Neer Dose Karnataka
Take a fresh look at your lifestyle.

ಐಪಿಎಲ್ ಮರು ಆರಂಭ ಘೋಷಣೆಯಾದ ಬಳಿಕ ಎದುರಾಗುತ್ತಿವೆ ನೂರಾರು ವಿಗ್ನಗಳು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ – 2021 ಅರ್ಧಕ್ಕೆ ನಿಲ್ಲದೇ ಸರಾಗವಾಗಿ ಮುಂದುವರಿದಿದ್ಧರೇ, ಇಂದು ಏರಡನೇ ಕ್ವಾಲಿಫೈಯರ್ ನಡೆಯಬೇಕಿತ್ತು. ಆದರೇ ಬಯೋ ಬಬಲ್ ನಲ್ಲಿದ್ದ ಆಟಗಾರರಿಗೆ ಕೋರೋನಾ ಬಂದ ಕಾರಣ ಟೂರ್ನಿಯನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ನಿನ್ನೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡಿದ್ದ ಬಿಸಿಸಿಐ ಹಾಗೂ ಐಪಿಎಲ್ ನ ಆಡಳಿತ ಮಂಡಳಿ ಕೊನೆಗೂ ಬಾಕಿ ಇರುವ ಐಪಿಎಲ್ ಪಂದ್ಯಗಳಿಗೆ ದಿನಾಂಕ ಗೊತ್ತುಪಡಿಸಿತ್ತು. ಇದೇ ಸೆಪ್ಟೆಂಬರ್ 18 ಕ್ಕೆ ಆರಂಭವಾಗುವ ಐಪಿಎಲ್ ನ ಎರಡನೇ ಚರಣ ಅಕ್ಟೋಬರ್ 9 ಅಥವಾ 10 ಕ್ಕೆ ಮುಗಿಯಲಿದೆ ಎಂದು ದಿನಾಂಕ ಪ್ರಕಟಿಸಿತ್ತು. ಆದರೇ ಈಗ ಅದಕ್ಕೂ ಒಂದೊಂದೇ ವಿಘ್ನಗಳು ಆರಂಭವಾಗಿವೆ.

ಸಾಮಾನ್ಯವಾಗಿ ಐಪಿಎಲ್ ಆಯೋಜನೆಗೊಳ್ಳುವುದು ಏಪ್ರೀಲ್ ಹಾಗೂ ಮೇ ತಿಂಗಳಿನಲ್ಲಿ. ಆದ ಕಾರಣ ವಿಶ್ವದ ಬಹುತೇಕ ಎಲ್ಲಾ ದೇಶಗಳು ಆ ಸಮಯದಲ್ಲಿ ಯಾವುದೇ ಕ್ರಿಕೇಟ್ ಪಂದ್ಯವನ್ನು ಆಯೋಜಿಸುವುದಿಲ್ಲ. ಕಾರಣ ತಮ್ಮ ದೇಶದ ಆಟಗಾರದು ಐಪಿಎಲ್ ನಲ್ಲಿ ಆಡಲಿ ಎಂದು. ಮೇ ತಿಂಗಳ ನಂತರವೇ ತಮ್ಮ ದೇಶಿಯ ಹಾಗೂ ಅಂತರಾಷ್ಟ್ರೀಯ ಟೂರ್ನಿಗಳನ್ನ ಆಯೋಜಿಸಿರುತ್ತಾರೆ. ಆದರೇ ಈಗ ಸೆಪ್ಟೆಂಬರನಲ್ಲಿ ಐಪಿಎಲ್ ನ ಉಳಿದ ಚರಣ ನಡೆಯುವುದರಿಂದ ವಿದೇಶಿ ಆಟಗಾರದು ಪಾಲ್ಗೊಳ್ಳಲು ಬಹುತೇಕ ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ಅದರ ವಿವರ ಈ ಕೆಳಗಿನಂತಿದೆ.

