Neer Dose Karnataka
Take a fresh look at your lifestyle.

ಮಜಾ ಟಾಕೀಸ್ ಗೆ ಒಂದು ಎಪಿಸೋಡಿಗೆ ಕುರಿ ಪ್ರತಾಪ್ ಹಾಗೂ ಸೃಜನ್ ಪಡೆಯುವ ಸಂಭಾವನೆ ಎಷ್ಟು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ಯಾವುದೇ ಡಬಲ್ ಮೀನಿಂಗ್ ಇಲ್ಲದೇ ತಮ್ಮ ಆಸೆ ಪ್ರಜ್ಞೆಯ ಮೂಲಕ ಜನರನ್ನು ನಕ್ಕು ನಲಿಸುವ ಯಶಸ್ವಿಯಾಗಿರುವ ಕನ್ನಡದ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮಜಾ ಟಾಕೀಸ್ ಕಾರ್ಯಕ್ರಮದ ಕುರಿತು ಇಂದು ನಾವು ಕೆಲವೊಂದು ಹೆಚ್ಚಿನ ಮಾಹಿತಿಯನ್ನು ನೀಡುತ್ತೇನೆ ಕೇಳಿ, ಈ ಕಾರ್ಯಕ್ರಮದಲ್ಲಿ ಹಲವಾರು ಹಾಸ್ಯ ನಟರು ನಮ್ಮನ್ನು ನಕ್ಕು ನಲಿಸುವ ಕೆಲಸವನ್ನು ಹಲವಾರು ವರ್ಷಗಳಿಂದ ಮಾಡುತ್ತಿದ್ದಾರೆ.

ಈ ಕಾರ್ಯಕ್ರಮ ಜನರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿರುವ ಕಾರಣ ಟಿಆರ್ಪಿ ನಿಟ್ಟಿನಲ್ಲಿಯೂ ಕೂಡ ಮೊದಲಿನಿಂದಲೂ ಉತ್ತಮ ಸಾಧನೆ ಮಾಡುತ್ತಿದೆ, ಅದೇ ಸಮಯದಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಹಲವಾರು ಪ್ರತಿಭೆಗಳು ಕೂಡ ಹೊರ ಜಗತ್ತಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾಗಳಲ್ಲಿ ಹೆಚ್ಚಿನ ಆದ್ಯತೆ ಹಾಸ್ಯನಟನಿಗೆ ಸಿಗದೆ ಇರುವ ಕಾರಣ ಈ ಕಾರ್ಯಕ್ರಮದ ಮೂಲಕ ಕೆಲವೊಂದು ಹಾಸ್ಯ ನಟರ ಬದುಕು ಕೂಡ ಬದಲಾಗಿದೆ.

ಇನ್ನು ಈ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕುರಿ ಪ್ರತಾಪ್ ಅವರು ಕೂಡ ಈ ಕಾರ್ಯಕ್ರಮದ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡಿದ್ದಾರೆ ಇನ್ನು ಸೃಜನ್ ರವರ ಕುರಿತು ಕೇಳಲೇಬೇಡಿ, ಇವರು ಕೂಡ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರಿಬ್ಬರ ಸಂಭಾವನೆಯನ್ನು ನಾವು ನೋಡುವುದಾದರೆ ಸಾಮಾನ್ಯವಾಗಿ ಸಿನಿಮಾ ಚಿತ್ರೀಕರಣದಲ್ಲಿ ಒಂದು ದಿನಕ್ಕೆ 35,000 ಪಡೆಯುವ ಕುರಿ ಪ್ರತಾಪ್ ರವರು, ಈ ಕಾರ್ಯಕ್ರಮಕ್ಕೆ ಒಂದು ಎಪಿಸೋಡಿಗೆ 50,000 ಪಡೆಯುತ್ತಾರೆ ಇನ್ನೂ ನಿರ್ಮಾಪಕರಾಗಿರುವ ಸೃಜನ್ ರವರು ಲೆಕ್ಕಾಚಾರದಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು 70 ರಿಂದ 75 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ.

Leave A Reply

Your email address will not be published.