭೂಮಿ ಬಿಟ್ಟು ತೆರಳುತ್ತಾರೆ ಎಂದರ್ಥ. ಇನ್ನು ಒಬ್ಬ ವ್ಯಕ್ತಿಯ ನಾಲಿಗೆ ಇದ್ದಕ್ಕಿದ್ದ ಹಾಗೆ ಉಬ್ಬಲು ಆರಂಭಿಸಿದರೇ ಅಥವಾ ಆತನ ಹಲ್ಲುಗಳಿಂದ ಕೀವು ಬರಲು ಆರಂಭಿಸಿದರೇ ಆತನ ಆಯಸ್ಸು ಕೇವಲ 6 ತಿಂಗಳು ಎಂದು ಹೇಳಲಾಗುತ್ತದೆ. ಕೊನೆಯದಾಗಿ ಶಿವ ಪುರಾಣದ ಪ್ರಕಾರ, ಇದ್ದಕ್ಕಿದ್ದ ಹಾಗೆ ಒಬ್ಬ ವ್ಯಕ್ತಿಯು ಸೂರ್ಯ, ಬೆಂಕಿ ಅಥವಾ ಚಂದ್ರನಿಂದ ಹೊರಹೊಮ್ಮುವ ಬೆಳಕನ್ನು ನೋಡಲು ಸಾಧ್ಯವಾಗದಿದ್ದರೆ, ಅಂತಹ ವ್ಯಕ್ತಿಯು 6 ತಿಂಗಳಿಗಿಂತ ಹೆಚ್ಚು ಜೀವಿಸುವುದಿಲ್ಲ.

Comments are closed.