Neer Dose Karnataka
Take a fresh look at your lifestyle.

ಪಿಂಚಣಿ ಬಂದಿಲ್ಲ, ಮಾಸ್ಕ್ ಕೊಳ್ಳಲು ಹಣವಿಲ್ಲ, ಪಿಂಚಿಣಿ ಅಧಿಕಾರಿಯ ಹತ್ತಿರ ಮಾತನಾಡಲು ಹೋದ ಅಜ್ಜ, ಮಾಸ್ಕ್ ಗಾಗಿ ಮಾಡಿದ ಪ್ಲಾನ್ ಏನು ಗೊತ್ತಾ.? ಕಣ್ಣೀರು ಬರುತ್ತೆ.

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಬಹುತೇಕ ಹಿರಿಯರು ಪಿಂಚಣಿಯ ಸಹಾಯದಿಂದ ತನ್ನ ತಿಂಗಳು ಗಳ ಖರ್ಚು ನೋಡಿಕೊಳ್ಳುತ್ತಾರೆ, ಅದರಲ್ಲಿಯೂ ರೈತರು ಬೆಳೆ ಬರುವ ಸಮಯದಲ್ಲಿ ತಮ್ಮ ಹಣವನ್ನು ಕೂಡಿಟ್ಟುಕೊಂಡು, ಅಥವಾ ದೊಡ್ಡ ಖರ್ಚುಗಳಿಗೆ ಬಳಸುತ್ತ ಉಳಿದ ಬಹುತೇಕ ತಿಂಗಳುಗಳಲ್ಲಿ ಸಾಮಾನ್ಯ ಖರ್ಚಿಗೆ ಸರ್ಕಾರದಿಂದ ಬರುವ ಪಿಂಚಣಿ ಬಳಸುತ್ತಾರೆ, ಅದೇ ರೀತಿ ಇಲ್ಲೊಬ್ಬರು ವಯಸ್ಸಾದ ಅಜ್ಜ, ಪಿಂಚಣಿ ಸಿಗದೇ ಪರದಾಡುತ್ತಿದ್ದಾರೆ,

ತೆಲಂಗಾಣ ರಾಜ್ಯದಲ್ಲಿ ಹಲವಾರು ತಿಂಗಳುಗಳಿಂದ ಪಿಂಚಣಿ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ, ಕರ್ನಾಟಕದಲ್ಲೂ ಕೇಳಿಬಂದಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ನಡೆದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆದು ಇದೀಹ ಬಹುತೇಕರಿಗೆ ಪಿಂಚಣಿ ಹಣ ಸಿಗುತ್ತಿದೆ. ಆದರೆ ತೆಲಂಗಾಣ ರಾಜ್ಯದಲ್ಲಿ ಇನ್ನು ಬಹುತೇಕರಿಗೆ ಪಿಂಚಣಿ ಹಣ ಸಿಗುತ್ತಿಲ್ಲ, ಅದರಲ್ಲಿಯೂ ಕೊರೊನ ನಡುವೆಯೂ ಕೂಡ ಅಧಿಕಾರಿಗಳು ಈ ಕಡೆ ಗಮನ ಹರಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಇದೀಗ ಅದೇ ಕಾರಣಕ್ಕಾಗಿ ತೆಲಂಗಾಣದ ಮೆಹಬೂಬನಗರದ ನಿವಾಸಿ ಮೆಕಾಳ ಕುರುಮಯ್ಯ ಎಂಬುವವರು ಪಿಂಚಣಿ ಹಣದ ಕುರಿತು ವಿಚಾರಿಸಲು ಆಫೀಸ್ ಗೆ ತೆರಳುವ ಪರಿಸ್ಥಿತಿ ಎದುರಾದಾಗ ಮಾಸ್ಕ್ ತೆಗೆದುಕೊಳ್ಳಲ್ಲು ಕೂಡ ಹಣವಿಲ್ಲದಂತಾಗಿದೆ. ಹಾಗೆಂದು ಹಾಗೆ ತೆರಳಿದರೆ ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತದೆ, ಅದು ಸಾವಿರಗಳ ಲೆಕ್ಕದಲ್ಲಿ. ಅದೇ ಕಾರಣಕ್ಕಾಗಿ ಈ ತಾತ ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಇಲ್ಲದೆ ಒಳಗೆ ಬಿಡುವುದಿಲ್ಲ ಹೀಗಾಗಿ ಅವರೇ ಖುದ್ದಾಗಿ ಮಾಸ್ಕ್ ತಯಾರಿಸಬೇಕು ಎಂದು ಆಲೋಚಿಸಿದರು. ಅದೇ ಕಾರಣಕ್ಕಾಗಿ ಹಕ್ಕಿಯ ಗೂಡನ್ನೇ ಮಾಸ್ಕ್ ರೀತಿ ಬಳಸಿ ಕಚೇರಿಗೆ ತೆರಳಿದ್ದಾರೆ.

Comments are closed.