Neer Dose Karnataka
Take a fresh look at your lifestyle.

ಉದ್ದೂನ ಬೇಳೆ ಬಳಸದೇ ಬನ್ ದೋಸೆ ಮಾಡುವುದು ಹೇಗೆ ಗೊತ್ತಾ?? ರುಚಿಯಂತೂ ಅದ್ಬುತ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಉದ್ದಿನ ಬೇಳೆ ಬಳಸದೆ ಮಾಡುವ ಬನ್ ದೋಸೆ ರೆಸಿಪಿಯನ್ನು ನಿಮಗೆ ತಿಳಿಸಲಾಗಿದೆ. ಬನ್ ದೋಸೆ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಅಕ್ಕಿ, 1 ಚಮಚ ಮೆಂತ್ಯ, ಕಾಲು ಬಟ್ಟಲು ಅವಲಕ್ಕಿ, 1 ಬಟ್ಟಲು ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡುಗೆ ಸೋಡಾ, ಸ್ವಲ್ಪ ಎಣ್ಣೆ.

ಬನ್ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ದೊಡ್ಡ ಬಟ್ಟಲಿಗೆ ತೆಗೆದುಕೊಂಡ ಅಕ್ಕಿ, ಮೆಂತ್ಯ ಹಾಗೂ ಅವಲಕ್ಕಿಯನ್ನು ಹಾಕಿ 2 – 3 ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಇದಕ್ಕೆ ಮೊಸರು ಹಾಗೂ ಸ್ವಲ್ಪ ನೀರನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ 5 – 6 ಗಂಟೆಗಳ ಕಾಲ ನೆನೆಯಲು ಬಿಡಿ. ನೆನೆದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಂಡು 12 ಗಂಟೆಗಳ ಕಾಲ ನೆನೆಯಲು ಬಿಡಿ.

ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ತವಾವನ್ನು ಇಟ್ಟು ಎಣ್ಣೆಯನ್ನು ಸವರಿಕೊಂಡು ಈರುಳ್ಳಿ ಸಹಾಯದಿಂದ ತವಾವನ್ನು ಒರೆಸಿಕೊಳ್ಳಿ. ನಂತರ ಹಿಟ್ಟನ್ನು ಸೆಟ್ ದೋಸೆ ರೀತಿಯಲ್ಲಿ ಚಿಕ್ಕದಾಗಿ, ದಪ್ಪವಾಗಿ ತವಾದ ಮೇಲೆ ಸವರಿಕೊಳ್ಳಿ. ನಂತರ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಂಡು ಎರಡೂ ಬದಿಯಲ್ಲಿ ಬೇಯಿಸಿಕೊಂಡರೆ ಉದ್ದಿನಬೇಳೆ ಬಳಸದೆ ಮಾಡುವ ಬನ್ ದೋಸೆ ಸವಿಯಲು ಸಿದ್ಧ.

Comments are closed.