Neer Dose Karnataka
Take a fresh look at your lifestyle.

ಎಷ್ಟೇ ಜನಪ್ರಿಯತೆ ಪಡೆದುಕೊಂಡರೂ ಕನ್ನಡತಿಗೆ ರಂಜನಿ ರವರು ಪಡೆಯುವ ಸಂಭಾವನೆ ಎಷ್ಟು ಕಡಿಮೆ ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ ಮೊದಲನೇ ಸಾಲಿನಲ್ಲಿ ಕಂಡು ಬರುತ್ತದೆ. ಅದರಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಗೆ ಸೃಷ್ಟಿ ಮಾಡುವ ಧಾರವಾಹಿಗಳಲ್ಲಿ ಕನ್ನಡತಿ ಧಾರಾವಾಹಿ ಅಗ್ರಸ್ಥಾನದಲ್ಲಿದೆ. ವಿಶೇಷವೇನೆಂದರೆ ಅಭಿಮಾನಿಗಳು ಇತರ ಧಾರಾವಾಹಿಗಳಿಗಾಗಿ ಸೃಷ್ಟಿಸಿಕೊಂಡಿರುವ ಗ್ರೂಪ್ ಗಳಲ್ಲಿಯೂ ಕೂಡ ಕನ್ನಡತಿ ಧಾರಾವಾಹಿ ಕುರಿತು ಚರ್ಚೆ ನಡೆಯುತ್ತದೆ.

ಹೀಗೆ ದಿನೇ ದಿನೇ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿ ಕೊಳ್ಳುತ್ತಿರುವ ಕನ್ನಡತಿ ದಾರವಾಹಿ ಟಿಆರ್ಪಿ ಲಿಸ್ಟಿನಲ್ಲಿ ಕೂಡ ಬಹುತೇಕ ವಾರಗಳಲ್ಲಿ ಉತ್ತಮ ಸಾಧನೆ ಮಾಡಿರುತ್ತದೆ. ಆದರೆ ಅಗ್ರಸ್ಥಾನಕ್ಕೆ ಏರಲು ಇನ್ನೂ ಕೆಲವು ದಿನಗಳ ಕಾಲ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಅಷ್ಟೇ ಅಲ್ಲದೆ ಕಥೆಯಲ್ಲಿ ಹೆಚ್ಚಿನ ತಿರುವುಗಳು ಬಂದಾಗ ಮತ್ತಷ್ಟು ಉತ್ತಮ ಟಿಆರ್ಪಿ ಪಡೆದುಕೊಳ್ಳಲಿದೆ ಎಂಬುದು ತಜ್ಞರ ಲೆಕ್ಕಾಚಾರ.

ಇನ್ನು ಕಥೆಯಂತೂ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ರವರ ನಡುವೆ ನಡೆಯುವ ಸಂಭಾಷಣೆ ಗಳು ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿವೆ, ಪ್ರತಿಯೊಂದು ಪಾತ್ರಗಳಿಗೂ ತನ್ನದೇ ಆದ ಮಹತ್ವ ನೀಡಿರುವ ಕಾರಣ ಎಲ್ಲಾ ಪಾತ್ರಗಳು ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇಷ್ಟೆಲ್ಲಾ ಚರ್ಚೆಗೆ ಗುರಿಯಾಗಿರುವ ಕನ್ನಡತಿ ಧಾರಾವಾಹಿಗೆ ನಟಿ ರಂಜನಿ ರಾಘವನ್ ಅವರು ಮಾತ್ರ ಇತರ ಧಾರವಾಹಿಗಳ ನಟಿಯರಿಗೆ ಹೋಲಿಸಿದರೆ ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ, ಹೌದು ಸ್ನೇಹಿತರೇ ಒಂದು ಎಪಿಸೋಡಿಗೆ ರಂಜನಿ ರಾಘವನ್ ರವರು ಕೇವಲ 18 ಸಾವಿರ ರೂಪಾಯಿಗಳನ್ನು ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇದು ಇತರ ಧಾರವಾಹಿಗಳಿಗೆ ಹೋಲಿಸಿದರೆ ನಿಜಕ್ಕೂ ಕಡಿಮೆ.

Comments are closed.