Neer Dose Karnataka
Take a fresh look at your lifestyle.

ನಾವು ನೀವು ಎಲ್ಲರೂ ಓದುವ ಕನ್ನಡ ದಿನ ಪತ್ರಿಕೆಗಳ ಸಂಪಾದಕರ ಜಾತಿ ಯಾವುದು ಗೊತ್ತಾ..?

ನಮಸ್ಕಾರ ಸ್ನೇಹಿತರೇ ಮಾಧ್ಯಮಗಳು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆದರೇ ಈಗ ಕೆಲವು ಮಾಧ್ಯಮಗಳು ಸಹ ಭ್ರಷ್ಟಾಚಾರಕ್ಕೆ ಕೈ ಜೋಡಿಸಿರುವ ಸಂಗತಿ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಇನ್ನು ಮುಂದುವರೆದು ಮಾಧ್ಯಮಗಳಲ್ಲಿ ಜಾತಿ ಸಹ ಅತ್ಯಂತ ಪ್ರಭಾವ ಬೀರುತ್ತಿದೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಸಂಪಾದಕರು ಅವರ ಜಾತಿಯವರಿಗೆ ಹೆಚ್ಚಿನ ಪ್ರಾಶ್ಯಸ್ತ ನೀಡುವ ಮೂಲಕ, ಪ್ರತಿಭೆಯುಳ್ಳ ಹಲವಾರು ಪತ್ರಕರ್ತರನ್ನ ತುಳಿದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಹಾಗಾಗಿ ಸದ್ಯ ಕನ್ನಡ ದಿನಪತ್ರಿಕೆಗಳ ಸಂಪಾದಕರ ಜಾತಿ ಯಾವುದು ಎಂಬುದನ್ನ ತಿಳಿಯೋಣ ಬನ್ನಿ.

ವಿಶ್ವವಾಣಿ – ಸದ್ಯ ಹೆಚ್ಚು ಚರ್ಚೆಯಲ್ಲಿರುವ ಪತ್ರಿಕೆ. ಸೋಶಿಯಲ್ ಮೀಡಿಯಾಗಳಲ್ಲಿ ಈ ಪತ್ರಿಕೆಯ ಹಲವಾರು ಅಂಕಣಗಳು ಸಾಕಷ್ಟು ಚರ್ಚೆಗೆ ಎಡೆಮಾಡಿಕೊಡುತ್ತವೆ. ಈ ಪತ್ರಿಕೆಯ ಸಂಪಾದಕರು ವಿಶ್ವೇಶ್ವರ್ ಭಟ್. ಅವರು ಜಾತಿಯಿಂದ ಹವ್ಯಕ ಬ್ರಾಹ್ಮಣರು.

ವಿಜಯವಾಣಿ – ಸದ್ಯ ಕನ್ನಡದ ನಂ 1 ದಿನಪತ್ರಿಕೆ ಎಂದು ಹೆಸರುವಾಸಿಯಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸರ್ಕುಲೇಷನ್ ಹೊಂದಿರುವ ಪತ್ರಿಕೆಯಾಗಿದೆ. ಈ ಪತ್ರಿಕೆಯ ಸಂಪಾದಕರು ಚಿನ್ನೇಗೌಡರು. ಇವರು ಜಾತಿಯಿಂದ ಒಕ್ಕಲಿಗರು. ಕನ್ನಡಪ್ರಭ – ಸುವರ್ಣ ನ್ಯೂಸ್ & ಕನ್ನಡ ಪ್ರಭ ಒಂದೇ ಆಡಳಿತದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಕನ್ನಡಪ್ರಭ ಪತ್ರಿಕೆಯ ಸಂಪಾದಕರು ರವಿ ಹೆಗಡೆಯವರು. ಇವರು ಜಾತಿಯಿಂದ ಬ್ರಾಹ್ಮಣರು.

ವಿಜಯ ಕರ್ನಾಟಕ – ಕನ್ನಡದ ಮತ್ತೊಂದು ಪ್ರಸಿದ್ದ ದಿನಪತ್ರಿಕೆಯಾಗಿದೆ. ತನಿಖಾ ಪತ್ರಿಕೋದ್ಯಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೆಸರುವಾಸಿಯಾಗಿದೆ. ಈ ಪತ್ರಿಕೆಯ ಸಂಪಾದಕರು ಹರಿಪ್ರಕಾಶ್ ಕೋಣೆಮನೆ. ಇವರು ಸಹ ಜಾತಿಯಿಂದ ಹವ್ಯಕ ಬ್ರಾಹ್ಮಣರು. ಹೊಸ ದಿಗಂತ – RSS ನ ಮುಖವಾಣಿ ಈ ಪತ್ರಿಕೆ ಎಂದು ನಟ ಜಗ್ಗೇಶ್ ಹೇಳಿದ್ದರು. ಈ ಪತ್ರಿಕೆಯ ಸಂಪಾದಕರು ವಿನಾಯಕ ಭಟ್ಟ ಮೂರೂರು. ಇವರು ಜಾತಿಯಿಂದ ಹವ್ಯಕ ಬ್ರಾಹ್ಮಣರು. ಇನ್ನು ಪ್ರಜಾವಾಣಿ – ಕನ್ನಡದ ಅತ್ಯಂತ ಹಳೇಯ ಪತ್ರಿಕೆ ಪ್ರಜಾವಾಣಿ. ಈ ಪತ್ರಿಕೆಗೆ 75 ವರ್ಷಗಳ ಇತಿಹಾಸವಿದೆ. ಈ ಪತ್ರಿಕೆಯ ಸಂಪಾದಕರು ರವೀಂದ್ರ ಭಟ್. ಇವರು ಜಾತಿಯಿಂದ ಬ್ರಾಹ್ಮಣರು.

ವಿಶೇಷ ಸೂಚನೆ: ಇದು ಕೇವಲ ಒಂದು ಆಸಕ್ತಿಕರ ವಿಷಯವಾಗಿದ್ದು, ಯಾರ ಮನಸ್ಸನು ನೋಯಿಸುವ ಉದ್ದೇಶವನ್ನು ಹೊಂದಿರುವುದಿಲ್ಲ. ಹಾಗೂ ಯಾವುದಾದರೂ ಸಂಪಾದಕರು ತಮ್ಮ ವಿಷಯವನ್ನು ತೆಗೆದು ಹಾಕಲು ಬಯಸಿದರೆ ನೇರವಾಗಿ ಮೆಸೇಜ್ ಮಾಡಿ, ಖಂಡಿತಾ ತೆಗೆಯುತ್ತೇವೆ.

Comments are closed.