Neer Dose Karnataka
Take a fresh look at your lifestyle.

ಪ್ರೀತಿಸಿದ ತಪ್ಪಿಗೆ 8 ವರ್ಷ ಟಾಯ್ಲೆಟ್ ಪಕ್ಕ ಮಲಗಿದ್ದ, ಜಗ್ಗೇಶ್ ಸಿನಿಮಾದ ಟಾಪ್ ನಟಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಹೊಂಬಾಳೆ ಹೊಂಬಾಳೆ, ಪ್ರೀತಿಯ ಹೊಂಬಾಳೆ, ನನ್ನಾಸೆಯ ಹೂವೇ ಬಾರೇ ಎಂಬ ಹಾಡನ್ನ ನೀವು ನೋಡಿರುತ್ತಿರಿ ಹಾಗೂ ಕೇಳಿರುತ್ತಿರಿ. ನವರಸ ನಾಯಕ ನಟ ಜಗ್ಗೇಶ್ ರವರಿಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟ ನನ್ನಾಸೆಯ ಹೂವೇ ಎಂಬ ಸಿನಿಮಾದ ಹಾಡು ಅದು. ಆ ಸಿನಿಮಾಗಾಗಿ ಬಾಂಬೆಯಿಂದ ಹಿರೋಯಿನ್ ರನ್ನ ಕರೆತರಲಾಗಿತ್ತು. ಆ ನಟಿ ಬೇರಾರು ಅಲ್ಲ, ಮೋನಿಕಾ ಬೇಡಿ. ಮೋನಿಕಾ ಬೇಡಿ ಫ್ಯಾಷನ್ ಜಗತ್ತಿನಲ್ಲಿ ಮಾಡೆಲ್ ಆಗಿದ್ದವರು. ಅವಕಾಶ ಸಿಕ್ಕಾಗ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಹೀಗೆ ಒಂದು ದಿನ ಒಂದು ಇವೆಂಟ್ ನಲ್ಲಿ ಅಬು ಸಲೇಂ ಎಂಬ ವ್ಯಕ್ತಿ ತನ್ನ ಹೆಸರು ಬದಲಾಯಿಸಿಕೊಂಡು ಮೋನಿಕಾಗೆ ಪರಿಚಯವಾದ.

ಪರಿಚಯ ಕ್ರಮೇಣ ಸ್ನೇಹವಾಗಿ ನಂತರ ಪ್ರೀತಿಗೆ ತಿರುಗಿ ಪರಸ್ಪರ ಬಿಟ್ಟಿರಲಾರದಷ್ಟು ಆಪ್ತವಾಗತೊಡಗಿತು. ಈ ಮಧ್ಯೆ ಜೋಡಿಹಕ್ಕಿಗಳು ದುಬೈ, ಸಿಂಗಾಪುರ ಎಂಬಂತೆ ಸುತ್ತತೊಡಗಿದರು. ಈ ಮಧ್ಯೆ 1993ರಲ್ಲಿ ಮುಂಬೈನಲ್ಲಿ ಆದ ಅವಘಡದ ಹಿಂದೆ ಅಬು ಸಲೇಂ ಕೈವಾಡವಿರುವುದು ಜಗಜ್ಜಾಹೀರಾಗಿತ್ತು. ಆದರೇ ಸಿಕ್ಕಿಹಾಕಿಕೊಳ್ಳುವ ಭೀತಿಯಲ್ಲಿ ಆತ ತಲೆಮರೆಸಿಕೊಂಡಿದ್ದ. ಗುಟ್ಟಾಗಿ ಅಮೇರಿಕಾ ಸೇರಿಕೊಂಡ. ಅಲ್ಲಿಗೆ ತನ್ನ ಪ್ರೇಯಸಿಯನ್ನು ಕರೆಸಿಕೊಂಡವನು ಮತ್ತೆ ವಾಪಸ್ ಭಾರತಕ್ಕೆ ಕರೆಸಿಕೊಳ್ಳಲಿಲ್ಲ.

ಈ ಮಧ್ಯೆ ಅಬುಸಲೇಂ ನ ನಿಜರೂಪ ಮೋನಿಕಾ ಬೇಡಿಗೆ ಹಂತಹಂತವಾಗಿ ತಿಳಿಯಿತು. ಸಂಭಂಧ ಕೂಡ ಹಳಸಿಹೋಗಿತ್ತು. ಆದರೇ ಅಬು ಸಲೇಂ ಮಾತ್ರ ಮೋನಿಕಾಳನ್ನ ಮನೆಗೆಲಸದವಳಾಗಿ ಬಳಸಿಕೊಂಡ. ವಿಕೃತವಾಗಿ ನಡೆದುಕೊಂಡ. ಹೊರಜಗತ್ತಿನ ಸಂಪರ್ಕವನ್ನು ಕೊಡದೇ ಗೃಹಬಂಧನದಲ್ಲಿ ಇಟ್ಟ. ಮಲಗಲು ಜಾಗ ಸಹ ನೀಡದೇ, ಈಕೆ ಟಾಯ್ಲೆಟ್ ಪಕ್ಕ ಮಲಗುವುದನ್ನ ಅಭ್ಯಾಸ ಮಾಡಿಕೊಂಡಳು. ಇದು 8 ವರ್ಷದ ತನಕ ಮುಂದುವರೆಯಿತು. ಕೊನೆಗೆ 2002 ರಲ್ಲಿ ನಕಲಿ ಪಾಸ್ ಪೋರ್ಟ್ ಹೊಂದಿದ ಕಾರಣಕ್ಕೆ ಅಬುಸಲೇಂರನ್ನ ಮುಂಬೈ ಪೋಲಿಸರು ಬಂಧಿಸಿದರು. ಜೊತೆಯಲ್ಲಿ ಮೋನಿಕಾ ಬೇಡಿಯನ್ನು ಸಹ ಬಂಧಿಸಿದರು. ಆದರೇ ಬಂಧನಕ್ಕೆ ಹರ್ಷ ವ್ಯಕ್ತಪಡಿಸಿದ ಬೇಡಿ ತನಗೆ ಮುಕ್ತಿ ಸಿಕ್ಕಿತೆಂದು ಸಂತಸ ವ್ಯಕ್ತಪಡಿಸಿದರು. ಅಬು ಸಲೇಂನ ಮುಖ ಸಹ ನೋಡಲು ಇಷ್ಟಪಡಲಿಲ್ಲ. ಕ್ಷಣಿಕ ಸುಖದ ಕುರುಡು ಪ್ರೀತಿ, ಹೆಗೆಲ್ಲಾ ಒಬ್ಬರ ಜೀವನದಲ್ಲಿ ಆಟ ಆಡುತ್ತದೆ ಎಂಬುದನ್ನ ಗಮನಿಸಿ ಸ್ನೇಹಿತರೇ. ಹಾಗಾಗಿಯೇ ಹಿರಿಯರು ಹೇಳುವುದು, ಸಂಭಂದವನ್ನಾಗಲಿ, ಸ್ನೇಹವನ್ನಾಗಲಿ ಹಿಂದೆ-ಮುಂದೆ ನೋಡಿ ಮಾಡಬೇಕು ಎಂದು.

Comments are closed.