Neer Dose Karnataka
Take a fresh look at your lifestyle.

ಐಪಿಎಲ್ ಹಾಗೂ ಇತರ ಕ್ರಿಕೆಟ್ ನಿಂದ ಬಂದ ಕೋಟಿ ಕೋಟಿ ಹಣವನ್ನು ಎಬಿಡಿ ಏನು ಮಾಡುತ್ತಾರೆ ಗೊತ್ತಾ?? ನಿಜಕ್ಕೂ ಶಾಕ್ ಆಗ್ತೀರಾ

ನಮಸ್ಕಾರ ಸ್ನೇಹಿತರೇ ಎಬಿ ಡಿವಿಲಿಯರ್ಸ್ ರವರು ಹಲವಾರು ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಶಿಷ್ಟ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ, ಸುಲಭವಾಗಿ ಎಂತಹ ಪಂದ್ಯವನ್ನು ಕೂಡ ಗೆಲ್ಲಿಸಲಿಲ್ಲ ಏಕೈಕ ಆಟಗಾರ ಎಂಬ ಹೆಸರು ಪಡೆದು ಕೊಂಡಿದ್ದಾರೆ ಯಾಕೆಂದರೆ ಎಬಿ ಡಿವಿಲಿಯರ್ಸ್ ಅವರ ಆಟದ ಕುರಿತು ಒಂದು ಸಾಲಿನಲ್ಲಿ ವಿವರಣೆ ನೀಡಲು ಅಸಾಧ್ಯ, ಆದರೆ ತಂಡಕ್ಕಾಗಿ 30 ಬಾಲ್ ಗಳಿಗೆ 100 ರನ್ ಗಳಿಸುವುದು ಗೊತ್ತು ಹಾಗೆ ಸಂದರ್ಭ ಬಂದಾಗ 300 ಬಾಲ್ ನಲ್ಲಿ 30 ರನ್ ಗಳಿಸುವ ಕಲೆ ಕೂಡ ಎಬಿ ಡಿವಿಲಿಯರ್ಸ್ ಅವರಿಗೆ ತಿಳಿದಿದೆ.

ವೇಗವಾಗಿ ರನ್ ಗಳಿಸಲು ಅಥವಾ ನಿಧಾನ ಗತಿಯಲ್ಲಿ ತಂಡವನ್ನು ಕಾಪಾಡಲು ಹಾಗೂ ಸೀಮಿತವೋ ವರ್ಗಳ ಪಂದ್ಯಗಳಲ್ಲಿ ವಿಕೆಟ್ಗಳನ್ನು ಕಾಪಾಡಿಕೊಳ್ಳುತ್ತಾ ಉತ್ತಮ ಮೊತ್ತ ಸೇರಿಸುವುದು ಎಬಿ ಡಿವಿಲಿಯರ್ಸ್ ರವರಿಗೆ ಕರಗತವಾಗಿರುವ ಕಲೆ. ಅಷ್ಟೇ ಅಲ್ಲದೆ ಈ ಮೈದಾನದ ಯಾವುದೇ ಮೂಲೆಗೆ ಬೇಕಾದರೂ ಬಾಲನ್ನು ತಿರುಗಿಸಿ ರನ್ ಗಳಿಸುವ ಸಾಮರ್ಥ್ಯ ಇರುವ ಕಾರಣ ಎಬಿ ಡಿವಿಲಿಯರ್ಸ್ ಅವರನ್ನು ಮಿಸ್ಟರ್ 360 ಎಂದು ಕೂಡ ಕರೆಯುತ್ತಾರೆ.

ಕೇವಲ ಕ್ರಿಕೆಟ್ ಅಷ್ಟೇ ಅಲ್ಲ ಸ್ವಾಮಿ ಇನ್ನು ವಿವಿಧ ಕ್ರೀಡೆಗಳಲ್ಲಿ ಅವರು ಚಾಂಪಿಯನ್ ಆಗಿ ಮೆರೆದಿರುವ ಆಟಗಾರ, ಕ್ರಿಕೆಟ್ ಸೇರಿದಂತೆ 6 ಕ್ಕೂ ಹೆಚ್ಚು ಕ್ರೀಡೆಗಳಲ್ಲಿ ಎಬಿ ಡಿವಿಲಿಯರ್ಸ್ ರವರನ್ನು ಸೋಲಿಸುವುದು ಅಸಾಧ್ಯ. ಅಷ್ಟೇ ಅಲ್ಲದೆ ಹಾಡುಗಳನ್ನು ಕೂಡ ಬಹಳ ಅದ್ಭುತವಾಗಿ ಹಾಡುತ್ತಾರೆ. ಇನ್ನು ನಮ್ಮ ಕನ್ನಡದ ಅಣ್ಣಾವ್ರು ರಾಜ್ ಕುಮಾರ್ ಅವರು ಹಾಡಿರುವ ಹಾಡನ್ನು ಕೂಡ ಆರ್ಸಿಬಿ ತಂಡದ ಜೊತೆ ಕೆಲವೊಂದು ಸಂದರ್ಭಗಳಲ್ಲಿ ಹಾಡಿ ವಿಡಿಯೋಗಳನ್ನು ಬಿಡುಗಡೆ ಕೂಡ ಮಾಡಿದ್ದಾರೆ.

