Neer Dose Karnataka
Take a fresh look at your lifestyle.

ಬಿಗ್ ಬಾಸ್ ನ ಪ್ರೇಮ ಪಕ್ಷಿಗಳಾದ ದಿವ್ಯ, ಅರವಿಂದ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?? ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಯಾವುದೇ ಅಧಿಕೃತ ಇಲ್ಲದಿದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಪ್ರೇಮ ಪಕ್ಷಿಗಳು ಎಂದ ತಕ್ಷಣ ಎರಡು ಜೋಡಿ ಎಲ್ಲರಿಗೂ ನೆನಪಾಗುತ್ತದೆ, ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಜೋಡಿ ಟಾಸ್ಕ ನಲ್ಲಿ ದಿವ್ಯ ಉರುಡುಗ ಹಾಗೂ ಅರವಿಂದ ರವರು ನಡೆದು ಕೊಂಡ ರೀತಿ ಹಾಗೂ ಟಾಸ್ಕ್ ಮುಗಿದ ಬಳಿಕ ನಡೆಯುತ್ತಿರುವ ಸಂಭಾಷಣೆಗಳನ್ನು ನೋಡಿದರೆ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳಾದ ಸಾಲಿಗೆ ಇವರಿಬ್ಬರು ಸೇರಿಕೊಂಡಿದ್ದಾರೆ ಎಂದು ಪ್ರೇಕ್ಷಕರು ಉತ್ತರ ನೀಡುತ್ತಿದ್ದಾರೆ.

ಶುಭಪುಂಜ ರವರಂತು ಒಂದು ಹೆಜ್ಜೆ ಮುಂದೆ ಹೋಗಿ ಇವರಿಬ್ಬರ ನಡುವಿನ ಮದುವೆ ಮಾತುಕತೆ ಕೂಡ ಆರಂಭಿಸಿದ್ದಾರೆ, ಇವರಿಬ್ಬರಿಗೂ ಲವ್ ಗುರು ಆಗಿರುವ ಶುಭ ಪೂಂಜಾ ರವರು ಹೊರಗಡೆ ಹೋದ ಬಳಿಕ ಕೆಲವೊಂದು ತಿಂಗಳುಗಳಾದ ಮೇಲೆ ನಿಮ್ಮ ನಿರ್ಧಾರಗಳನ್ನು ತೆಗೆದು ಕೊಳ್ಳಿ ಎಂಬ ಸಲಹೆ ನೀಡಿ ಲವ್ ಮ್ಯಾರೇಜ್ ಗೆ ಮನೆಯಲ್ಲಿ ಒಪ್ಪುತ್ತಾರಾ ಎಂದು ಕೂಡ ಪ್ರಶ್ನೆ ಕೇಳಿ ಉತ್ತರ ಪಡೆದು ಕೊಂಡು ಬಿಟ್ಟಿದ್ದಾರೆ.

ಹೀಗೆ ಇವರಿಬ್ಬರೂ ಯಾವುದೇ ಅಧಿಕೃತ ಘೋಷಣೆ ಮಾಡದೆ ಇದ್ದರೂ ಕೂಡ ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು ಎಂಬ ಸಾಲಿಗೆ ಸೇರಿ ಕೊಂಡಿದ್ದಾರೆ, ಇನ್ನು ಬಹಳ ಯಂಗ್ ಆಗಿ ಕಾಣಿಸುವ ಈ ಜೋಡಿಯ ವಯಸ್ಸಿನ ಅಂತರದ ಕುರಿತು ತಿಳಿಸಿ ಎಂದು ನಮಗೆ ಕೆಲವು ಮೆಸೇಜ್ ಮಾಡಿರುವ ಕಾರಣ, ಇವರಿಬ್ಬರ ವಯಸ್ಸಿನ ಅಂತರದ ಕುರಿತು ನಾವು ಮಾತನಾಡುವುದಾದರೇ ಸ್ನೇಹಿತರೆ ದಿವ್ಯ ರವರ ವಯಸ್ಸು 30, ಇನ್ನು ಅರವಿಂದ್ ರವರ ವಯಸ್ಸು 35, ಒಟ್ಟಿನಲ್ಲಿ ಇವರಿಬ್ಬರ ನಡುವಿನ ವಯಸ್ಸಿನ ಅಂತರ 5 ವರ್ಷಗಳಾಗಿವೆ. ಇದು ಕೇವಲ ಒಂದು ಮನರಂಜನಾ ವಿಷಯವಾಗಿದ್ದು, ಯಾರ ಮನಸ್ಸಿಗೂ ನೋಯಿಸುವ ಉದ್ದೇಶವನ್ನು ಹೊಂದಿರುವುದಿಲ್ಲ.

Comments are closed.