Neer Dose Karnataka
Take a fresh look at your lifestyle.

ಕರುನಾಡಿನ ಕನಸಿನ ರಾಣಿ ಮಾಲಾಶ್ರೀ ಅವರ ಸಹೋದರಿ ಕೂಡ ಖ್ಯಾತ ನಟಿಯಂತೆ! ಯಾರು ಗೊತ್ತೇ??

23

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ಸಿನಿಪ್ರಿಯರ ಮನಸ್ಸನ್ನು ಕದ್ದಿದ್ದಾರೆ. ತಮ್ಮ ನಟನೆಯ ಮೂಲಕ ಹಾಗೂ ತಮ್ಮ ಮುಗ್ಧತೆಯ ಮೂಲಕ ಅಷ್ಟೇ ಅಲ್ಲದೆ ತಮ್ಮ ಸೌಂದರ್ಯದ ಮೂಲಕ ಸಾಕಷ್ಟು ಯುವಕರ ನಿದ್ದೆಗೆಡಿಸಿದ್ದು ಹೌದು. ಇಂತಹ ನಟಿಯರಲ್ಲಿ ಕನ್ನಡ ಚಿತ್ರರಂಗದ ‘ಕನಸಿನ ರಾಣಿ’ ಮಾಲಾಶ್ರೀ ಅವರು ಕೂಡ ಒಬ್ಬರು. ಹೌದು ನಟಿ ಮಾಲಾಶ್ರೀ ಅವರು ಸಾಕಷ್ಟು ಕೌಟುಂಬಿಕ ಚಿತ್ರಗಳಲ್ಲಿ ಹಾಗೂ ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸಿನ ಸಿನಿಮಾಗಳನ್ನು ಕೂಡ ಅವರು ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು 1979 ರಲ್ಲಿ ತೆರೆಕಂಡ ‘ಇಮಾಯಂ’ ಎಂಬ ತಮಿಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದೇ ರೀತಿ 1986 ರಲ್ಲಿ ‘ಚಿನ್ನ ಬಾಬು’ ಎಂಬ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ 1987 ರಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಅಭಿನಯದ ‘ನಂಜುಂಡಿ ಕಲ್ಯಾಣ’ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಹೀಗೆ ತಮಿಳು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಕನಸಿನರಾಣಿ ಎನಿಸಿಕೊಂಡರು. ಇನ್ನು ಇವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದು ಹೆಚ್ಚಾಗಿ ಖಡಕ್ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅವರು ಅಭಿನಯಿಸಿದ ದುರ್ಗಿ ಸಿನಿಮಾದಿಂದ ಇತ್ತೀಚಿಗೆ ಅವರು ಸಾಕಷ್ಟು ಆಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇನ್ನು ಕೇವಲ ಕೌಟುಂಬಿಕ ಸಿನಿಮಾದಲ್ಲಿ ಮಾತ್ರವಲ್ಲದೆ ಅವರು ಆಕ್ಷನ್ ಸಿನಿಮಾಗಳಲ್ಲಿ ಕೂಡ ಮಿಂಚುತ್ತಿದ್ದಾರೆ. ಇನ್ನು ಇವರಿಗೆ ಒಬ್ಬರು ಸಹೋದರಿ ಇದ್ದಾರೆ. ಅವರು ಕೂಡ ಚಿತ್ರಂಗದಲ್ಲಿ ಬಾರಿ ಫೇಮಸ್ ನಟಿಯಂತೆ. ಇನ್ನೊಬ್ಬರು ಯಾರು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಹೌದು ನಟಿ ಮಾಲಾಶ್ರೀ ಅವರಿಗೆ ಶುಭಶ್ರೀ ಎಂಬ ಸಹೋದರಿ ಇದ್ದಾರೆ. ಇವರು ಕೂಡ ಮಾಲಾಶ್ರೀ ಅವರಂತೆ ಕನ್ನಡ, ತಮಿಳು, ತೆಲುಗು ಭಾಷೆಯ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ಅವರು ಸುಮಾರು ಮೂವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಶುಭಶ್ರೀ ಅವರು 1993 ರಲ್ಲಿ ‘ನಾವಿಬ್ಬರು ನಮಗಿಬ್ಬರು’ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಅವರು ಶ್ರೀಮತಿ ಕಲ್ಯಾಣ, ಚಿರಬಾಂಧವ್ಯ, ಸೋಮ, ಸರ್ಕಲ್ ಇನ್ಸ್ಪೆಕ್ಟರ್, ಪಟ್ಟಣಕ್ಕೆ ಬಂದ ಪುಟ್ಟ, ಮಾವನ ಮಗಳು, ಕಲ್ಯಾಣಿ ಹೀಗೆ ಸಾಕಷ್ಟು ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಮಾತ್ರವಲ್ಲದೆ ತಮಿಳಿನ ಜಂಟಲ್ ಮ್ಯಾನ್, ಆರುಸಾಮಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಅವರು ತೆಲುಗು ಚಿತ್ರರಂಗದಲ್ಲಿ ಪೋಕಿರಿ ರಾಜ, ಗ್ಯಾಂಗ್ ಮಾಸ್ಟರ್, ಪೆದ್ದನ್ನಯ್ಯ, ಪುಣ್ಯ ಭೂಮಿ ನಾ ದೇಶಂ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಮಾಲಾಶ್ರೀ ಅವರ ಸಹೋದರಿ ಶುಭಶ್ರೀ ಅವರು ಕೂಡ ಖ್ಯಾತ ನಟಿಯಾಗಿದ್ದಾರೆ.

Leave A Reply

Your email address will not be published.