Neer Dose Karnataka
Take a fresh look at your lifestyle.

ಕನ್ನಡ ಕಿರುತೆರೆಯ ಟಾಪ್ ರಿಯಾಲಿಟಿ ಶೋಗಳ ಟಾಪ್ ನಿರೂಪಕರ ಸಂಭಾವನೆ ಎಷ್ಟು ಗೊತ್ತಾ???ಯಪ್ಪಾ ಇಷ್ಟೊಂದಾ??

7

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಆದಷ್ಟೊ ರಿಯಾಲಿಟಿ ಶೋಗಳು ಹಲವಾರು ಕಲಾವಿದರಿಗೆ ಹಾಗೂ ಜನರಿಗೆ ವೇದಿಕೆಯನ್ನು ಒದಗಿಸುವುದರ ಮೂಲಕ ಅವರ ಜೀವನಕ್ಕೊಂದು ದಾರಿ ಮಾಡಿಕೊಡುತ್ತಿವೆ. ಅಷ್ಟೇ ಅಲ್ಲದೆ ಇವು ವೀಕ್ಷಕರಿಗೆ ಮನರಂಜನೆ ನೀಡುವುದರ ಮೂಲಕ ಮೆಚ್ಚುಗೆಯನ್ನು ಪಡೆದುಕೊಂಡಿವೆ. ಇನ್ನು ಕನ್ನಡ ಕಿರುತೆರೆಯಲ್ಲಿ ಇಂತಹ ಫೇಮಸ್ ರಿಯಾಲಿಟಿ ಶೋಗಳನ್ನು ನಾವು ಹಲವಾರು ವೀಕ್ಷಿಸಿದ್ದೇವೆ.

ಇನ್ನು ಪ್ರತಿಯೊಂದು ಸಿನಿಮಾ ಅಥವಾ ಧಾರವಾಹಿಗೆ ಹೀರೋ ಹಾಗೂ ಹೀರೋಯಿನ್ ಅವಶ್ಯಕತೆಯಿದ್ದಂತೆ, ಕಿರುತೆರೆಯ ರಿಯಾಲಿಟಿ ಶೋಗಳಿಗೆ ಕೂಡ ನಿರೂಪಕರ ಅವಶ್ಯಕತೆ ಇದ್ದೇ ಇರುತ್ತದೆ. ಇನ್ನು ಈ ನಿರೂಪಕರು ಪಡೆಯುವ ಒಂದು ದಿನದ ಸಂಭಾವನೆ ಎಷ್ಟು ಗೊತ್ತಾ? ಹಾಗಿದ್ದರೆ ಕನ್ನಡದ ಟಾಪ್ ನಿರೂಪಕರು ಒಂದು ದಿನಕ್ಕೆ ಎಷ್ಟು ಹಣ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಇದೀಗಾಗಲೇ ಕನ್ನಡ ಕಿರುತೆರೆಯಲ್ಲಿ ಅನುಶ್ರೀ, ಅಕುಲ್ ಬಾಲಾಜಿ, ಮಾಸ್ಟರ್ ಆನಂದ್, ಅನುಪಮಾ, ಗೋಲ್ಡನ್ ಸ್ಟಾರ್ ಗಣೇಶ್, ಚಿತ್ರರಂಗದ ಹಿರಿಯ ನಟಿ ಲಕ್ಷ್ಮಿ, ಕಿಚ್ಚ ಸುದೀಪ್, ಪುನೀತ್ ರಾಜಕುಮಾರ್, ಸೃಜನ್ ಲೋಕೇಶ್ ಸೇರಿದಂತೆ ಸಾಕಷ್ಟು ಜನ ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲ ಪ್ರತಿಯೊಂದು ಎಪಿಸೋಡಿಗೆ ಇಷ್ಟು ಎಂದು ಸಂಭಾವನೆ ಪಡೆಯುತ್ತಾರೆ. ಹೌದು ಈ ನಿರೂಪಕರಿಗೆ ಒಂದು ಎಪಿಸೋಡಿಗೆ ಸಂಭಾವನೆಯನ್ನು ನಿಗದಿ ಮಾಡಲಾಗಿರುತ್ತದೆ. ಹಾಗಾದರೆ ಅವರು ಪಡೆಯುವ ಸಂಭಾವನೆಯನ್ನು ತಿಳಿದುಕೊಳ್ಳೋಣ ಬನ್ನಿ.

ಕನ್ನಡ ಕಿರುತೆರೆಯಲ್ಲಿ ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಸೂಪರ್ ಜೋಡಿ ಸೇರಿದಂತೆ ಸಾಕಷ್ಟು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದ ಅಕುಲ್ ಬಾಲಾಜಿ ಅವರು ದಿನಕ್ಕೆ 18 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ಕನ್ನಡದ ಹಿರಿಯ ನಟಿ ಲಕ್ಷ್ಮೀ ಅವರು ಕೂಡ ಕೆಲವು ರಿಯಲ್ಟಿ ಶೋ ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೌದು ನಟಿ ಲಕ್ಷ್ಮೀ ಅವರು ಕಥೆಯಲ್ಲ ಜೀವನ, ನಾನಾ ನೀನಾ, ಸದಾ ನಿಮ್ಮೊಂದಿಗೆ ಎಂಬ ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಇನ್ನು ಇವರು ಒಂದು ದಿನಕ್ಕೆ ಪಡೆಯುವ ಸಂಭಾವನೆ 12 ಸಾವಿರ ರೂಪಾಯಿಗಳು.

