Neer Dose Karnataka
Take a fresh look at your lifestyle.

ಮೇಕಪ್ ಇಲ್ಲದೆ, ಆಕಾಶಬಣ್ಣದ ಸೀರೆಯಲ್ಲಿ ಮಿಂಚಿದ ಸಾಯಿ ಪಲ್ಲವಿ ! ಮತ್ತೊಮ್ಮೆ ಮನಗೆದ್ದ ಸುಂದರಿ ! ಎಕ್ಸ್ಕ್ಲೂಸಿವ್ ಫೋಟೋಸ್ ಇಲ್ಲಿದೆ ನೋಡಿ

ನಮಸ್ಕಾರ ಸ್ನೇಹಿತರೇ ತೆಲುಗು ಹಾಗೂ ತಮಿಳು ಚಿತ್ರರಂಗ ಸೇರಿದಂತೆ ಮಲಯಾಳಂ ಭಾಷೆಗಳಲ್ಲಿ ನಟನೆ ಮಾಡುವ ಮೂಲಕ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿ ಕೊಂಡಿರುವ ಸಾಯಿ ಪಲ್ಲವಿ ರವರನ್ನು ಯಾರು ಇಷ್ಟಪಡುವುದಿಲ್ಲ ಹೇಳಿ, ಯಾರೇ ಆಗಲಿ ಇತರ ನಟಿಯರ ಅಭಿಮಾನಿಗಳು ಆಗಿದ್ದರೂ ಕೂಡ ಸಾಯಿ ಪಲ್ಲವಿ ಎಂದ ತಕ್ಷಣ ಅವರು ಅದ್ಭುತ ನಟನೆ ಮಾಡುತ್ತಾರೆ, ಡ್ಯಾನ್ಸ್ ಕೂಡ ಸೂಪರಾಗಿ ಮಾಡುತ್ತಾರೆ ಎಂದು ಸಾಯಿ ಪಲ್ಲವಿ ರವರನ್ನು ಹಾಡಿ ಹೊಗಳುತ್ತಾರೆ.

ಸದಾ ಯಾವುದೇ ಮೇಕಪ್ ಗೆ ಆದ್ಯತೆ ನೀಡದೆ, ಸಿಂಪಲಾಗಿ ಡ್ರೆಸ್ ಮಾಡಿಕೊಂಡು ಎಲ್ಲಾ ಸೌಂದರ್ಯ ರಾಶಿಯನ್ನು ಮೀರಿಸುವಂತೆ ಕಾಣುವ ಸಾಯಿ ಪಲ್ಲವಿ ರವರು, ತಮ್ಮ ನಟನೆ ಹಾಗೂ ನೃತ್ಯದಲ್ಲಿ ಅಷ್ಟೇ ಅಲ್ಲದೆ ಹಲವಾರು ಬಾರಿ ಮೇಕಪ್ ಜಾಹೀರಾತುಗಳನ್ನು ತಿರಸ್ಕಾರ ಮಾಡಿ ಮೇಕಪ್ ಇದ್ದರೆ ಮಾತ್ರ ಚೆನ್ನಾಗಿ ಕಾಣುತ್ತೇವೆ ಎಂಬುದು ಸುಳ್ಳು ಅದಕ್ಕಾಗಿ ನಾನು ಯಾವುದೇ ಮೇಕಪ್ ಉತ್ಪನ್ನಗಳ ಜಾಹೀರಾತಿನಲ್ಲಿ ನಟನೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಕೂಡ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಇದೀಗ ಸಾಯಿ ಪಲ್ಲವಿ ರವರು ಆಕಾಶ ಬಣ್ಣದಂತಹ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿ ಫೋಟೋಶೂಟ್ ಮಾಡಿಸಿದ್ದಾರೆ, ಸೀರೆಯ ಜೊತೆ ಪ್ರತ್ಯೇಕವಾದ ಕನೆಕ್ಷನ್ ಹೊಂದಿರುವ ಸಾಯಿ ಪಲ್ಲವಿ ರವರು ಸೀರೆಯಲ್ಲಿ ಎಂದಿನಂತೆ ಬಹಳ ಚೆನ್ನಾಗಿ ಕಾಣುತ್ತಿದ್ದು ಅಭಿಮಾನಿಗಳು ಸಾಯಿ ಪಲ್ಲವಿ ರವರ ಹೊಸ ಫೋಟೋಶೂಟ್ ನೋಡಿ ಅಕ್ಷರಸಹ ಫಿದಾ ಆಗಿದ್ದಾರೆ. ಈ ಫೋಟೋ ಶೂಟ್ ನ ಎಕ್ಸ್ಪ್ಲೋಸಿವೆ ಫೋಟೋಗಳು ಕೆಳಗಡೆ ಇದ್ದು ಒಮ್ಮೆ ನೋಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಸಾಯಿ ಪಲ್ಲವಿ ರವರ ಲೇಟೆಸ್ಟ್ ಫೋಟೋ ಗಳು, ನೀಲಿ ಬಣ್ಣದ ಸೀರೆಯಲ್ಲಿ.

Comments are closed.