Neer Dose Karnataka
Take a fresh look at your lifestyle.

ಕನ್ನಡದ ಮಹಾಭಾರತ, ರಾಧಾಕೃಷ್ಣ ವಿಲನ್ ಗಳಿಗೆ ಹಿನ್ನೆಲೆ ಧ್ವನಿ ನೀಡಿದ ಅಗ್ನಿಸಾಕ್ಷಿ ಧಾರಾವಾಹಿಯ ಪಾತ್ರಧಾರಿ ಯಾರು ಗೊತ್ತಾ??

29

ನಮಸ್ಕಾರ ಸ್ನೇಹಿತರೇ ಹಲವಾರು ಭಾಷೆಯ ಸಿನಿಮಾಗಳಾಗಲಿ ಅಥವಾ ಕಿರುತೆರೆಯ ಧಾರವಾಹಿಗಳಾಗಲಿ ಸಾಕಷ್ಟು ಭಾಷೆಗಳಿಗೆ ಅನುವಾದವಾಗಿ ತೆರೆಕಾಣುತ್ತವೆ. ಹೌದು ಇದೀಗಾಗಲೇ ಒಂದು ಭಾಷೆ ಸಿನಿಮಾ ಬೇರೆ ಭಾಷೆಗಳಲ್ಲಿ ಅನುವಾದವಾಗಿ ಕಾಣುವುದನ್ನು ನೀವು ಇದೀಗಾಗಲೇ ನೋಡಿರುತ್ತೀರಿ. ಅದೇ ರೀತಿ ಒಂದು ಭಾಷೆಯ ಧಾರವಾಹಿ ಮತ್ತೊಂದು ಭಾಷೆಗೆ ಅನುವಾದವಾಗಿ ದೂರದರ್ಶನದಲ್ಲಿ ಪ್ರಸಾರವಾಗುತ್ತವೆ. ಇಂತಹ ಧಾರಾವಾಹಿಗಳತ್ತ ಹೆಚ್ಚಾಗಿ ಪೌರಾಣಿಕ ಕಥೆಗಳ ಧಾರವಾಹಿಗಳೇ ಕಂಡುಬರುತ್ತವೆ.

ಇನ್ನು ಪೌರಾಣಿಕ ಕಥೆಗಳ ಧಾರವಾಹಿಗಳು ಇತರ ಧಾರವಾಹಿಗಳಂತೆ ಕಿರುತೆರೆಯಲ್ಲಿ ಟಾಪ್ ಸ್ಥಾನಗಳನ್ನು ಪಡೆಯುತ್ತಲಿವೆ. ಅಷ್ಟೇ ಅಲ್ಲದೆ ನಮ್ಮ ಪೂರ್ವಕಾಲದ ಇತಿಹಾಸಗಳನ್ನು ತಿಳಿದುಕೊಳ್ಳಲು ಜನರು ಕೂಡ ಉತ್ಸುಕರಾಗಿದ್ದು ಇಂತಹ ಧಾರವಾಹಿಗಳನ್ನು ತಪ್ಪದೆ ಪ್ರತಿನಿತ್ಯ ವೀಕ್ಷಿಸುತ್ತಿದ್ದಾರೆ. ಈ ರೀತಿಯಾಗಿ ಅನುವಾದವಾಗುವ ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳಿಗೆ ಹಿನ್ನೆಲೆ ಧ್ವನಿ ನೀಡಬೇಕಾಗುತ್ತದೆ. ಹೌದು ಒಂದು ಧಾರವಾಹಿ ಅನುವಾದ ವಾಗಬೇಕಾದರೆ ಅನುವಾದವಾಗುವ ಭಾಷೆಯ ಧ್ವನಿ ಪಾತ್ರಗಳಿಗೆ ನೀಡಬೇಕಾಗುತ್ತದೆ.

