Neer Dose Karnataka
Take a fresh look at your lifestyle.

ಬಾಂಗಡಿ ಮೀನು ಎಂದೇ ಕ್ಯಾತಿ ಪಡೆದುಕೊಂಡಿದ್ದ ನಟಿ ರಂಭಾ ರವರು ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ??

8

ನಮಸ್ಕಾರ ಸ್ನೇಹಿತರೇ ರವಿಚಂದ್ರನ್ – ರಂಭಾ ಕನ್ನಡದ ಮಾದಕ ಜೋಡಿ. ಪಾಂಡು ರಂಗ ವಿಠಲ ಸಿನಿಮಾ ನೋಡಿದವರು ಈ ಜೋಡಿಯನ್ನು ಮರೆಯಲು ಸಾಧ್ಯವಿಲ್ಲ. ರಂಭಾ ಮೂಲತಃ ಆಂಧ್ರ ಪ್ರದೇಶದ ವಿಜಯವಾಡದವರು. ಇವರ ಮೂಲ ಹೆಸರು ವಿಜಯಲಕ್ಷ್ಮಿ. ಸಿನಿಮಾ ರಂಗಕ್ಕೆ ಬಂದ ಮೇಲೆ ಇವರು ರಂಭಾ ಎಂಬ ಹೆಸರಿನಿಂದಲೇ ಫೇಮಸ್ ಆದರು. ರಂಭಾ ಅವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ಮಲಯಾಳಂ ನಟ ವಿನೀತ್ ರವರ ಸ್ವರ್ಗಂ ಎಂಬ ಚಿತ್ರಕ್ಕೆ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಈ ಸಿನಿಮಾ ಒಳ್ಳೆಯ ಹೆಸರನ್ನು ಮಾಡಿತ್ತಾದರೂ ರಂಭಾ ಅವರು ಜನಪ್ರಿಯರಾಗಿದ್ದು ಈ ವಿವಿ ಸತ್ಯನಾರಾಯಣ್ ಅವರ 1992 ರಲ್ಲಿ ನಿರ್ಮಾಣವಾದ “ಒಕ್ಕಟಿ ಅಡಕ್ಕೂ” ಎಂಬ ತೆಲುಗು ಸಿನಿಮಾದ ಮೂಲಕ. ತೊಂಬತ್ತರ ದಶಕದಲ್ಲಿ ಗ್ಲಾಮರ್ ನಾಯಕಿಯರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಜಗ್ಗೇಶ್ ಅವರ ಸರ್ವರ್ ಸೋಮಣ್ಣ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಮೂಲಕ ರಂಭಾ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಸಹ ನಟಿಸಿ ಹೆಸರು ಗಳಿಸಿದ್ದಾರೆ. ಟಾಲಿವುಡ್ ಬಾಲಿವುಡ್ ಸ್ಯಾಂಡಲ್ವುಡ್ ಗಳಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರವಿಚಂದ್ರನ್ ಜೊತೆ ಓ ಪ್ರೇಮವೇ, ಸಾಹುಕಾರ ಮುಂತಾದ ಚಿತ್ರಗಳಲ್ಲಿ ತಮ್ಮ ಗ್ಲಾಮರ್ ನಿಂದ ಹಲವಾರು ಯುವಕರ ನಿದ್ದೆಗೆಡಿಸಿದ್ದರು. ತಮಿಳಿನಲ್ಲಿ ಸಾಲು ಸಾಲು ಯಶಸ್ಸಿನ ಸಿನಿಮಾಗಳ ನಾಯಕಿಯಾದರು.ಇನ್ನೂ ಬೇಡಿಕೆಯ ನಟಿಯಾಗಿರುವಾಗಲೇ 8 ಏಪ್ರಿಲ್‌ 2010 ಕೆನಡಾ ಮೂಲದ ಭಾರತೀಯ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ರವರ ಜೊತೆ ವಿವಾಹವಾದರು. ನಂತರ ಟೊರಾಂಟೊದಲ್ಲಿ ಗಂಡನ ಜೊತೆ ಸೆಟ್ಲ್ ಆಗಿಬಿಟ್ಟರು. ಮತ್ತೆ ಸಿನಿಮಾ ರಂಗಕ್ಕೆ ಬರಲಿಲ್ಲ. ಈಗ ಸದ್ಯ ಸಕ್ರೀಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಇದ್ದಾರೆ. ಕುಟುಂಬದ ಫೋಟೋಗಳನ್ನ ಆಗಾಗ ತಮ್ಮ ವಾಲ್ ಗಳಲ್ಲಿ ಪ್ರಕಟಿಸುತ್ತಿರುತ್ತಾರೆ.

Leave A Reply

Your email address will not be published.