Neer Dose Karnataka
Take a fresh look at your lifestyle.

ದರ್ಶನ್ ರವರ ಮತ್ತೊಂದು ಮುಖವನ್ನು ಎಳೆಯೆಳೆಯಾಗಿ ಬೈಚಿಟ್ಟ ಹಿರಿಯ ನಟ ಚರಣ್ ರಾಜ್, ಹೇಳಿದ್ದೇನು ಗೊತ್ತಾ??

8

ನಮಸ್ಕಾರ ಸ್ನೇಹಿತರೇ ಕನ್ನಡದ ಚಿತ್ರರಂಗದಲ್ಲಿ 2000 ಆಸುಪಾಸಿನ ಇಸವಿಯಲ್ಲಿ ಕನ್ನಡ ಚಿತ್ರರಂಗವನ್ನು ಅದೆಷ್ಟೋ ಜನ ನಟರು ಬಂದು ಆಳಿಹೋಗಿದ್ದಾರೆ. ಅದರಲ್ಲಿ ನಟ ಚರಣ್ ರಾಜ್ ಕೂಡ ಪ್ರಮುಖರು. ನಟ ಚರಣ್ ರಾಜ್ ತಮ್ಮ ಮಾಸ್ ನಟನೆ ಹಾಗೂ ಡೈಲಾಗ್ ಡೆಲಿವರಿ ಖದರ್ ಗೆ ಹೆಸರಾದವರು. ನಟನಾಗಿ ವಿಲನ್ ಆಗಿ ಎಲ್ಲಾ ರೀತಿಯ ನಟನೆಯನ್ನು ಮಾಡಿ ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಸಿದ್ಧರಾದವರು ಚರಣ್ ರಾಜ್.

ಈಗ ಇತ್ತೀಚಿನ ಸಂದರ್ಶನವೊಂದರಲ್ಲಿ ನಟ ಚರಣ್ ರಾಜ್ ರವರು ಸ್ಯಾಂಡಲ್ ವುಡ್ ನ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬಗ್ಗೆ ಖಡಕ್ ಸ್ಟೇಟ್ ಮೆಂಟ್ ಒಂದನ್ನು ನೀಡಿದ್ದಾರೆ. ಅದೇನೆಂದು ಹಾಗೂ ಯಾಕೆ ಹಾಗೇ ಹೇಳಿದರು ಎಂಬುದನ್ನು ನೋಡೋಣ ಬನ್ನಿ. ನಟ ಚರಣ್ ರಾಜ್ ರವರು ಡಿಬಾಸ್ ರವರ ಬಗ್ಗೆ ಮಾತನಾಡುತ್ತಾ ಆತ ಒಳ್ಳೆಯ ವ್ಯಕ್ತಿತ್ವದ ನಟ. ಖ್ಯಾತ ನಟನ ಮಗನಾಗಿದ್ದರೂ ಸಹ ಕನ್ನಡ ಚಿತ್ರರಂಗದಲ್ಲಿ ತನ್ನದೇ ಪರಿಶ್ರಮದಿಂದ ಮೆಲಕ್ಕೆ ಬಂದು ಸ್ಟಾರ್ ಪಟ್ಟವನ್ನು ಪಡೆದ ನಟ. ಆತನ ಬಗ್ಗೆ ನನಗೆ ಒಳ್ಳೆ ಅಭಿಪ್ರಾಯಯವಿದೆ. ನನ್ನ ಡ್ರೈವರ್ ದರ್ಶನ ಬಗ್ಗೆ ಆವಾಗಾವಾಗ ಹೇಳುತ್ತಾ ಇರುತ್ತಾನೆ.