ಹೀಗಾಗಿ ಇಂತಹ ಧಾರಾವಾಹಿಗಳಲ್ಲಿ ಹಿನ್ನೆಲೆ ಧ್ವನಿ ನೀಡುವ ಕಲಾವಿದರ ಕೈಚಳಕ ಕೂಡ ಇರುತ್ತದೆ. ಇನ್ನು ಇಂತಹದೇ ಪೌರಾಣಿಕ ಕಥೆಗಳುಳ್ಳ ಧಾರಾವಾಹಿಗಳಲ್ಲಿ ಮಹಾಭಾರತ ಹಾಗೂ ರಾಧಾಕೃಷ್ಣ ಧಾರವಾಹಿಗಳು ಕೂಡ ಒಂದಾಗಿವೆ. ಇನ್ನು ಪ್ರತಿ ಕಥೆಯಲ್ಲಿ ಹೀರೋ ಇರುವ ಹಾಗೆ ವಿಲನ್ ಕೂಡ ಇರಲೇಬೇಕಾಗುತ್ತದೆ. ಅದೇ ರೀತಿ ಧಾರವಾಹಿಗಳಲ್ಲಿ ಕೂಡಾ ಖಳನಾಯಕರು ಇದ್ದಾರೆ. ಇನ್ನು ಧಾರವಾಹಿಗಳು ಕನ್ನಡದಲ್ಲಿ ಅನುವಾದ ಆಗುವಾಗ ಅಂತಹ ವಿಲನ್ ಗಳಿಗೆ ಧ್ವನಿ ನೀಡಿದ್ದು ಕನ್ನಡ ಕಿರುತೆರೆಯ ಅಗ್ನಿಸಾಕ್ಷಿ ಧಾರಾವಾಹಿಯ ಒಬ್ಬ ಪಾತ್ರಧಾರಿ.

ಹೌದು ಇದೀಗ ಕನ್ನಡ ಕಿರುತೆರೆಯಲ್ಲಿ ಜನಮನ ತಲ್ಲಣಗೊಳಿಸಿ ಜನರನ್ನು ಮನರಂಜಿಸಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ಪಾತ್ರದಾರಿ ಒಬ್ಬರು ಇಂತಹ ಕನ್ನಡಕ್ಕೆ ಅನುವಾದವಾದ ಧಾರವಾಹಿಗಳಿಗೆ ನೀಡಿದ್ದಾರೆ. ಹೌದು ಅವರು ಮಹಾಭಾರತ ಹಾಗೂ ರಾಧಾಕೃಷ್ಣ ಕನ್ನಡಕ್ಕೆ ಅನುವಾದವಾಗುವ ಈ ಧಾರಾವಾಹಿಯ ವಿಲನ್ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. ಅವರು ಮತ್ತ್ಯಾರು ಅಲ್ಲ ಧಾರಾವಾಹಿಯ ಖಳನಾಯಕಿ ಚಂದ್ರಿಕಾ ಅವರ ಬಲಗೈ ಬಂಟ ಗರುಡ ಖ್ಯಾತಿಯ ಪುನೀತ್ ಬಾಬು.

ಹೌದು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕನಾಗಿ ಎಲ್ಲ ಜನರ ಮನಗೆದ್ದಿದ್ದ ನಟ ಪುನೀತ್ ಬಾಬು ಅವರು ಒಬ್ಬ ಡಬ್ಬಿಂ ಆರ್ಟಿಸ್ಟ್. ಇವರು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ರಾಧಾಕೃಷ್ಣ ಧಾರವಾಹಿ ಕಂಸ ಪಾತ್ರಧಾರಿಗೆ ಕನ್ನಡದಲ್ಲಿ ಧ್ವನಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಮತ್ತೊಂದು ಧಾರವಾಹಿ ಮಹಾಭಾರತದ ದುರ್ಯೋಧನನ ಪಾತ್ರಕ್ಕೆ ಕೂಡ ಕನ್ನಡದಲ್ಲಿ ದ್ವನಿ ನೀಡಿದ್ದಾರೆ. ಇನ್ನು ಈ ಧಾರವಾಹಿಗಳಲ್ಲಿ ಧ್ವನಿ ಸಂಯೋಜನೆ ಉತ್ತಮವಾಗಿ ಮೂಡಿಬಂದಿದ್ದು, ಪುನೀತ್ ಬಾಬು ಅವರು ಈ ಎರಡು ಪಾತ್ರಗಳಿಗೆ ತಮ್ಮ ಕಂಠದಾನ ಮಾಡಿದ್ದಾರೆ. ಇನ್ನು ಅಗ್ನಿಸಾಕ್ಷಿ ಧಾರಾವಾಹಿ ಎಲ್ಲಿ ಇವರನ್ನು ನೋಡಿದಾಗ ಈ ರೀತಿ ಕಂಠದಾನ ಮಾಡುತ್ತಾರೆ ಎಂದು ಸಾಕಷ್ಟು ಜನರಿಗೆ ತಿಳಿದಿರಲಿಲ್ಲ.

Leave A Reply

Your email address will not be published.