Neer Dose Karnataka
Take a fresh look at your lifestyle.

ಕೊಹ್ಲಿ ಜೊತೆ ನಡೆದುಕೊಂಡ ರೀತಿಗೆ ಆವೇಶ್ ಖಾನ್ ಗೆ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್, ಆದರೆ ಕೊಹ್ಲಿ ಮಾಡಿದ್ದೇನು ಗೊತ್ತಾ??

10

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಆರ್ಸಿಬಿ ತಂಡದ ಮತ್ತೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ, ನಿನ್ನೆ ನಡೆದ ದಿಲ್ಲಿ ಜೊತೆಗಿನ ಪಂದ್ಯದ್ದಲ್ಲಿ ಒಂದು ರನ್ ಮೂಲಕ ಜಯಗಳಿಸುವ ಮೂಲಕ ಆರ್ಸಿಬಿ ತಂಡ ಆರು ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದು 10 ಅಂಕಗಳೊಂದಿಗೆ ಅಗ್ರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿದೆ. ಈ ಪಂದ್ಯದಲ್ಲಿ ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ರವರು ಅತ್ಯುತ್ತಮ ಬೌಲಿಂಗ್ ಮಾಡುವ ಮೂಲಕ ಆರ್ಸಿಬಿ ತಂಡಕ್ಕೆ ಕೆಲವನ್ನು ಉಡುಗೊರೆಯಾಗಿ ನೀಡಿದರು.

ಇನ್ನೇನು ಡೆಲ್ಲಿ ತಂಡ ಪಂದ್ಯ ಗೆದ್ದು ಬಿಟ್ಟಿತು ಎನ್ನುವಷ್ಟರಲ್ಲಿ ಕೊನೆಯ ಓವರ್ ಗಳಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್ ರವರು, ಮೊದಲ ನಾಲ್ಕು ಎಸೆತಗಳಲ್ಲಿ ಆರ್ಸಿಬಿ ತಂಡಕ್ಕೆ ಗೆಲುವನ್ನು ಖಚಿತ ಪಡಿಸಿದ್ದರು ಕೊನೆಗೆ 2 ಬಾಲುಗಳಲ್ಲಿ 10 ರನ್ ಅಗತ್ಯವಿದ್ದಾಗ ಬೌಂಡರಿ ಗಳಿಸುವ ಅವಕಾಶ ಮಾತ್ರ ನೀಡಬೇಕು ಯಾವುದೇ ಕಾರಣಕ್ಕೂ ಸಿಕ್ಸರ್ ಗಳಿಸುವ ಅವಕಾಶ ನೀಡಬಾರದು ಎಂಬುದನ್ನು ಮೊಹಮ್ಮದ್ ಸಿರಾಜ್ ಅರ್ಥ ಮಾಡಿಕೊಂಡಿದ್ದರು.

ಇನ್ನು ಇದೇ ಸಮಯದಲ್ಲಿ ಆರ್ಸಿಬಿ ತಂಡ ಮೊದಲು ಬ್ಯಾಟಿಂಗ್ ಮಾಡಿದ ಹಾಗೆ ಕೊಹ್ಲಿ ರವರು ಬಹು ಬೇಗನೆ ಔಟಾಗಿದ್ದರು, ಯುವ ಬೌಲರ್ ಆವೇಶ್ ಖಾನ್ ಅವರು ಅತ್ಯುತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ಕೊಹ್ಲಿ ವಿಕೆಟ್ ಪಡೆದಿದ್ದರು. ಇದು ಭಾರತಕ್ಕೆ ಮತ್ತೊಬ್ಬ ಯುವ ಪ್ರತಿಭೆ ಸಿಕ್ಕಿದ ಎಂದು ಖುಷಿ ಪಡುವ ಸಮಯ ಎಂಬುದು ಎಲ್ಲರಿಗೂ ತಿಳಿದಿತ್ತು, ಆದರೆ ಆವೇಶ್ ಖಾನ್ ಅವರು ವಿರಾಟ್ ಕೊಹ್ಲಿ ರವರನ್ನು ಔಟ್ ಮಾಡಿದ ತಕ್ಷಣ ಸಂಭ್ರಮಿಸಿದ ರೀತಿ ಹಾಗೂ ಅವರ ವರ್ತನೆ ಸರಿ ಕಾಣಲಿಲ್ಲ, ಇದೇ ಕಾರಣಕ್ಕೆ ನೀವು ಉತ್ತಮ ಬೌಲರ್ ಆಗಿರಬಹುದು ಆದರೆ ಆತ ಕ್ರಿಕೆಟ್ ಲೋಕದಲ್ಲಿ ಲೆಜೆಂಡ್ ಎಂಬುದನ್ನು ಮರೆಯಬೇಡಿ,

ಭಾರತ ತಂಡದ ನಾಯಕನಿಗೆ ನೀವು ಕೊಡುವ ಗೌರವ ಇದೇನಾ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ, ಆದರೆ ಇದೇ ಸಮಯದಲ್ಲಿ ಪಂದ್ಯ ಮುಗಿದ ಬಳಿಕ ಆವೇಶ್ ಖಾನ್ ಅವರು ಹೀಗೆ ನಡೆದು ಕೊಂಡರೂ ಕೂಡ ಉತ್ತಮವಾಗಿ ಬೌಲಿಂಗ್ ಮಾಡಿದ ಕಾರಣ ವಿರಾಟ್ ಕೊಹ್ಲಿ ರವರು ಅವರ ಬಳಿ ತೆರಳಿ ಮಾತುಕತೆಯಲ್ಲಿ ನಿರತರಾಗಿದ್ದು, ಅವರ ಜೊತೆ ಸಾಕಷ್ಟು ಚರ್ಚೆ ನಡೆಸಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿರಾಟ್ ಕೊಹ್ಲಿ ರವರ ಗುಣಕ್ಕೆ ಎಲ್ಲರೂ ವಾಟ್ಸಪ್ ಹೇಳಿದ್ದಾರೆ.

Leave A Reply

Your email address will not be published.