Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ನಿಖಿತ ರವರು ಈಗ ಎಲ್ಲಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದು ಕೆಲವೇ ಕೆಲವು ಚಿತ್ರಗಳ ಆದರೂ ಕೂಡ ಕನ್ನಡದಲ್ಲಿ ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಹೊಂದಿರುವ ನಿಖಿತಾ ರವರು ಬಹುಶಹ ನಿಮಗೆಲ್ಲರಿಗೂ ನೆನಪಿರಬಹುದು. ಕನ್ನಡದ ಹಲವಾರು ಯಶಸ್ಸಿನ ಚಿತ್ರಗಳಲ್ಲಿ ನಟನೆ ಮಾಡಿರುವ ನಿಖಿತಾ ರವರು ಟಾಪ್ ನಟರ ಜೊತೆ ಕೆಲಸ ಮಾಡಿದ್ದಾರೆ

ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲದೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟನೆ ಮಾಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ ನಿಖಿತಾ ರವರು ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿಯಾಗಿ ಮಿಂಚುತ್ತಿದ್ದರು. ದರ್ಶನ್ ರವರ ಜೊತೆ ವಿವಿಧ ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಸದ್ದು ಮಾಡಿದ್ದ ಇವರು ದರ್ಶನ್ ಹಾಗೂ ರಕ್ಷಿತಾ ಜೋಡಿಯಂತೆ ದರ್ಶನ್ ಹಾಗೂ ನಿಖಿತಾ ರವರ ಜೋಡಿ ಎಂದರೂ ಕೂಡ ಪ್ರೇಕ್ಷಕರು ಸಿನಿಮಾಗೆ ತೆರಳುತ್ತಿದ್ದರು.

ಆದರೆ ಕನ್ನಡ ಚಿತ್ರರಂಗದಲ್ಲಿ ವಿವಿಧ ಊಹಾಪೋಹಗಳು ಕೇಳಿ ಬಂದಾಗ ಕನ್ನಡ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿದರು, ಅದಾದ ಮೇಲೆ ತೆಲುಗಿನ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ ನಿಖಿತಾ ರವರು ಇದೀಗ ಮದುವೆಯಾಗಿ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ, ಇತ್ತೀಚಿನ ದಿನಗಳಲ್ಲಿ ತಮ್ಮ ಮಗುವಿನ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಫೋಟೋಗಳನ್ನು ಮಾಡುತ್ತಿರುವ ನಿಕಿತಾ ರವರು ಅಭಿಮಾನಿಗಳು ವಾಪಸ್ ಚಿತ್ರರಂಗಕ್ಕೆ ಯಾವಾಗ ಬರುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಸುಮ್ಮನಾಗಿದ್ದಾರೆ.

Comments are closed.