Neer Dose Karnataka
Take a fresh look at your lifestyle.

ಟಾಪ್ ಧಾರವಾಹಿ ಪಾರುವಿನಲ್ಲಿ ಅಖಿಲಾಂಡೇಶ್ವರಿ ಪಾತ್ರ ಮಾಡಲು ವಿನಯ ಪ್ರಸಾದ್ ರವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?? ನಾಯಕನಟಿ ಗಿಂತ ಹೆಚ್ಚು

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹಲವಾರು ತಿಂಗಳುಗಳಿಂದ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ 5 ಧಾರವಾಹಿಗಳಲ್ಲಿ ಸ್ಥಾನ ಪಡೆದು ಕೊಳ್ಳುತ್ತಿರುವ ಟಾಪ್ ಧಾರವಾಹಿಗಳಲ್ಲಿ ಒಂದಾಗಿರುವ ಪಾರು ಧಾರವಾಹಿಯ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆಯಿಲ್ಲ, ಇದರ ಬಗ್ಗೆ ಬಹಳ ಅದ್ಭುತವಾಗಿ ಮೂಡಿ ಬರುತ್ತಿರುವ ಕಾರಣ ಮೊದಲ ದಿನದಿಂದಲೂ ಕೂಡ ಪ್ರೇಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ

ಇನ್ನು ಈ ದಾರವಾಹಿಯಲ್ಲಿ ಹಲವಾರು ಪಾತ್ರಗಳು ಜನರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದು, ಅಖಿಲಾಂಡೇಶ್ವರಿ ಪಾತ್ರ ಕೂಡ ಜನರ ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದಾಗಿದೆ, ಈ ಪಾತ್ರದಲ್ಲಿ ಕಂಡುಬರುವ ಗತ್ತು ಆ ಸ್ಟೈಲ್, ಹಾಗೂ ಎಷ್ಟೇ ಕಠಿಣ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿದ್ದರು ಕೂಡ ಮಾನವೀಯತೆ ತೋರಿಸುವ ರೀತಿ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದ್ದು ತಮಗೆ ನೀಡಿದ ಪಾತ್ರವನ್ನು ಮತ್ತೊಮ್ಮೆ ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವಲ್ಲಿ ವಿನಯ ಪ್ರಸಾದ್ ರವರು ಯಶಸ್ವಿಯಾಗಿದ್ದಾರೆ.

ಅದೆಷ್ಟೋ ಜನ ಕೇವಲ ಅಖಿಲಾಂಡೇಶ್ವರಿ ಪಾತ್ರ ನೋಡಲು ಧಾರವಾಹಿ ನೋಡುತ್ತಾರೆ ಎಂಬುದು ಕೂಡ ಸುಳ್ಳಲ್ಲ. ಹೀಗೆ ಪ್ರೇಕ್ಷಕರಿಗೆ ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದಾಗಿರುವ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟನೆ ಮಾಡಲು ವಿನಯ ಪ್ರಸಾದ್ ರವರು 1 ಎಪಿಸೋಡೆ 60 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ ಎಂಬುದು ಕಿರುತೆರೆಯ ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಈ ಪಾತ್ರದ ಕುರಿತು ಹಾಗೂ ವಿನಯ್ ಪ್ರಸಾದ್ ರವರ ಅಭಿನಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Comments are closed.