Neer Dose Karnataka
Take a fresh look at your lifestyle.

ಯುವರತ್ನ ನಟಿ ಸಾಯೇಷ ರವರ ಪತಿಯ ವಯಸ್ಸು 40, ಆದರೆ ಸಾಯೇಷ ರವರು ಎಷ್ಟು ಚಿಕ್ಕ ವಯಸ್ಸಿನವರು ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇದೀಗ ಯುವರತ್ನ ಸಿನಿಮಾದ ಮೂಲಕ ಮತ್ತೊಬ್ಬ ಖ್ಯಾತ ನಟಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತೆಲುಗು ಹಾಗೂ ತಮಿಳು ಚಿತ್ರರಂಗ ಸೇರಿದಂತೆ ಬಾಲಿವುಡ ಚಿತ್ರರಂಗದಲ್ಲಿಯೂ ಕೂಡ ಕೆಲವೊಂದು ಚಿತ್ರಗಳಲ್ಲಿ ನಟನೆ ಮಾಡಿರುವ ನಟಿಯರು ಕನ್ನಡದ ಮೊದಲ ಚಿತ್ರದಲ್ಲಿ ಯಶಸ್ಸು ಕಂಡಿದ್ದಾರೆ, ಇವರು ಸಿನಿಮಾದಲ್ಲಿ ಹೆಚ್ಚು ಕಾಣದೇ ಇದ್ದರೂ ಕೂಡ ಕಾಣಿಸಿಕೊಂಡ ಕೆಲವೇ ಕೆಲವು ನಿಮಿಷಗಳಲ್ಲಿ ಯೂ ಕೂಡ ಬಹಳ ಮುದ್ದಾಗಿ ಕಾಣಿಸಿಕೊಂಡು ಕನ್ನಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ನಟಿ ಸಾಯೇಷ ರವರ ಕುರಿತು ನಾವು ಮಾತನಾಡುವುದಾದರೆ, ಇವರ ಸಂಪೂರ್ಣ ಹೆಸರು ಸಾಯೇಷಾ ಸೈಗಲ್, ಹುಟ್ಟಿದ್ದು ಇಂಗ್ಲೆಂಡ್ ದೇಶದಲ್ಲಿ, ಮೂಲತಹ ಮುಂಬೈ ಹುಡುಗಿ. ಹೆಚ್ಚು ವಿದೇಶಗಳಲ್ಲಿ ಬೆಳೆದರೂ ಕೂಡ ಮುಂಬೈ ಹುಡುಗಿಯಾಗಿ ಗುರುತಿಸಿಕೊಂಡಿರುವವರು, ತಮಿಳಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಹಾಗೂ ತೆಲುಗಿನಲ್ಲಿ ನಾಗಾರ್ಜುನ ರವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿ ರವರ ಜೊತೆ ಅಖಿಲ್ ಚಿತ್ರದಲ್ಲಿ ನಟನೆ ಮಾಡುವ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು, ನಂತರ ಅಜಯ್ ದೇವಗನ್ ರವರ ಜೊತೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ನಡೆಸಿದ್ದಾರೆ.

ಬಾಲಿವುಡ್ ಚಿತ್ರರಂಗದ ಖ್ಯಾತ ನಟರಾಗಿರುವ ದಿಲೀಪ್ ಕುಮಾರ್ ಹಾಗೂ ಸೈರಾ ಬಾನೂರ್ ಅವರ ಮೊಮ್ಮಗಳು ಇವರು, ಇನ್ನೂ ಕಾಲೇಜಿನಲ್ಲಿ ಓದುವಾಗ ಇವರ ಸರಾಸರಿ ಶೇಕಡವಾರು ಅಂಕಗಳು ಸದಾ 90ಕ್ಕಿಂತ ಮೇಲಿದೆ. ಇನ್ನು ಇವರ ದಾಂಪತ್ಯ ಜೀವನದ ಕುರಿತು ನಾವು ಮಾತನಾಡುವುದಾದರೆ, ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ರವರನ್ನು ಮದುವೆಯಾಗಿರುವ ಇವರು ಆರ್ಯ ರವರನ್ನು ಹಲವಾರು ತಿಂಗಳುಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಆರ್ಯರ ವಯಸ್ಸು 40 ಇನ್ನು ಇವರ ವಯಸ್ಸು ಕೇವಲ ಇಂದಿನ ಲೆಕ್ಕಾಚಾರದ ಪ್ರಕಾರ 23, ಆದರೆ ಈ ವಯಸ್ಸಿನ ಅಂತರ ಇವರಿಬ್ಬರ ನಡುವೆ ಯಾವುದೇ ಪ್ರಭಾವ ಬೀರಲಿಲ್ಲ. ಈ ಜೋಡಿ ಹೀಗೆ ನೂರು ಕಾಲ ಸುಖವಾಗಿ ಇರಲಿ ಎಂದು ಹಾರೈಸುತ್ತೇವೆ.

Comments are closed.