Neer Dose Karnataka
Take a fresh look at your lifestyle.

ಈ ನಾಯಕನನ್ನು ಮುಖ್ಯಮಂತ್ರಿ ಮಾಡಿ ಎಂದ ಬಿಜೆಪಿ ಹಾಗೂ ವಿಪಕ್ಷಗಳ ಫ್ಯಾನ್ಸ್. ಯಾರಂತೆ ಗೊತ್ತಾ??

1

ನಮಸ್ಕಾರ ಸ್ನೇಹಿತರೇ, ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದಲ್ಲಿ ಬಹುತೇಕ ಹೆಚ್ಚಿನ ಜನ ಸಂದಡಿ ಇರುವ ನಗರಗಳಲ್ಲಿ ಕೊರೊನ ತಾಂಡವವಾಗುತ್ತಿದೆ. ಹೀಗಿರುವಾಗ ಯಾವುದೇ ನಾಯಕರ ಬದಲಾವಣೆ ನಡೆಯುವುದಿಲ್ಲ, ಆದರೂ ಕೂಡ ಕೆಲವು ಅಭಿಮಾನಿಗಳು ಹಾಗೂ ವಿರೋಧ ಪಕ್ಷಗಳ ಅಭಿಮಾನಿಗಳು ಕೂಡ ಬಿಜೆಪಿ ಪಕ್ಷ ಈ ನಿರ್ಧಾರ ತೆಗೆದುಕೊಂಡರೆ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ಅದರಲ್ಲಿಯೂ ಕರ್ನಾಟಕದಲ್ಲಿ ಇತರ ಕೆಲವು ರಾಜ್ಯಗಳಿಗೆ ಹೋಲಿಸಿಕೊಂಡರೆ ತುಸು ಹೆಚ್ಚಾಗಿಯೇ ಕೊರೊನ ಕಾಟ ಕೊಡುತ್ತಿದೆ. ಇದು ಹೋಲಿಕೆಯ ಸಮಯವಲ್ಲ, ಆದರೂ ಕೂಡ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ತೆಗೆದುಕೊಂಡಲ್ಲಿ ಮಾತ್ರ ಈ ಕೊರೊನ ನಿಯಂತ್ರಣ ಸಾಧ್ಯ. ಜನ ಸಾಮಾನ್ಯರಿಂದ ಹಿಡಿದು ರಾಜ್ಯದ ನಾಯಕನ ವರೆಗೂ ಕೂಡ ಅವರವರ ಜವಾಬ್ದಾರಿಯನ್ನು ನಿಯಂತ್ರಣ ಮಾಡ್ಬೇಕು. ಆದರೆ ಇದು ಸಾಧ್ಯವಾಗುತ್ತಿಲ್ಲ. ಎಲ್ಲರೂ ಹಣ ಗಳಿಕೆಯಲ್ಲಿ ನಿರತರಾಗಿದ್ದಾರೆ

ಹೀಗಿರುವಾಗ ಜನತೆಗೆ ಹೊಸ ಆಶಾಕಿರಣವೊಂದು ಬೇಕಾಗಿದ್ದು, ಕಠಿಣ ನಿರ್ಧಾರ ತೆಗೆದುಕೊಂಡು, ಅಧಿಕಾರಿಗಳನ್ನು ರಾಜಕೀಯ ನಾಯಕರನ್ನು ಕೆಲಸ ಮಾಡುವಂತೆ ನೋಡಿಕೊಂಡು, ಜನರ ಹಿತ ಕಾಪಾಡುವ ನಾಯಕರ ಅಗತ್ಯವಿರುವ ಕಾರಣ ಇದೀಗ ಮೊನ್ನೆ ತೇಜಸ್ವಿ ಸೂರ್ಯ ರವರು ಅಧಿಕಾರಿಗಳನ್ನು ರೆಡ್ ಹ್ಯಾಂಡ್ ಹಾಗಿ ಇಡಿಯುವ ರೀತಿಯನ್ನು ನೋಡಿದ ಫ್ಯಾನ್ಸ್ ತೇಜಸ್ವಿ ಸೂರ್ಯ ರವರು ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ. ವಿಶೇಷವೇನು ಎಂದರೇ ಕೇವಲ ಬಿಜೆಪಿ ಪಕ್ಷದ ಅಭಿಮಾನಿಗಳು ಅಷ್ಟೇ ಅಲ್ಲದೇ, ಕಾಂಗ್ರೆಸ್ ಅಂಡ್ ಜೆಡಿಎಸ್ ಪಕ್ಷದ ಅಭಿಮಾನಿಗಳು ಕೂಡ ಈ ರೀತಿಯ ನಿರ್ಧಾರ ಉತ್ತಮ ಎಂದಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Leave A Reply

Your email address will not be published.