Neer Dose Karnataka
Take a fresh look at your lifestyle.

ಮನೆಯಲ್ಲಿಯೇ ವಿಶೇಷವಾಗಿ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡುವುದು ಹೇಗೆ ಗೊತ್ತೇ???

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಇದನ್ನು ವಿಶೇಷವಾಗಿ ಶ್ರೀರಾಮ ನವಮಿ ಹಬ್ಬಕ್ಕೆ ಎಲ್ಲರ ಮನೆಗಳಲ್ಲಿಯೂ ಮಾಡುತ್ತಾರೆ. ಇನ್ನು ಓದುಗರಿಗೆ ಅನುಕೂಲವಾಗಲಿ ಎಂದು ಕೆಳಗಡೆ ಯೂಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು, ಒಮ್ಮೆ ನೋಡಿ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ಹಾಗೂ ರುಚಿ ಹೇಗೆ ಬಂದಿತು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಬಟ್ಟಲು ಹೆಸರುಬೇಳೆ, ಮುಕ್ಕಾಲು ಬಟ್ಟಲು ಸಣ್ಣಗೆ ಹಚ್ಚಿದ ಸೌತೆಕಾಯಿ, ಕಾಲು ಬಟ್ಟಲು ತೆಂಗಿನಕಾಯಿ ತುರಿ, 2ಚಮಚ ಕ್ಯಾರೆಟ್ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಹಸಿಮೆಣಸಿನಕಾಯಿ, ಅರ್ಧ ಚಮಚ ನಿಂಬೆ ಹಣ್ಣಿನ ರಸ, ಸ್ವಲ್ಪ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಮಾಡುವ ವಿಧಾನ: ಮೊದಲಿಗೆ ತೆಗೆದುಕೊಂಡ ಹೆಸರುಬೇಳೆಗೆ ನೀರನ್ನು ಹಾಕಿ 1 ಗಂಟೆಗಳ ಕಾಲ ನೆನೆಯಲು ಬಿಡಿ.1 ಗಂಟೆಗಳ ನಂತರ ಹೆಸರುಬೇಳೆಯನ್ನು ನೀರಿನಿಂದ ತೆಗೆದು ಒಂದು ಬಟ್ಟಲಿಗೆ ಹಾಕಿ ಕೊಳ್ಳಿ. ನಂತರ ಒಂದು ದೊಡ್ಡ ಬಟ್ಟಲಿಗೆ ನೆನೆಸಿದ ಹೆಸರುಬೇಳೆ, ಸಣ್ಣಗೆ ಹಚ್ಚಿದ ಸೌತೆಕಾಯಿ, ಕಾಲು ಬಟ್ಟಲು ತೆಂಗಿನಕಾಯಿತುರಿ, ಕ್ಯಾರೆಟ್ ತುರಿ, ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ, ನಿಂಬೆಹಣ್ಣಿನ ರಸ, ಕಾಳುಮೆಣಸಿನಪುಡಿ, ಹಚ್ಚಿದ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಹೆಸರುಬೇಳೆ ಮತ್ತು ಸೌತೆಕಾಯಿ ಕೋಸಂಬರಿ ಸವಿಯಲು ಸಿದ್ಧ.

Comments are closed.