Neer Dose Karnataka
Take a fresh look at your lifestyle.

ಚಕ್ರವರ್ತಿ ರವರು ಬಿಗ್ ಬಾಸ್ ಮನೆಯಿಂದ ಹೊರ ಬಂದು ಲೈವ್ ನಲ್ಲಿ ಶ್ರುತಿ ರವರ ಕುರಿತು ಹೇಳಿದ್ದೇನು ಗೊತ್ತಾ??

6

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಯಾವ ಗಳಿಗೆಯಲ್ಲಿ ಪ್ರಾರಂಭವಾಯಿತೋ ಏನು ಅರ್ಧದಲ್ಲೇ ನಿಂತು ಹೋದ ಮೊದಲ ಬಿಗ್ ಬಾಸ್ ಸೀಸನ್ ಆಗಿತ್ತು. ಎರಡು ವಾರಾಂತ್ಯಗಳು ಕಿಚ್ಚ ಸುದೀಪ್ ರವರ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಂತರೆ, ನಂತರ ಬಂದಂತಹ ಪರಿಸ್ಥಿತಿ ಇಡೀ ಬಿಗ್ ಬಾಸ್ ನ್ನು ಕಲರ್ಸ್ ಕನ್ನಡ ವಾಹಿನಿ ನಿಲ್ಲಿಸೋ ಹಾಗೆ ಆಗಿತ್ತು. ಆದರೆ ಈ ಸೀಸನ್ ಶಾರ್ಟ್ ಆಗಿದ್ದರೂ ಬಹಳಷ್ಟು ಮಹಾನ್ ಪುರುಷರ ಪರಿಚಯವನ್ನು ಮಾಡಿತ್ತು ಎಂದರೆ ತಪ್ಪಾಗಲಾರದು. ನಡೆದದ್ದು 70 ದಿನಗಳ ಆಸುಪಾಸಿನಷ್ಟು ಸಂಚಿಕೆಯಾದರೂ ಸಹ ಎಂಟರ್ಟೈನ್ಮೆಂಟ್ ಭರಪೂರ ವಾಗಿ ವೀಕ್ಷಕರು ಪಡೆದಿದ್ದರು.

ಈ ಬಾರಿಯ ಬಿಗ್ ಬಾಸ್ ನಲ್ಲಿ ಪ್ರಶಾಂತ್ ಸಂಬರ್ಗಿಯವರ ವಾಯ್ಸ್ ಬಿಗ್ ಬಾಸ್ ಮನೆಯ ಎಲ್ಲಾ ಕಡೆ ಸ್ವಲ್ಪ ಜೋರಾಗೇ ಸದ್ದಾಗುತ್ತಿತ್ತು. ಪ್ರತಿಸ್ಪರ್ಧಿಗಳು ಅವರ ಮಾತಿಗೆ ಎದುರಾಡುವಂತೆ ಇರಲಿಲ್ಲ. ಅಂತಹ ಪರಿಸ್ಥಿತಿಯನ್ನು ಪ್ರಶಾಂತ್ ಸಂಬರ್ಗಿಯವರ ಮೊನಚಾದ ಮಾತು ಹಾಗೂ ಅವರ ವಾದ ಮಾಡುವ ಶೈಲಿ ಉಂಟು ಮಾಡಿತ್ತು. ಆದರೆ ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರೆ ಚಂದ್ರಚೂಡ.

ಚಂದ್ರಚೂಡ ರವರು ಬಿಗ್ ಬಾಸ್ ಗೆ ಎಂಟ್ರಿ ನೀಡುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಇದ್ದವರೆಲ್ಲಾ ಒಮ್ಮೆ ಗಾಬರಿಯಾಗಿ ಹೋಗಿದ್ದರು. ಎಲ್ಲರಿಗಿಂತ ಹೆಚ್ಚಾಗಿ ಪ್ರಶಾಂತ್ ಸಂಬರ್ಗಿಯವರ ಹಾರಾಟ ಹಾಗೂ ವಾಗ್ಯುದ್ಧಗಳು ನಿಂತಿದ್ದವು. ಅಷ್ಟೇ ಅಲ್ಲ ಚಂದ್ರಚೂಡ ರವರ ಮಾತುಗಳನ್ನು ಕೂಡ ಪ್ರಶಾಂತ್ ರವರು ಸಂಪೂರ್ಣವಾಗಿ ಒಪ್ಪುತ್ತಿದ್ದರು. ಯಾಕೆಂದರೆ ಚಂದ್ರಚೂಡ ರವರ ಬಗ್ಗೆ ಪ್ರಶಾಂತ್ ಸಂಬರ್ಗಿಯವರಿಗೆ ಮೊದಲಿನಿಂದಲೂ ತಿಳಿದಿತ್ತು.