ಇಷ್ಟೆಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡಿರುವ ಎಬಿ ಡಿವಿಲಿಯರ್ಸ್ ರವರು ಸೆಲ್ಫಿ ತೆಗೆದುಕೊಳ್ಳುವ ಒಂದು ಆಂಡ್ರಾಯ್ಡ್ ಹಾಗೂ ಆಪಲ್ ಫೋನುಗಳಿಗೆ ಸೀಮಿತವಾಗಿರುವ ಅಪ್ಲಿಕೇಶನ್ ಕೂಡ ತಯಾರಿಸಿ ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಸೆಲ್ಫಿ ತೆಗೆದುಕೊಳ್ಳುವ ಬಳಕೆದಾರರು ಕೂಡ ಹಣವನ್ನು ಗಳಿಸಬಹುದು ಅದರ ಜೊತೆಗೆ ಜಾಹೀರಾತುಗಳನ್ನು ನೋಡುವ ಕಾರಣ ಎಬಿ ಡಿವಿಲಿಯರ್ಸ್ ಅವರಿಗೆ ಕೂಡ ಹಣ ಹೋಗುತ್ತದೆ.

ಇನ್ನು ಹೀಗೆ ಅಪ್ಲಿಕೇಶನ್ಗಳ ಮೂಲಕ ಹಾಗೂ ವಿಶ್ವದ ವಿವಿಧ ಟಿ 20 ಟೂರ್ನಿ ಗಳಲ್ಲಿ ಭಾಗವಹಿಸುವ ಮೂಲಕ ಎಬಿ ಡಿವಿಲಿಯರ್ಸ್ ರವರು ವರ್ಷಕ್ಕೆ ಕೊಟ್ಯಾಂತರ ರೂಪಾಯಿ ಹಣವನ್ನು ಗಳಿಸುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಆದರೆ ಇಷ್ಟೆಲ್ಲಾ ಕೋಟಿಗಳನ್ನು ಗಳಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಬಳಸಿಕೊಳ್ಳುತ್ತಾರೆ ಅಥವಾ ತಮ್ಮ ಕುಟುಂಬದ ಐಶಾರಾಮಿ ಜೀವನಕ್ಕೆ ಎಂದುಕೊಂಡರೆ ಅದು ನಿಜಕ್ಕೂ ತಪ್ಪು ಸ್ನೇಹಿತರೆ.

ಯಾಕೆಂದರೆ ಸೌತ್ ಆಫ್ರಿಕಾ ಒಂದು ಬಡ ದೇಶವಾಗಿರುವ ಕಾರಣ ಅಪ್ಲಿಕೇಶನ್ ಮೂಲಕ ಗಳಿಸುವ ಸಂಪೂರ್ಣ ಹಣವನ್ನು ಒಂದು ರೂಪಾಯಿ ತೆಗೆದುಕೊಳ್ಳದೆ ಸೌತ್ ಆಫ್ರಿಕಾದಲ್ಲಿನ ಬಡ ಮಕ್ಕಳ ಏಳಿಗೆಗೆ ಬಳಸುತ್ತಾರೆ. ಅಷ್ಟೇ ಅಲ್ಲ ಸೌತ್ ಆಫ್ರಿಕಾ ದೇಶದಲ್ಲಿ ನೀರಿಗೆ ಕೊರತೆ ಇರುವ ಕಾರಣ ಕೋಟ್ಯಾಂತರ ರೂಪಾಯಿಗಳನ್ನು ಅಂತರ್ಜಲದ ಪುನರ್ ನಿರ್ಮಾಣಕ್ಕಾಗಿ ಬಳಸುತ್ತಿದ್ದಾರೆ ಇನ್ನು ಕೊರೊನ ಸಂದರ್ಭದಲ್ಲಿಯೂ ಕೂಡ ತಮ್ಮ ಬ್ಯಾಟ್ ಹಾಗೂ ಜರ್ಸಿ ಗಳನ್ನು ಮಾರಾಟ ಮಾಡುವ ಮೂಲಕ ಹಣಗಳಿಸಿ ವಿರಾಟ್ ಕೊಹ್ಲಿ ರವರ ಜೊತೆ ಕೈಜೋಡಿಸಿ ಅವರ ಜರ್ಸಿ ಯನ್ನು ಕೂಡ ಮಾರಾಟ ಮಾಡಿ ಆ ಹಣವನ್ನು ಸೌತ್ ಆಫ್ರಿಕಾ ದೇಶಕ್ಕೆ ಕೊರೊನ ನಿಧಿಗೆ ಸಮರ್ಪಣೆ ಮಾಡಿದರು. ಇದೇ ರೀತಿ ಹಲವಾರು ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಗಳಲ್ಲಿ ಎಬಿ ಡಿವಿಲಿಯರ್ಸ್ ಅವರು ಸದಾ ತೊಡಗಿಸಿಕೊಂಡಿರುತ್ತಾರೆ, ಭಾರತದ ಕೋರೋಣ ನಿಧಿಗೆ ಕೂಡ ಎಬಿ ಡಿವಿಲಿಯರ್ಸ್ ಅವರು ತಮ್ಮದೇ ಆದ ಕೊಡುಗೆ ನೀಡಿದ್ದರು. ಹೀಗೆ ಕೋಟ್ಯಂತರ ಹಣ ಗಳಿಸುವ ಎಬಿ ಡಿವಿಲಿಯರ್ಸ್ ರವರು ಇಷ್ಟೆಲ್ಲಾ ಸಾಮಾಜಿಕ ಕಳಕಳಿ ಮೆರೆಯುತ್ತಿರುವಾಗ ನಾವು ಒಂದು ಸೆಲ್ಯೂಟ್ ಮಾಡುವುದು ಬಹಳ ಚಿಕ್ಕದು ಎನಿಸುತ್ತದೆ. ಆದರೂ ಎಬಿ ಡಿವಿಲ್ಲರ್ಸ್ ರವರಿಗೆ ನಮ್ಮ ತಂಡದ ಪರವಾಗಿ ದೊಡ್ಡದೊಂದು ಸೆಲ್ಯೂಟ್

Comments are closed.