Neer Dose Karnataka
Take a fresh look at your lifestyle.

ದಕ್ಷಿಣ ಭಾರತದ ಪಂಚಭಾಷಾ ನಟಿ ಸುಹಾಸಿನಿ ಅವರ ತಂಗಿ ಕೂಡ ಕನ್ನಡ ಕಿರುತೆರೆಯ ಖ್ಯಾತ ನಟಿ! ಅವರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟಿಯರು ತಮ್ಮ ನಟನೆಯ ಮೂಲಕ ಹಲವಾರು ಸಿನಿಪ್ರಿಯರ ಮೆಚ್ಚುಗೆಯನ್ನು ಪಡೆದಿದ್ದಾರೆ. ಅವರಲ್ಲಿ ನಟಿ ಸುಹಾಸಿನಿ ಕೂಡ ಒಬ್ಬರು. ಹೌದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ಸಿನಿ ಪರದೆ ಹಂಚಿಕೊಳ್ಳುವ ಮೂಲಕ ನಟಿ ಸುಹಾಸಿನಿ ಅವರು ಕನ್ನಡ ಚಿತ್ರರಂಗದ ಪ್ರಖ್ಯಾತ ನಟಿ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿರುವ.

ಇನ್ನು ಇವರು ಸಾಕಷ್ಟು ಕೌಟುಂಬಿಕ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಸಿನಿಪ್ರಿಯರ ನಿದ್ದೆಗೆಡಿಸಿದವರು. ಇನ್ನು ಇವರು ನಟಿಸಿರುವ ಎಲ್ಲಾ ಸಿನಿಮಾಗಳು ಕೂಡ ಕನ್ನಡ ಚಿತ್ರರಂಗದಲ್ಲಿ ಮರೆಯಲಾರದಂತಹ ಸಿನಿಮಾಗಳಾಗಿವೆ. ಇಂದಿಗೂ ಕೂಡ ಇವರು ಭಾವನಾತ್ಮಕವಾಗಿ ನಟಿಸಿರುವ ಹಲವಾರು ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ.

ನಟಿ ಸುಹಾಸಿನಿ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ಇವರು 1980ರಲ್ಲಿ ‘ನೆಂಜಥೈ ಕಿಲ್ಲಥೆ’ ಎಂಬ ತಮಿಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕೂಡವಿದೆ ಎಂಬ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದೇ ರೀತಿ ಸುಹಾಸಿನಿ ಅವರು 1983 ರಲ್ಲಿ ತೆರೆಕಂಡ ‘ಬೆಂಕಿಯಲ್ಲಿ ಅರಳಿದ ಹೂವು’ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ನಂತರ ಅವರು ಕನ್ನಡ ಚಿತ್ರರಂಗದ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದರು. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ನಟ ವಿಷ್ಣುವರ್ಧನ ಅವರೊಂದಿಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡ ಚಿತ್ರಂಗದ ಖ್ಯಾತ ಜೋಡಿಗಳಲ್ಲಿ ನಟ ವಿಷ್ಣುವರ್ಧನ್ ಹಾಗೂ ಶುಭಾಶಯಗಳು ಕೇಳಿಬರುತ್ತದೆ. ಹೌದು ನಟಿ ಸುಹಾಸಿನಿ ಅವರು ವಿಷ್ಣುವರ್ಧನ್ ಅವರೊಂದಿಗೆ ಮುತ್ತಿನ ಹಾರ, ಬಂಧನ, ಹೆಂಡ್ತಿಗೆ ಹೇಳ್ತೀನಿ, ಸುಪ್ರಭಾತ, ಹಿಮಪಾತ, ಸ್ಕೂಲ್ ಮಾಸ್ಟರ್ ಎಂಬ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ರಮೇಶ್ ಅರವಿಂದ್ ಅವರೊಂದಿಗೆ ಅಮೃತವರ್ಷಿಣಿ ಎಂಬ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದಾರೆ.

ಇನ್ನು ಇವರ ವೈಯಕ್ತಿಕ ಜೀವನಕ್ಕೆ ಬಂದಾಗ ಇವರಿಗೆ ಒಬ್ಬರು ತಂಗಿ ಕೂಡ ಇದ್ದಾರೆ. ತಂಗಿ ಎಂದರೆ ನಟಿಸುವ ಸಿಂ ಇವರ ಚಿಕ್ಕಮ್ಮನ ಮಗಳು. ಅವರು ಕೂಡ ಖ್ಯಾತ ನಟಿಯಾಗಿದ್ದಾರೆ. ಅವರ ಹೆಸರು ಅನು ಹಾಸನ್. ಹೌದು ಇವರು ತಮಿಳಿನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದು ತಮಿಳಿನ ಖ್ಯಾತ ನಿರೂಪಕಿಯಾಗಿ ಕೂಡ ಹೆಸರುಗಳಿಸಿದ್ದಾರೆ.

ಅಷ್ಟೇ ಅಲ್ಲದೆ ಇವರು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದು ಅವುಗಳಲ್ಲಿ ಗೋಲ್ಮಾಲ್ ಗೌರಮ್ಮ ಎಂಬ ಧಾರಾವಾಹಿಯಲ್ಲಿ ನಟಿಸಿದ ಇವರ ಪಾತ್ರ ಇಂದಿಗೂ ಕೂಡ ಜನರಿಗೆ ಚಿರಪರಿಚಿತ. ಇನ್ನು ಇವರ ಭಾವಚಿತ್ರಗಳನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ಸುಹಾಸಿನಿ ಅವರ ತಂಗಿ ತಮಿಳು ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಫೇಮಸ್ ಆಗಿದ್ದಾರೆ. ಇನ್ನು ಇವರು ಕೂಡ ತಮ್ಮ ಅಕ್ಕನಂತೆ ಬಣ್ಣದ ಲೋಕದಲ್ಲಿ ಹೆಸರು ಮಾಡಲಿ ಎಂದು ನಾವು ಈ ಮೂಲಕ ಹಾರೈಸೋಣ.

Comments are closed.