ದರ್ಶನ್ ತಾನು ಶೂಟಿಂಗ್ ನಲ್ಲಿ ಏನು ತಿನ್ನುತ್ತಾನೋ ಅದನ್ನೇ ಚಿತ್ರೀಕರಣದ ಉಳಿದ ಕಲಾವಿದರು ಹಾಗೂ ತಂತ್ರಜ್ಞರಿಗೆ, ಕೆಲಸದವರಿಗೆ ಊಟಕ್ಕೆ ಹಾಕಬೇಕೆಂದು ಹೇಳೋ ಒಳ್ಳೆಯ ಮನಸ್ಸಿನವರೆಂದು. ಅವರು ಕೂಡ ಹಿಂದೆ ಚಿತ್ರರಂಗಕ್ಕೆ ಲೈಟ್ ಬಾಯ್ ಆಗಿ ಬಂದಿದ್ದಾಗ ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದರು ಎಂಬುದನ್ನು ಕೇಳಿ ತಿಳಿದಿದ್ದೇನೆ. ಅವರು ಮಾಂಸ ಪ್ರಿಯ ವೆಂಬುದನ್ನು ಕೇಳಿದ್ದೇನೆ ಅದಕ್ಕೆ ಈಗಲೂ ಅವರು ತಮ್ಮೊಂದಿಗೆ ಕೆಲಸ ಮಾಡುವವರಿಗೆ ಯಾವುದೇ ತಾರತಮ್ಯ ಮಾಡದೇ ಒಟ್ಟಿಗೆ ಕೂರಿಸಿಕೊಂಡು ಊಟ ಹಾಕಿಸುತ್ತಾರೆ. ಇಷ್ಟೆಲ್ಲಾ ಒಳ್ಳೇ ವಿಷಯ ಹೇಳಿದ ಮೇಲೆ ಖಡಕ್ ಸ್ಟೇಟ್ ಮೆಂಟ್ ಎಂದು ಕೇಳುತ್ತೀರಾ.

ಹೌದು ನಟ ಚರಣ್ ರಾಜ್ ರವರು ಖಡಕ್ ಮಾತನಾಡಿದ್ದು ಡಿಬಾಸ್ ರವರ ವಿರುದ್ಧ ಅಲ್ಲ. ಅವರು ಇತ್ತೀಚಿನ ದಿನಗಳಲ್ಲಿ ಜಗ್ಗೇಶ್ ಹಾಗೂ ಡಿಬಾಸ್ ಅಭಿಮಾನಿಗಳ ನಡುವೆ ನಡೆದ ಜಗಳದ ಕುರಿತಂತೆ ಮಾತನಾಡಿ ಜಗ್ಗೇಶ್ ರವರು ದರ್ಶನ್ ರವರು ತಮ್ಮ ಅಭಿಮಾನಿಗಳಿಗೆ ಕುರಿ ಕೋಳಿ ಹಾಕಿಸುತ್ತಾರೆ ಎಂದು ಹೇಳಿದರು. ಅದನ್ನು ಹೇಳುವ ಅಗತ್ಯವಾದರೂ ಏನಿತ್ತು. ದರ್ಶನ್ ರವರು ಕಷ್ಟ ಪಟ್ಟು ಮೇಲೆ ಬಂದವರು.

ಹಾಗಾಗಿ ಅವರ ದುಡಿಮೆಯಲ್ಲಿ ಅವರ ಅಭಿಮಾನಿಗಳಿಗೆ ನೋನ್ ವೆಜ್ ವನ್ನಾದರೂ ಹಾಕಲೀ ಅದು ಅವರಿಗೆ ಬಿಟ್ಟ ವಿಚಾರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪರವಾಗಿ ಮಾತನಾಡಿದರು. ಇನ್ನೂ ಮುಂದುವರೆದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಇರೋವಷ್ಟು ಅಭಿಮಾನಿಗಳನ್ನು ಇಡೀ ಇಂಡಿಯಾದಲ್ಲಿ ನಾನು ನೋಡಿಲ್ಲ. ಅವರಿಗಿರೋವಷ್ಟು ಅಭಿಮಾನಿಗಳು ಸಮೂಹ ಇಡೀ ಇಂಡಿಯಾದಲ್ಲಿ ಯಾರಿಗೂ ಇಲ್ಲ ಎಂದು ಹೇಳಿದರು. ಚರಣ್ ರಾಜ್ ರವರು ಡಿಬಾಸ್ ರವರ ಕುರಿತಂತೆ ಹೇಳಿರುವ ಈ ಮಾತುಗಳ ಕುರಿತಂತೆ ನಿಮ್ಮ ಅಭಿಪ್ರಾಯಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Leave A Reply

Your email address will not be published.