ಚಂದ್ರಚೂಡ ರವರು ವೃತ್ತಿಪರ ಬರಹಗಾರರು. ಬರಹಗಾರರ ಲೋಕದಲ್ಲಿ ಅವರು ಖ್ಯಾತನಾಮರು. ಇನ್ನೂ ಇವರ ಬಗ್ಗೆ ನಿಮಗೆ ಗೊತ್ತಿಲ್ಲವೆಂದರೆ ಇನ್ನೊಂದು ವಿಷಯವನ್ನು ನಿಮಗೆ ಹೇಳುತ್ತೇವೆ. ಚಂದ್ರಚೂಡ ರವರು ನಿಮಗೆ ಯಾರೆಂದು ಇನ್ನೂ ನಿಮಗೆ ಗೊತ್ತಾಗಿಲ್ಲವೆಂದರೆ ಅವರ ಬಗ್ಗೆ ಇನ್ನು ಸವಿಸ್ತಾರವಾಗಿ ಹೇಳುತ್ತೇವೆ ಬನ್ನಿ. ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ರವರ ನಿರ್ದೇಶಕ ಮಹೇಂದರ್ ರವರಿಂದ ವಿಚ್ಛೇದನ ಪಡೆದ ನಂತರ ಎರಡನೇ ಮದುವೆಯಾಗಿದ್ದು ಇದೇ ಪತ್ರಕರ್ತ ರಾದಂತಹ ಚಂದ್ರಚೂಡ ರವರನ್ನೇ.

ಶ್ರುತಿ ಯವರು ಚಂದ್ರಚೂಡ ರವರನ್ನು ಕೊಲ್ಲೂರಿನ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಆಗಿದ್ದರು. ಇದರ ಕುರಿತಂತೆ ಚಂದ್ರಚೂಡ ರವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇತ್ತೀಚಿನ ದಿನಗಳಲ್ಲಿ ಸಂದರ್ಶನ ಹಾಗೂ ಲೈವ್ ಗಳಲ್ಲಿ ಕೂಡ ಹೇಳಿದ್ದಾರೆ. ಇಬ್ಬರ ಮದುವೆ ಪರಸ್ಪರ ಒಪ್ಪಿಗೆಯಿಂದ ನಡೆದಿದ್ದರೂ ಚಂದ್ರಚೂಡ ರವರು ತಮ್ಮ ಮೊದಲ ಪತ್ನಿಗೆ ಕಾನೂನು ಪ್ರಕಾರ ವಿಚ್ಛೇದನ ನೀಡಿ ಬೇರೆಯಾಗಿರಲಿಲ್ಲ.

ಆದ್ದರಿಂದ ಚಂದ್ರಚೂಡ ರವರ ಪತ್ನಿ ಇವರಿಬ್ಬರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿದರು. ನಂತರದ ದಿನಗಳಲ್ಲಿ ಇಬ್ಬರೂ ತಮ್ಮ ಮದುವೆಯನ್ನು ಕಾನೂನಾತ್ಮಕವಾಗಿಯೇ ಅಸಿಂಧು ಗೊಳಿಸಿದರು. ಆದರೆ ಇಂದಿಗೂ ನನ್ನ ಹಾಗೂ ಶ್ರುತಿಯವರ ಮಧ್ಯೆ ಒಳ್ಳೆಯ ಸ್ನೇಹ ಸಂಬಂಧ ಇದೆ. ಇಂದಿಗೂ ಶ್ರುತಿ ಎಂಬ ಹೆಸರಿಗೆ ನಾನು ಬಹಳಷ್ಟು ಗೌರವ ಕೊಡುತ್ತೇನೆ ಎನ್ನುತ್ತಾರೆ ಚಂದ್ರಚೂಡ. ಚಂದ್ರಚೂಡ ರವರ ಎರಡೂ ಮದುವೆಗಳೂ ಸಹ ವಿಫಲವಾದದ್ದು ಇದರ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Leave A Reply

Your email address will not be published.