ಮೊದಲನೆಯದಾಗಿ ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶದ ನಡುವಿನ ಸರಣಿ – ಭಾರತದ ವಿರುದ್ದ ಆಗಸ್ಟ್ ನಲ್ಲಿ ಟೆಸ್ಟ್ ಸರಣಿ ಮುಗಿದ ನಂತರ ಆತಿಥೇಯ ಇಂಗ್ಲೆಂಡ್ ಬಾಂಗ್ಲಾದೇಶದ ವಿರುದ್ದ 3 ಏಕದಿನ ಹಾಗೂ 3 ಟಿ20 ಯ ಸರಣಿ ಆಡಲಿದೆ. ಇದು ಮುಗಿದ ನಂತರ ಪಾಕಿಸ್ತಾನದ ವಿರುದ್ಲ ಯುಎಇಯಲ್ಲಿ ಸರಣಿ ಆಡಲಿದೆ. ಇದೆಲ್ಲದರ ಮಧ್ಯೆ ಐಪಿಎಲ್ ಆಡಬೇಕು ಎಂದರೇ ಬಯೋ ಬಬಲ್ ಪ್ರವೇಶಿಸಬೇಕು ಹಾಗೂ ಕಡಿಮೆ ಅಂದರೂ10 ದಿನ ಕ್ವಾರಂಟೈನ್ ನಲ್ಲಿರಬೇಕು. ಹಾಗಾಗಿ ಈ ದೇಶದ ಕ್ರಿಕೇಟಿಗರು ಐಪಿಎಲ್ ನಲ್ಲಿ ಆಡುವುದು ಅನುಮಾನ.

ಇನ್ನು ಎರಡನೆಯದಾಗಿ ನ್ಯೂಜಿಲೆಂಡ್ ತಂಡದ ಶೆಡ್ಯೂಲ್ – ಇಂಗ್ಲೇಂಡ್ ನಲ್ಲಿ ಅಂತರಾಷ್ಟ್ರೀಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮುಗಿದ ನಂತರ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ ಎಕದಿನ, ಟೆಸ್ಟ್ ಹಾಗೂ ಟಿ20 ಸರಣಿ ಆಡಲಿದೆ. ಹಾಗಾಗಿ ಆ ದೇಶದ ಆಟಗಾರರು ಸಹ ಐಪಿಎಲ್ ನ ಮುಂದುವರಿದ ಚರಣದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಮೂರನೆಯದಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸರಣಿ – ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ದ ಸರಣಿಯಲ್ಲಿ ಹಾಗೂ ಸೌತ್ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ದದ ಸರಣಿಯನ್ನು ಆಯೋಜಿಸಿದೆ. ಹಾಗಾಗಿ ಇವರ ಭಾಗವಹಿಸುವಿಕೆ ಸಹ ಅನುಮಾನವಾಗಿದೆ.ಇನ್ನು ಅಷ್ಟೇ ಅಲ್ಲದೆ.ವೆಸ್ಟ್ ಇಂಡಿಸ್ ಕ್ರಿಕೇಟ್ ತಂಡ – ವಿಂಡೀಸ್ ತಂಡ ತನ್ನ ದೇಶಿಯ ಟೂರ್ನಿ ಕೆರೆಬಿಯನ್ ಕ್ರಿಕೇಟ್ ಲೀಗ್ ನ್ನು ಆಗಸ್ಟ್ 28 ರಿಂದ ಸೆಪ್ಟೆಂಬರ್ 19ರ ವರೆಗೆ ಹಮ್ಮಿಕೊಂಡಿದೆ. ಅದು ಮುಗಿದ ನಂತರ ಅಲ್ಲಿನ ಆಟಗಾರರು ಐಪಿಎಲ್ ಆಡಲು ಬಂದರೇ ಕ್ವಾರಂಟೈನ್ ನಲ್ಲಿ 10 ದಿನ ಇರಬೇಕು. ಅಷ್ಟರೊಳಗೆ ಐಪಿಎಲ್ ಮುಗಿದು ಬಿಡುತ್ತದೆ. ಹಾಗಾಗಿ ಅವರ ಭಾಗವಹಿಸುವಿಕೆ ಸಹ ಅನುಮಾನವಾಗಿದೆ. ಒಟ್ಟಿನಲ್ಲಿ ವಿದೇಶಿ ಆಟಗಾರರ ಅನುಪಸ್ಥಿತಿಯಲ್ಲಿ ದೇಶಿಯ ಆಟಗಾರರೇ ಐಪಿಎಲ್ ಆಡಬಹುದಾದ ಸಾಧ್ಯತೆಯಿದೆ.

Comments are closed.