Neer Dose Karnataka
Take a fresh look at your lifestyle.

ಮನೆಯಲ್ಲಿಯೇ ಎಂದಿಗೂ ತಿನ್ನದಂತಹ ರುಚಿಯ ಆಲೂ ಕ್ಯಾಪ್ಸಿಕಮ್ ರೈಸ್ ಮಾಡುವುದು ಹೇಗೆ ಗೊತ್ತೇ???

30

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಆಲೂ ಕ್ಯಾಪ್ಸಿಕಮ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟಲ್ ಶೈಲಿಯಲ್ಲಿ ಆಲೂ ಕ್ಯಾಪ್ಸಿಕಮ್ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ಅಕ್ಕಿ, 2 ಟೊಮೇಟೊ, 1 ಹಿಡಿ ಪುದಿನ ಸೊಪ್ಪು, 2 ಈರುಳ್ಳಿ, 15 – 20 ಬ್ಯಾಡಿಗೆ ಮೆಣಸಿನಕಾಯಿ, 1 ಕ್ಯಾಪ್ಸಿಕಂ, 2 ಆಲೂಗೆಡ್ಡೆ, 4 ಚಮಚ ತೆಂಗಿನಕಾಯಿ ತುರಿ, 4 ಚಮಚ ಎಣ್ಣೆ, 1ಗಡ್ಡೆ ಬೆಳ್ಳುಳ್ಳಿ, 1 ಇಂಚಿನ ಶುಂಠಿ, 2 ಚಮಚ ತುಪ್ಪ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಇಂಗು, ಸ್ವಲ್ಪ ಕರಿಬೇವು, 1 ಚಮಚ ದನಿಯಾ, 1 ಚಮಚ ನಿಂಬೆ ಹಣ್ಣಿನ ರಸ, ಸ್ವಲ್ಪ ಅರಿಶಿನ ಪುಡಿ, 8 – 10 ಹಸಿಮೆಣಸಿನಕಾಯಿ, 1 ಸ್ಟಾರ್ ಹೂವು, 4 ಲವಂಗ, 2 ಏಲಕ್ಕಿ, 2 ಚಕ್ಕೆ, 2 ಅನಾನಸ್ ಮೊಗ್ಗು,1 ಪಲಾವ್ ಎಲೆ, ಸ್ವಲ್ಪ ಕಸುರಿ ಮೇತಿ, 2 ಚಮಚ ಮೊಸರು, ರುಚಿಗೆ ತಕ್ಕಷ್ಟು ಉಪ್ಪು.

ಹೋಟೆಲ್ ಶೈಲಿಯಲ್ಲಿ ಆಲೂ ಕ್ಯಾಪ್ಸಿಕಮ್ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲಿಗೆ ತೆಗೆದುಕೊಂಡ ಅಕ್ಕಿ ಹಾಗೂ ನೀರನ್ನು ಹಾಕಿ 10 ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಧನಿಯಾ, ಜೀರಿಗೆ, ಹಸಿಮೆಣಸಿನಕಾಯಿ, ಬ್ಯಾಡಿಗೆ ಮೆಣಸಿನಕಾಯಿ, 1 ಸ್ಟಾರ್ ಹೂವು, 4 ಲವಂಗ, 2 ಏಲಕ್ಕಿ, 2 ಚಕ್ಕೆ, 2 ಅನಾನಸ್ ಹೂವು, ಬೆಳ್ಳುಳ್ಳಿ, ಶುಂಠಿ, ಕರಿಬೇವು, ಇಂಗು, ಅರಿಶಿನ ಪುಡಿ ಹಾಗೂ 1 ಚಮಚದಷ್ಟು ಎಣ್ಣೆಯನ್ನು ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಂಡು ತಣ್ಣಗಾಗಲು ಬಿಡಿ.

ನಂತರ ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿಕೊಂಡ ಮಿಶ್ರಣ, ತೆಂಗಿನಕಾಯಿ ತುರಿ ಹಾಗೂ ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಕುಕ್ಕರ್ ನನ್ನ ಇಟ್ಟುಕೊಂಡು ಅದಕ್ಕೆ ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಇದಕ್ಕೆ ಪಲಾವ್ ಎಲೆ ಹಾಗೂ ಕಸೂರಿ ಮೇತಿ, ಪುದಿನ ಸೊಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಉದ್ದನೆ ಹಚ್ಚಿದ ಈರುಳ್ಳಿಯನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹಚ್ಚಿದ ಆಲೂಗಡ್ಡೆ, ಹಚ್ಚಿದ ಕ್ಯಾಪ್ಸಿಕಮ್, ಸಣ್ಣಗೆ ಹಚ್ಚಿದ ಟೊಮೇಟೊ ಹಾಗೂ ರುಚಿಗೆ ತಕಷ್ಟು ಉಪ್ಪನ್ನು ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ರುಬ್ಬಿದ ಮಸಾಲಾ, ಮೊಸರು, ನಿಂಬೆ ಹಣ್ಣಿನ ರಸ, ನೆನೆಸಿದ ಅಕ್ಕಿ, 3 ಬಟ್ಟಲು ನೀರು, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಒಂದು ಬಾರಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ ಮುಚ್ಚಳವನ್ನು ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ಹೋಟೆಲ್ ಶೈಲಿಯಲ್ಲಿ ಕ್ಯಾಪ್ಸಿಕಮ್ ಸವಿಯಲು ಸಿದ್ದ.

Leave A Reply

Your email address will not be published.