ಇದೀಗ ಬೇಡಿಕೆಯಲ್ಲಿರುವ ನಿರೂಪಕಿ ಎಂದರೆ ಅದು ಅನುಶ್ರೀ. ಇದೀಗ ಇವರು ಆಂಕರ್ ಅನುಶ್ರೀ ಅಂತಲೇ ಪ್ರಖ್ಯಾತಿ ಪಡೆದಿದ್ದಾರೆ. ಇವರು ಸರಿಗಮಪ, ಡಾನ್ಸ್ ಕರ್ನಾಟಕ ಡಾನ್ಸ್ ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ನಿರೂಪಕಿ ಆಗಿದ್ದಾರೆ. ಅಷ್ಟೇ ಅಲ್ಲದೆ ಇವರು ಅನೇಕ ಕಾರ್ಯಕ್ರಮಗಳಿಗೆ ಹಾಗೂ ಸಭೆ-ಸಮಾರಂಭಗಳಿಗೆ ಕೂಡ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರು ಒಂದು ಎಪಿಸೋಡಿಗೆ 25 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.

ಇನ್ನು ಬಾಲನಟನಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟ ಮಾಸ್ಟರ್ ಆನಂದ್ ಅವರು ಇದೀಗ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೌದು ಅವರು ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿದ್ದಾರೆ. ಇನ್ನು ಇವರು ಒಂದು ದಿನಕ್ಕೆ ಪಡೆಯುವ ಸಂಭಾವನೆ 20 ಸಾವಿರ ರೂಪಾಯಿ. ಅದೇ ರೀತಿ ಮಜಾ ಟಾಕೀಸ್ ರಿಯಾಲಿಟಿ ಶೋದಲ್ಲಿ ನಿರೂಪಕರಾಗಿ ಕಾಣಿಸಿಕೊಳ್ಳುವ ನಟ ಸೃಜನ್ ಲೋಕೇಶ್ ಅವರು ಒಂದು ದಿನಕ್ಕೆ 45 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.

ಇನ್ನು ಚಿತ್ರರಂಗದ ಹಲವಾರು ಕಲಾವಿದರನ್ನು ಸಂದರ್ಶಿಸುವ ವೇದಿಕೆಯಾಗಿರುವ ವೀಕೆಂಡ್ ವಿತ್ ರಮೇಶ್ ರಿಯಾಲಿಟಿ ಶೋದಲ್ಲಿ ಕನ್ನಡದ ಹಿರಿಯ ನಟ ರಮೇಶ್ ಅರವಿಂದ್ ಅವರು ನಿರೂಪಕರಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಒಂದು ಎಪಿಸೋಡಿಗೆ 75 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೂಪರ್ ಮಿನಿಟ್ ಎಂಬ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಾರೆ. ಇವರು 1,10,000 ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಜ್ಞಾನದ ಬಂಡಾರವನ್ನು ಜನರಿಗೆ ಒದಗಿಸುವ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ. ಹೌದು ಕನ್ನಡದ ಕೋಟ್ಯಾಧಿಪತಿ ರಿಯಾಲಿಟಿ ಶೋ ಅನ್ನು ಕನ್ನಡದ ಸ್ಟಾರ್ ನಟ ಪುನೀತ್ ರಾಜಕುಮಾರ್ ಅವರು ನಿರೂಪನೆ ಮಾಡುತ್ತಾರೆ. ಏನೋ ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಪುನೀತ್ ರಾಜಕುಮಾರ್ ಅವರು ದಿನವೊಂದಕ್ಕೆ 3,24,000 ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.

ಇನ್ನು ಇದೀಗಾಗಲೇ 7 ಸೀಸನ್ ಗಳನ್ನು ಮುಗಿಸಿ ಇತ್ತೀಚಿಗಷ್ಟೇ 8ನೇ ಸೀಸನ್ ಕರುನಾ ಕಾರಣದಿಂದಾಗಿ ಅರ್ಧಕ್ಕೆ ನಿಂತು ಹೋಗಿರುವ ಬಿಗ್ ಬಾಸ್ ರಿಯಾಲಿಟಿ ಶೋ ಕೂಡ ಕನ್ನಡದ ಪ್ರಮುಖ ರಿಯಾಲಿಟಿ ಶೋಗಳಲ್ಲಿ ಒಂದು. ಇನ್ನು ಈ ಕಾರ್ಯಕ್ರಮವನ್ನು ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಾರೆ. ಇದೀಗ ಇವರು ನಿರೂಪಣೆ ಮಾಡಲು ಒಂದು ದಿನಕ್ಕೆ ಸುಮಾರು 5 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಈ ನಿರೂಪಕರು ಇಷ್ಟೆಲ್ಲಾ ಸಂಭಾವನೆ ಪಡೆಯುತ್ತಾರೆ ನೋಡಿ. ಇನ್ನು ಇವರಲ್ಲಿ ಯಾರು ನಿರೂಪಣೆ ನಿಮಗೆ ತುಂಬಾ ಇಷ್ಟವಾಗಿದೆ ಎಂಬುದನ್ನು ನಮಗೆ ತುಂಬಾ ಮಾಡಿ ತಿಳಿಸಿ.

Leave A Reply

Your email address will not be published.