Neer Dose Karnataka
Take a fresh look at your lifestyle.

ಬಾಳೆಹಣ್ಣಿನ ಸಿಪ್ಪೆ ಬಿಸಾಡುವ ಬದಲು ಹೇಗೆಲ್ಲ ಬಳಸಬಹುದು ಗೊತ್ತೇ?? ಹೀಗೆ ಬಳಸಿ ನೋಡಿ.

ನಮಸ್ಕಾರ ಸ್ನೇಹಿತರೇ, ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಈ ರೀತಿ ಉಪಯೋಗಿಸಿ. ಸಾಮಾನ್ಯವಾಗಿ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಕಸದಬುಟ್ಟಿಗೆ ಹಾಕುತ್ತೇವೆ. ಇಂದು ನಾವು ಹೇಳುವ ಬಾಳೆಹಣ್ಣಿನ ಸಿಪ್ಪೆಯ ಉಪಯೋಗವನ್ನು ನೀವು ಕೇಳಿದರೆ ಖಂಡಿತವಾಗಿಯೂ ಬಾಳೆಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಅದರ ಉಪಯೋಗವನ್ನು ಪಡೆಯುತ್ತೀರಿ. ಅದು ಏನು ಎಂಬುದನ್ನು ತಿಳಿಯಲು ಮುಂದೆ ಓದಿ. ಬಾಳೆ ಹಣ್ಣಿನ ಸಿಪ್ಪೆಯನ್ನು ಗಿಡಗಳಿಗೆ ಗೊಬ್ಬರವಾಗಿ 2 ರೀತಿಯಲ್ಲಿ ಬಳಸಬಹುದು.

ಮೊದಲನೆಯದು: ಮೊದಲಿಗೆ ಬಾಳೆಹಣ್ಣಿನ ಸಿಪ್ಪೆಯನ್ನು ಒಂದು ಪ್ಲೇಟಿನಲ್ಲಿ ಇಟ್ಟು ಒಣಗಲು ಬಿಡಿ. ಯಾವುದೇ ಕಾರಣಕ್ಕೂ ಸಿಪ್ಪೆಯಲ್ಲಿ ತೇವಾಂಶ ಇರಬಾರದು. ಒಣಗಿದ ನಂತರ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.ಇದನ್ನು ಪುಡಿಮಾಡುವ ಉದ್ದೇಶವೇನೆಂದರೆ ಹೆಚ್ಚು ದಿನ ಸ್ಟೋರ್ ಮಾಡಬಹುದು ಎಂಬುದು. ಈ ಪುಡಿಯನ್ನು ಗಿಡದ ಬುಡಕ್ಕೆ ಒಂದುವರೆ ಚಮಚದಷ್ಟು ಹಾಕಿಕೊಂಡು ಮೇಲೆ ಇರುವ ಮಣ್ಣಿನಿಂದ ಮುಚ್ಚಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆಯ ಪುಡಿ ಗೊಬ್ಬರವಾಗಿ ಕೆಲಸ ಮಾಡುತ್ತದೆ. ಈ ಪುಡಿಯನ್ನು ಯಾವುದೇ ರೀತಿಯ ಗಿಡಕ್ಕೂ ಸಹ ಹಾಕಬಹುದು.ಬಾಳೆಹಣ್ಣಿನ ಸಿಪ್ಪೆಯ ಪುಡಿಯನ್ನು 1 – 2 ತಿಂಗಳಿಗೆ ಒಮ್ಮೆ ಬಳಸಬೇಕು.

ಇನ್ನು ಎರಡನೆಯದು: ಮೊದಲಿಗೆ ಗ್ಯಾಸ್ ಮೇಲೆ ಎರಡು ಲೋಟದಷ್ಟು ನೀರನ್ನು ಕಾಯಲು ಬಿಡಿ. ನಂತರ ಇದಕ್ಕೆ ಬಾಳೆಹಣ್ಣಿನ ಹಸಿ ಸಿಪ್ಪೆ ಹಾಗೂ 2 ಸೌತೆಕಾಯಿಯ ಸಿಪ್ಪೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಂಡು ತಣ್ಣಗಾಗಲು ಬಿಡಿ. ನಂತರ ನೀರಿನಿಂದ ಸಿಪ್ಪೆಯನ್ನು ಬೇರ್ಪಡಿಸಿಕೊಳ್ಳಿ. ಈ ನೀರನ್ನು ನೇರವಾಗಿ ಗಿಡಗಳಿಗೆ ಹಾಕಬಾರದು. ಒಂದು ಬಟ್ಟಲು ನೀರನ್ನು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಇದಕ್ಕೆ ನಾಲ್ಕುಪಟ್ಟು ನೀರನ್ನು ಹಾಕಿಕೊಂಡು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಳ್ಳಿ. ನಂತರ ಈ ನೀರನ್ನು ಗಿಡಗಳ ಬುಡಗಳಲ್ಲಿ ಅಥವಾ ಗಿಡದ ಎಲೆಗಳ ಮೇಲೆ ಸ್ಪ್ರೇ ಮಾಡಿ. ಇದನ್ನು 15 – 20 ದಿನಕ್ಕೆ ಒಂದು ಬಾರಿ ಬಳಸಬೇಕು.

Comments are closed.