Neer Dose Karnataka
Take a fresh look at your lifestyle.

ಬಾಲಿವುಡ್ ನಟ ಶಾರುಖ್ ಖಾನ್ ಮಗಳು ಸುಹಾನಾಗೆ ಬಂತು ಮದುವೆ ಪ್ರಪೋಸಲ್! ಹುಡುಗ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಇಡೀ ಜಗತ್ತಿನ ಚಿತ್ರರಂಗದಲ್ಲಿ ಸ್ಟಾರ್ ಗಿರಿ ಪಡೆದ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಹೌದು ಚಿತ್ರರಂಗದಲ್ಲಿ ರೋಮ್ಯಾಂಟಿಕ್ ಹೀರೋ ಎಂದರೆ ಶಾರುಕ್ ಖಾನ್ ಅವರ ಹೆಸರು ಕೇಳಿಬರುತ್ತಿದೆ. ಇವರು ಸಾಕಷ್ಟು ಪ್ರೀತಿ-ಪ್ರೇಮದ ಸಿನಿಮಾಗಳಲ್ಲಿ ಅಭಿನಯಿಸಿ ಪ್ರಖ್ಯಾತಿ ಪಡೆದಿದ್ದಾರೆ. ಇನ್ನು ಅವರು ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಹೌದು ಇದೀಗ ಬಲ್ಲಮೂಲಗಳಿಂದ ತಿಳಿದು ಬಂದ ಪ್ರಕಾರ ಅವರು ತಮ್ಮ ಮುಂದಿನ ಚಿತ್ರ ಪಠಾಣ್ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ.

ಇನ್ನು ಇಷ್ಟೆಲ್ಲಾ ಪ್ರಖ್ಯಾತಿ ಗಳಿಸಿರುವ ಶಾರುಖ್ ಖಾನ್ ಅವರ ಮಗಳು ಸುಹಾನಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಹೌದು ಸ್ಟಾರ್ ಮಕ್ಕಳು ಎಂದರೆ ಅವರು ಏನೇ ಮಾಡಿದರೂ ಕೂಡ ಸುದ್ದಿಯಾಗುತ್ತಲೇ ಇರುತ್ತದೆ. ಅದೇ ರೀತಿ ಇದೀಗ ಸುಹಾನಾಗೆ ಮದುವೆ ಪ್ರಪೋಸಲ್ ಒಂದು ಬಂದಿದೆಯಂತೆ. ಹಾಗಾದರೆ ಹುಡುಗ ಯಾರು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹೌದು ಸ್ಟಾರ್ ಮಕ್ಕಳು ಎಂದರೆ ಸಣ್ಣ ಪುಟ್ಟ ವಿಷಯಗಳಿಗೆ ಕೂಡ ಭಾರಿ ಪ್ರಮಾಣದಲ್ಲಿ ಸುದ್ದಿಯಾಗುತ್ತಾರೆ. ಅವರು ಏನೇ ಮಾಡಿದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಇನ್ನು ಇದೀಗ ಅಮೆರಿಕಾದಲ್ಲಿ ವ್ಯಾಸಂಗ ಮಾಡುತ್ತಿರುವ ಶಾರುಕ್ ಖಾನ್ ಅವರ ಮಗಳು ಸುಹಾನಾ ಮದುವೆ ವಿಚಾರವಾಗಿ ಸುದ್ದಿಯಾಗಿದ್ದಾರೆ. ಹೌದು ಇದೀಗ ಅವರಿಗೆ ಒಂದು ಮದುವೆ ಪ್ರಪೋಸಲ್ ಬಂದಿದ್ದು, ಪ್ರಪೋಸಲ್ ನಲ್ಲಿ ತನ್ನ ಸಂಬಳವನ್ನು ಕೂಡ ಹೇಳಿದ್ದಾರಂತೆ.

ಹೌದು ಇತ್ತೀಚಿಗೆ ಸುಹಾನಾ ಅವರಿಗೆ 21ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಆ ಸಂದರ್ಭದಲ್ಲಿ ಎಲ್ಲರೂ ಕೂಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಅದೇ ರೀತಿ ಅವರ ತಾಯಿ ಗೌರಿ ಖಾನ್ ಅವರು ಕೂಡ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಸುಹಾನ ಅವರ ಫೋಟೋ ಹಂಚಿಕೊಂಡು ಹುಟ್ಟು ಹಬ್ಬದ ಶುಭಾಶಯಗಳು ನೀನು ನನಗೆ ಇಂದು, ನಾಳೆ ಹಾಗೂ ಎದೆಂದಿಗೂ ಕೂಡ ಪ್ರೀತಿಯ ಮಗಳು ಎಂದು ಶುಭ ಹಾರೈಸಿದರು.

ಇನ್ನು ಅವರ ಈ ಪೋಸ್ಟಿಗೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದು ಸಾಕಷ್ಟು ಜನರು ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಸುಹೈಬ್ ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿದೆ. ಹೌದು ಸುಹೈಬ್ ಎಂಬ ವ್ಯಕ್ತಿ ಗೌರಿ ಖಾನ್ ಅವರ ಆ ಪೋಸ್ಟ್ ಗೆ ಕಾಮೆಂಟ್ ಮಾಡಿದ್ದು, ‘ಗೌರಿ ಮೇಡಂ ನಿಮ್ಮ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿ. ನನ್ನ ಸಂಬಳ ತಿಂಗಳಿಗೆ ಒಂದು ಲಕ್ಷ ರೂಪಾಯಿ’ ಎಂದು ಬರೆದುಕೊಂಡಿದ್ದಾನೆ.

ಇದೀಗ ಈ ಕಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಇದನ್ನು ನೋಡಿ ಜನರು ನಗುತ್ತಿದ್ದಾರೆ. ಇನ್ನು ಹಲವಾರು ಜನರು ಇದಕ್ಕೆ ಪ್ರತ್ಯುತ್ತರ ನೀಡುವುದರ ಮೂಲಕ ಸುಹಾನ ಅವರ ದಿನದ ಖರ್ಚು ಒಂದು ಲಕ್ಷ ರೂಪಾಯಿ ಎಂದು ಹೇಳಿದ್ದಾರೆ. ಇನ್ನು ಶಾರುಖ್ ಖಾನ್ ಅವರು ಮಗಳ ಮೇಲೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿದ್ದು ಮುಂದಿನ ದಿನಗಳಲ್ಲಿ ತಮ್ಮ ಅಳಿಯನಾಗಿ ಬರುವ ವ್ಯಕ್ತಿ ಹೇಗಿರಬೇಕೆಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಈ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.