Neer Dose Karnataka
Take a fresh look at your lifestyle.

‘ನಮ್ಮನೆ ಯುವರಾಣಿ’ ಯ ಮೀರಾ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಅಯ್ಯೋ ಇಷ್ಟೇನಾ?

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಸಾಕಷ್ಟು ಧಾರಾವಾಹಿಗಳು ಪ್ರಸಾರಗೊಳ್ಳುತ್ತಿದ್ದು, ಸಾಕಷ್ಟು ಜನಪ್ರಿಯತೆಯನ್ನು ಕೂಡ ಪಡೆಯುತ್ತಿವೆ. ಇನ್ನು ಇಂತಹ ಧಾರವಾಹಿಗಳ ಸಾಲಿನಲ್ಲಿ ‘ನಮ್ಮನೆ ಯುವರಾಣಿ’ ಧಾರಾವಾಹಿ ಕೂಡ ಒಂದು. ಹೌದು ಕನ್ನಡದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಸಾಕಷ್ಟು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಇದರಲ್ಲಿ ಸಾಕಷ್ಟು ಕಲಾವಿದರು ತಮ್ಮದೇ ಆದ ಪಾತ್ರಗಳಿಗೆ ಜೀವ ತುಂಬಿ ಅಮೋಘವಾಗಿ ನಟಿಸಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ನಾಯಕ ನಟಿ ಮೀರಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಂಕಿತಾ ಅಮರ್.

ಹೌದು ಇವರು ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಅಮೋಘವಾಗಿ ನಟಿಸಿದ್ದು ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ಇನ್ನು ಇತರ ಧಾರಾವಾಹಿಯಲ್ಲಿ ನಟಿಸಲು ಅಂಕಿತಾ ಅವರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ? ಹಾಗಿದ್ದರೆ ಇದನ್ನು ಓದಿ. ನಟಿ ಅಂಕಿತ ಅಮರ್ ಅವರು ಕನ್ನಡ ಕಿರುತೆರೆಯ ಪುಟ್ಟಗೌರಿ ಮದುವೆ ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಬಂದವರು. ನಂತರ ಅವರು ಕನ್ನಡ ಕಿರುತೆರೆ ಮತ್ತೊಂದು ಧಾರವಾಹಿಯಾದ ಕುಲವಧು ಎಂಬ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದರು.

ಆದರೆ ಅವರಿಗೆ ಕೀರ್ತಿ ಹವಿಸ್ಸನ್ನು ತಂದುಕೊಟ್ಟಿದ್ದು ಮಾತ್ರ ನಮ್ಮನೆ ಯುವರಾಣಿ ಧಾರಾವಾಹಿ. ಹೌದು ಈ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ಮಿಂಚಿದ ನಟಿ ಅಂಕಿತಾ ಅಮರ್ ಅವರು ಇದೀಗ ಕಿರುತೆರೆಯ ಸ್ಟಾರ್ ನಟಿಯರಲ್ಲಿ ಒಬ್ಬರು. ನಟಿ ಅಂಕಿತಾ ಅಮರ್ ಅವರು ಹುಟ್ಟಿ ಬೆಳೆದಿದ್ದು ಎಲ್ಲ ಮೈಸೂರಿನಲ್ಲಿ. ಇದೀಗ ಅವರಿಗೆ 23 ವರ್ಷ ವಯಸ್ಸು. ಇನ್ನು ನಟಿಸುವುದು ಮಾತ್ರವಲ್ಲದೆ ಅವರು ಕನ್ನಡದ ಹಲವಾರು ಹಾಡುಗಳನ್ನು ಕೂಡ ಹಾಡಿ ಉತ್ತಮ ಹಾಡುಗಾರ್ತಿ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರರಾಗಿದ್ದಾರೆ.

ಇನ್ನೂ ಅವರು ಭರತನಾಟ್ಯದಲ್ಲಿ ಹೆಸರು ಮಾಡಬೇಕೆಂದು ಸಾಕಷ್ಟು ಆಸೆಯನ್ನು ಹೊಂದಿದ್ದಾರಂತೆ. ಅಷ್ಟೇ ಅಲ್ಲದೆ ಅವರು ಎಂಎಸ್ಸಿ ಪದವೀಧರೆ. ಹೀಗೆ ನಟನೆ ನೃತ್ಯ ಹಾಗೂ ಹಾಡುಗಾರಿಕೆಯಲ್ಲಿ ಕೌಶಲ್ಯ ಪಡೆದಿರುವ ನಟಿ ಅಂಕಿತಾ ಅವರು ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಪಡಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಹೌದು ನಮ್ಮನೆ ಯುವರಾಣಿ ಧಾರಾವಾಹಿ ಯಲ್ಲಿ ಮೀರಾ ಪಾತ್ರದಲ್ಲಿ ಮಿಂಚಿರುವ ನಟಿ ಅಂಕಿತಾ ಅವರು ಪ್ರತಿ ಎಪಿಸೋಡ್ ಗೆ ಸುಮಾರು12 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಇನ್ನು ಇದೀಗ ಕನ್ನಡ ಕಿರುತೆರೆಯ ಸ್ಟಾರ್ ನಟಿಯಾಗಿರುವ ಅಂಕಿತ ಅವರು ಇದೀಗ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಒಟ್ಟಾರೆಯಾಗಿ ಅಮೋಘವಾಗಿ ನಟಿಸುತ್ತಿರುವ ನಟಿ ಅಂಕಿತಾ ಅವರು ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಕೂಡ ಕಾಲಿಡಲಿ ಎಂದು ನಾವು ಈ ಮೂಲಕ ಹಾರೈಸೋಣ. ಇನ್ನು ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ. ಹಾಗೂ ಈ ಧಾರಾವಾಹಿಯ ಕುರಿತು ಕೂಡ ಸಾದ್ಯವಾದರೆ ತಿಳಿಸಿ.

Comments are closed.