Neer Dose Karnataka
Take a fresh look at your lifestyle.

ಬಿಗ್ ಬಾಸ್ ನಲ್ಲಿ ಮಹತ್ವದ ಟ್ವಿಸ್ಟ್, ರಾಜೀವ್ ರವರಿಗೆ ಭರ್ಜರಿ ಸಿಹಿಸುದ್ದಿ. ಇದೀಗ ಅಸಲಿ ಆಟ ಶುರು.

4

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯಾವುದೇ ಲೆಕ್ಕಾಚಾರಗಳು ಬಿಗ್ ಬಾಸ್ ಮನೆಯಲ್ಲಿ ಇದೀಗ ನಡೆಯುತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮನೆಯಲ್ಲಿ ಬಹುತೇಕ ಬಾರಿ ಉತ್ತಮವಾಗಿ ಆಟ ಆಡಿದರೂ ಕೂಡ ಬಿಗ್ ಬಾಸ್ ಮನೆಯಿಂದ ರಾಜೀವ್ ರವರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಇದಕ್ಕೆ ಕಾರಣಗಳನ್ನು ಹಲವಾರು ಜನ ಹಲವಾರು ರೀತಿಯಲ್ಲಿ ನೀಡುತ್ತಿದ್ದಾರೆ ಅದರಲ್ಲಿಯೂ ಕ್ರೀಡಾ ಸ್ಫೂರ್ತಿ ಮರೆದಿರುವುದು ರಾಜೀವ್ ರವರು ಹೊರ ಬಂದಿರುವುದು ಕಾರಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬಂದಿದೆ.

ಇನ್ನು ಇದೇ ಸಂದರ್ಭದಲ್ಲಿ ರಾಜೀವ್ ರವರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಆದರೆ ಅದೇ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿ ಮತ್ತೊಮ್ಮೆ ಕಳೆದ ಕೆಲವು ದಿನಗಳಿಂದ ನಡೆದ ಘಟನೆ ಮರುಕಳಿಸುವಂತಹ ಎಲ್ಲಾ ಸಾಧ್ಯತೆ ಇದೆ. ಆದರೆ ವಾಹಿನಿಯು ಯಾವುದೇ ಸುದ್ದಿಯನ್ನು ಅಧಿಕೃತವಾಗಿ ಇಲ್ಲಿಯವರೆಗೂ ಹೇಳಿಲ್ಲ, ಅಸಲಿಗೆ ಯಾರು ಸ್ಪರ್ಧಿಗಳು ಬರುತ್ತಾರೆ ಎಂದು ಇಲ್ಲಿಯವರೆಗೂ ವಾಹಿನಿ ಅಧಿಕೃತವಾಗಿ ಆದೇಶ ತಿಳಿಸಿರುವುದಿಲ್ಲ ಆದರೆ ಹೀಗೆ ಕೇಳಿ ಬರುವ ಸುದ್ದಿಗಳು ಸಾಕಷ್ಟು ಸತ್ಯವಾಗಿವೆ.

ಹೌದು ಸ್ನೇಹಿತರೇ ಇದೀಗ ಮತ್ತೊಂದು ಮಹತ್ವದ ಘಟನೆ ನಡೆಯಲಿದ್ದು 8ನೇ ವಾರ ತಮ್ಮ ಬಳಿ ಗೋಲ್ಡನ್ ಪಾಸ್ ಇದ್ದರೂ ಕೂಡ ಎಲಿಮಿನೇಟ್ ಆಗಿರುವ ರಾಜೀವ್ ರವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಮನೆಗೆ ವಾಪಸ್ ಹೋಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿದೆ. ಒಟ್ಟಿನಲ್ಲಿ ರಾಜೀವ್ ರವರು ಮತ್ತೆ ಮನೆಗೆ ವಾಪಸಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ರಾಜೀವ್ ರವರು ಈ ಬಾರಿ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಫೈನಲ್ಗೆ ಹೋಗುವುದಂತೂ ಖಚಿತ ಕೊಂಚ ಪ್ರಯತ್ನಪಟ್ಟರೆ ಗೆಲುವನ್ನು ಕೂಡ ಬಹಳ ಸುಲಭವಾಗಿ ಸಾಧಿಸಬಹುದು. ಒಟ್ಟಿನಲ್ಲಿ ಅದೇನೇ ಆಗಲಿ ಬಿಗ್ ಬಾಸ್ ನಲ್ಲಿ ಅವಕಾಶ ಸಿಗಲಿ ಅಥವಾ ಸಿಗದೇ ಇರಲಿ ರಾಜೀವ್ ರವರು ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.

Leave A Reply

Your email address will not be published.