Neer Dose Karnataka
Take a fresh look at your lifestyle.

ದಾಖಲೆಗಳನ್ನು ಕುಟ್ಟಿ ಪುಡಿ ಪುಡಿ ಮಾಡುತ್ತಿದ್ದಾರೆ ಯುವರತ್ನ ! ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ??

6

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಪುನೀತ್ ರಾಜಕುಮಾರ್ ರವರ ಬಹು ನಿರೀಕ್ಷಿತ ಸಿನಿಮಾ ಯುವರತ್ನ ಇದೀಗ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿ ಸದ್ದು ಮಾಡಲು ಆರಂಭಿಸಿದೆ. ಬಿಡುಗಡೆಗೂ ಮುನ್ನವೇ ಕನ್ನಡ ಹಾಗೂ ತೆಲುಗಿನಲ್ಲಿ ಬಾರಿ ಕ್ರೇಜ್ ಸೃಷ್ಟಿ ಮಾಡಿದ ಯುವ ರತ್ನ ಸಿನಿಮಾ ಅಂದು ಕೊಂಡಂತೆ ಭರ್ಜರಿ ಓಪನಿಂಗ್ ಪಡೆದಿದೆ.

ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯದಲ್ಲಿ ಕೂಡ ಅಭಿಮಾನಿಗಳನ್ನು ಥಿಯೇಟರ್ನ ಕಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಬಿಡುಗಡೆಗೆ ತುದಿಗಾಲಲ್ಲಿ ಕಾದು ನಿಂತಿದ್ದ ಎಲ್ಲಾ ಅಭಿಮಾನಿಗಳು ಮೊದಲ ದಿನವೇ ಸಿನಿಮಾ ನೋಡಿ ಮುಗಿಸುತ್ತಿದ್ದಾರೆ.

ಈಗಾಗಲೇ ಬಹುತೇಕ ಥಿಯೇಟರ್ಗಳಲ್ಲಿ ಹಲವಾರು ದಿನಗಳ ಟಿಕೆಟ್ ಬುಕ್ ಆಗಿದ್ದು, ಇದೀಗ ಚಿತ್ರ ವಿಮರ್ಶೆ ಕೂಡ ಬಹಳ ಉತ್ತಮವಾಗಿ ಕೇಳಿ ಬಂದಿರುವ ಕಾರಣ ಮತ್ತಷ್ಟು ದಿನಗಳ ಕಾಲ ಟಿಕೆಟ್ ಬುಕ್ ಆಗಲಿದೆ. ಇನ್ನು ಯುವರತ್ನ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ಇಲ್ಲಿಯವರೆಗೂ ನಡೆದಿರುವ ಕಲೆಕ್ಷನ್ ಗಳನ್ನು ನಾವು ನೋಡುವುದಾದರೇ ಸ್ನೇಹಿತರೇ ಯುವ ರತ್ನ ಸಿನಿಮಾ ಮೊದಲ ದಿನವೇ ಅಂದಾಜು 14 ರಿಂದ 15 ಕೋಟಿ ಕಲೆಕ್ಷನ್ ಮಾಡಿದೆ ಎಂದು ಗಾಂಧಿ ನಗರದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡು ದಾಖಲೆಗಳನ್ನು ಕುಟ್ಟಿ ಕುಟ್ಟಿ ಪುಡಿ ಮಾಡುತ್ತಿದೆ.

Leave A Reply

Your email address will not be published.